GKVK Diploma Agriculture-ಬೆಂಗಳೂರು ಕೃಷಿ ವಿವಿಯಿಂದ ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

July 7, 2025 | Siddesh
GKVK Diploma Agriculture-ಬೆಂಗಳೂರು ಕೃಷಿ ವಿವಿಯಿಂದ ಡಿಪ್ಲೊಮಾ ಕೃಷಿ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ 2025-25ನೇ ಸಾಲಿಗೆ ಡಿಪ್ಲೊಮಾ ಕೋರ್ಸ(Diploma in Agriculture) ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪ್ರಸ್ತುತ ಈ ಲೇಖನದಲ್ಲಿ ಈ ಕುರಿತು ಅಗತ್ಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಬೆಂಗಳೂರು ಕೃಷಿ ವಿಜ್ನಾನಗಳ ವಿಶ್ವವಿದ್ಯಾಲಯದಿಂದ ಅರ್ಹ ಅಭ್ಯರ್ಥಿಗಳು ಕೃಷಿ ಡಿಪ್ಲೊಮಾ ಕೋರ್ಸ್‌ ಪ್ರವೇಶವನ್ನು(Agriculture Diploma Admission 2025) ಪಡೆಯಲು ನಿಗದಿಪಡಿಸಿದ ಅರ್ಹತಾ ಮಾನದಂಡಗಳು, ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಮುಖ ದಿನಾಂಕ ಹಾಗೂ ಅರ್ಜಿ ನಮೂನೆ ಡೌನ್ಲೊಡ್ ಲಿಂಕ್ ಇನ್ನಿತರೆ ಅಗತ್ಯ ವಿವರವನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: Gruhalakshmi Amount-2025: ಇನ್ನೊಂದು ವಾರದಲ್ಲಿ ಗೃಹಲಕ್ಷ್ಮಿ ಹಣ ಫಲಾನುಭವಿಗಳ ಖಾತೆಗೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್!

Diploma Agriculture Course In Karnataka-ಡಿಪ್ಲೊಮಾ (ಕೃಷಿ) ಕೋರ್ಸ್ ವಿವರಣೆ:

ಇಂದಿನ ಪರಿಸ್ಥಿತಿಯಲ್ಲಿ ನಗರಗಳಿಗೆ ವಲಸೆ ಹೋಗುತ್ತಿರುವ ಯುವ ರೈತಾಪಿ ಸಮುದಾಯವನ್ನು ಆಕರ್ಷಿಸಿ ಮತ್ತೆ ಅವರನ್ನು ವ್ಯವಸಾಯದ ಕಡೆ ಒಲವು ಮೂಡುವಂತೆ ಮಾಡುವುದರ ಸಲುವಾಗಿ ಕರ್ನಾಟಕ ಘನ ಸರ್ಕಾರವು ಎರಡು ವರ್ಷದ ಡಿಪ್ಲೊಮಾ (ಕೃಷಿ) ಯನ್ನು ಪ್ರಾರಂಭ ಮಾಡಲು 2011-2ರಲ್ಲಿ ಎಲ್ಲಾ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಆದೇಶ ಮಾಡಿತ್ತು.

ಅದರಂತೆ ಎರಡು ವರ್ಷದ ಡಿಪ್ಲೊಮಾ (ಕೃಷಿ) ಯನ್ನು ಆಯ್ಕೆ ಮಾಡಿಕೊಂಡು ಕೃಷಿ ಮತ್ತು ಕೃಷಿಯೇತರ ವಿಷಯಗಳಲ್ಲಿ ಪ್ರಾಯೋಗಿಕವಾಗಿ ಸಾಕಷ್ಟು ಅನುಭವವನ್ನು ಪಡೆದಂತಹ 12 ತಂಡಗಳು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಮಂಡ್ಯ ಆವರಣದಿಂದ ಹೊರಹೊಮ್ಮಿದ್ದು,

ಅವರಲ್ಲಿ ಶೇ. 05ರಷ್ಟು ವಿದ್ಯಾರ್ಥಿಗಳು ಲ್ಯಾಟರಲ್ (Lateral Entry) ಪ್ರವೇಶ ಪರೀಕ್ಷೆಯ ಮೂಲಕ ಬಿ.ಎಸ್ಸಿ. (ಆನರ್ಸ್) ಕೃಷಿ ಕೋರ್ಸ್‌ಗೆ ಸೇರಿರುತ್ತಾರೆ. ಅದೇ ರೀತಿ ಹಲವು ವಿದ್ಯಾರ್ಥಿಗಳು ಖಾಸಗಿ ಮತ್ತು ಕೆಲವೊಂದು ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆದಿರುತ್ತಾರೆ. ಇನ್ನುಳಿದ ವಿದ್ಯಾರ್ಥಿಗಳು ತಮ್ಮ ಜಮೀನಿನಲ್ಲೇ ಕೃಷಿಯನ್ನು ವೈಜ್ಞಾನಿಕವಾಗಿ ಕೈಗೊಂಡು ಬೇರೆ ರೈತರಿಗೆ ಮಾದರಿಯಾಗಿದ್ದಾರೆ.

ಇದನ್ನೂ ಓದಿ: PMMVY Yojana-ಮಾತೃವಂದನಾ ಯೋಜನೆಯಡಿ ಮಹಿಳೆಯರಿಗೆ ಸಿಗಲಿದೆ ₹11,000 ರೂ ಸಹಾಯಧನ!

Diploma Agriculture Admission Eligibility Criteria-ಪ್ರವೇಶ ಪಡೆಯಲು ನಿಗದಿಪಡಿಸಿದ ಅರ್ಹತಾ ಮಾನದಂಡಗಳು:

ಕೃಷಿ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಸಲು ಈ ಕೆಳಗೆ ತಿಳಿಸಿರುವ ಅರ್ಹತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ.

1) ಡಿಪ್ಲೊಮಾ (ಕೃಷಿ) ಕೋರ್ಸ್‌ಗೆ ಪ್ರವೇಶ ಕೋರುವ ಅಭ್ಯರ್ಥಿಗಳು ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಕನ್ನಡ ಪಠ್ಯವನ್ನು ಭಾಷೆಯಾಗಿ ಅಭ್ಯಸಿಸಿ ಕನಿಷ್ಠ ಶೇ. 45 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. (ಪ.ಜಾ./ ಪ.ಪಂ./ಪ್ರವರ್ಗ-1ರವರುಗಳಿಗೆ ಕನಿಷ್ಟ ಶೇ. 40 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು)

2) ಪ್ರವೇಶ ಬಯಸುವ ವಿದ್ಯಾರ್ಥಿಯು ದಿನಾಂಕ: 18-07-2025 ರಂದು ಅಭ್ಯರ್ಥಿಯ ವಯಸ್ಸು 19 ವರ್ಷಗಳನ್ನು ಮೀರಿರಬಾರದು.

ಇದನ್ನೂ ಓದಿ: Milk Incentive-9.07 ಲಕ್ಷ ರೈತರ ಖಾತೆಗೆ 2,854 ಕೋಟಿ ಹಾಲಿನ ಪ್ರೋತ್ಸಾಹಧನ!

Diploma Agriculture-ರೈತರ ಮಕ್ಕಳಿಗೆ ಶೇ. 50ರಷ್ಟು ಮೀಸಲಾತಿ:

ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಿಗೆ ಶೇ. 50ರಷ್ಟು ಸೀಟುಗಳನ್ನು ಡಿಪ್ಲೊಮಾ (ಕೃಷಿ) ಪ್ರವೇಶಾತಿಗೆ ಮೀಸಲಿಡಲಾಗಿದೆ ಎಂದು ವಿಶ್ವವಿದ್ಯಾಲಯದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Useful Website Links-ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಪಡೆಯಲು ಉಪಯುಕ್ತ ವೆಬ್ಸೈಟ್ ಲಿಂಕ್:

ಅಧಿಕೃತ ಪ್ರಕಟಣೆ ಪ್ರತಿDownload Now
ಮಾಹಿತಿ ಪುಸ್ತಕDownload Now
ಅರ್ಜಿ ನಮೂನೆ Download Now
ಬೆಂಗಳೂರು ಕೃಷಿ ವಿವಿ ವೆಬ್ಸೈಟ್ Click Here
ಸಹಾಯವಾಣಿ 9449864257

ಇದನ್ನೂ ಓದಿ: Home Subsidy Scheme-ಮೀನುಗಾರಿಕೆ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ!

Diploma Agriculture Admission Last Date-ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಆರಂಭ ದಿನಾಂಕ- 16 ಜೂನ್ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 18 ಜುಲೈ 2025
  • ಡಿ.ಡಿ ತೆಗೆಯಲು ಕೊನೆಯ ದಿನಾಂಕ- 18 ಜುಲೈ 2025
  • ಭರ್ತಿ ಮಾಡಿದ ಅರ್ಜಿಗಳ ಪರಿಶೀಲನೆ- 21 ಜುಲೈ 2025
  • ಅರ್ಹತಾ ಪಟ್ಟಿ ಪ್ರಕಟಣೆ-24 ಜುಲೈ 2025
  • ಅಯ್ಕೆಯಾದ ಅಭ್ಯರ್ಥಿಗಳ ಮೊದಲನೆ ಪಟ್ಟಿ ಪ್ರಕಟಣೆ-14 ಆಗಸ್ಟ್ 2025
  • 2ನೇ ಪಟ್ಟಿ ಪ್ರಕಟಣೆ- 25 ಆಗಸ್ಟ್ 2025
  • 2025-26ರ ಮೊದಲನೇ ಸೆಮಿಸ್ಟರ್ ಪ್ರಾರಂಭ-01 ಸೆಪ್ಟೆಂಬರ್ 2025

ಇದನ್ನೂ ಓದಿ: Kotak Scholarships-2025: ಕೋಟಕ್ ಕನ್ಯಾ ಸ್ಕಾಲರ್‌ಶಿಪ್ ಪಡೆಯಲು ಅರ್ಜಿ ಆಹ್ವಾನ!

gkvk agri diploma

ಇದನ್ನೂ ಓದಿ: PMFME Scheme-ಕಿರು ಆಹಾರ ಸಂಸ್ಕರಣ ಫಲಾನುಭವಿಗಳಿಗೆ 493 ಕೋಟಿ ರೂ. ಬಿಡುಗಡೆ!

Application Fee Pay Method-ಅರ್ಜಿ ಶುಲ್ಕ ಪಾವತಿ ವಿಧಾನ:

ವಿದ್ಯಾರ್ಥಿಗಳು ಅರ್ಜಿ ಶುಲ್ಕವನ್ನು ಡಿ.ಡಿ ಮೂಲಕ ಪಾವತಿ ಮಾಡಬೇಕಾಗುತ್ತದೆ ಇದಕ್ಕಾಗಿ ಡಿ.ಡಿ ತೆಗೆಯುವ ವಿಳಾಸದ ವಿವರ: "Comptroller, UAS Bengalore" ವಿದ್ಯಾರ್ಥಿಗಳು ಡಿ,ಡಿಯನ್ನು ಕಡ್ಡಾಯವಾಗಿ ಯಾವುದೇ SBI ಶಾಖೆಯಲಿ ತೆಗೆಯುವಂತೆ ಸೂಚನೆ ನೀಡಲಾಗಿದೆ.

How to Apply-ಅರ್ಜಿ ಸಲ್ಲಿಸುವ ವಿಧಾನ:

ಕೃಷಿ ಡಿಪ್ಲೊಮಾ ಪ್ರವೇಶ ಪಡೆಯಲು ಅಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಡಿಡಿಯನ್ನು ಲಗತ್ತಿಸಿ "ಕುಲಸಚಿವರು, ಕೃಷಿ ವಿಶ್ವವಿದ್ಯಾಲಯ ಜಿ.ಕೆ.ವಿ.ಕೆ ಬೆಂಗಳೂರು-560065 ಇಲ್ಲಿಗೆ ದಿನಾಂಕ: 18-07-2025 (ಸಂಜೆ 04.00 ಗಂಟೆ) ಒಳಗೆ ತಲುಪುವಂತೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿಯನ್ನು ಕಳುಹಿಸಬೇಕು.

Application Fee-ಪ್ರವೇಶ ಪಡೆಯಲು ಅರ್ಜಿ ಶುಲ್ಕದ ವಿವರ ಹೀಗಿದೆ:

ಸಾಮಾನ್ಯ ವರ್ಗದ ವಿದ್ಯಾರ್ಥಿಗೆ- ರೂ. 500/-
ಪ.ಜಾ./ಪ.ಪಂ./ಪ್ರವರ್ಗದ ವಿದ್ಯಾರ್ಥಿಗೆ- ರೂ. 250/-

Required Documents For Diploma admission 2025-ಅರ್ಜಿ ಸಲ್ಲಿಸಲು ದಾಖಲೆಗಳು:

  • ಅಭ್ಯರ್ಥಿಯ ಆಧಾರ್ ಕಾರ್ಡ
  • ಅರ್ಜಿದಾರ ವಿದ್ಯಾರ್ಥಿಯು ರೈತರ ಕುಟುಂಬಕ್ಕೆ ಸೇರಿದರೆ ವ್ಯವಸಾಯ ಪ್ರಮಾಣ ಪತ್ರ
  • ವಿದ್ಯಾರ್ಥಿಯ ಪೋಟೋ
  • SSLC ಅಂಕಪಟ್ಟಿ ಪ್ರತಿ
  • ಕನ್ನಡ ಮತ್ತು ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ

Diploma Agriculture Selection Process-ಕೃಷಿ ಡಿಪ್ಲೋಮಾ ಪ್ರವೇಶಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ವಿಧಾನ:

ಇದರ ಕುರಿತು ಅಧಿಕೃತ ಪ್ರಕಟಣೆಯಲ್ಲಿ ಸರ್ಕಾರದ ಆದೇಶಗಳ ಅನ್ವಯ ಸೀಟುಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಉಲ್ಲೇಖಿಸಲಾಗಿದ್ದು ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ರೋಸ್ಟರ್ ಪದ್ದತಿಯನ್ನು ಅಳಪಡಿಸಿ, ಪ್ರವೇಶಕ್ಕೆ ಆಯ್ಕೆ ಮಾಡಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಹಾಗೂ ಇನ್ನಿತರೆ ಮಾಹಿತಿಯನ್ನು ವೆಬ್‌ಸೈಟ್ ಮುಖಾಂತರ ತಿಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Important Notice-ಅಭ್ಯರ್ಥಿಗಳಿಗೆ ವಿವಿಯ ಮುಖ್ಯ ಸೂಚನೆಗಳು:

1) ಅಭ್ಯರ್ಥಿಯು ತನ್ನ ಅರ್ಜಿಯಲ್ಲಿ ಒದಗಿಸಿರುವ ಮಾಹಿತಿ/ವಿವರಗಳೇ ಪ್ರವೇಶ ಪ್ರಕ್ರಿಯೆ ನಿರ್ಧರಿಸಲು ಅಂತಿಮವಾಗಿರುತ್ತದೆ.

2) ಈ ಕಛೇರಿಗೆ ಒಮ್ಮೆ ಅರ್ಜಿಗಳು ತಲುಪಿದ ನಂತರ ಯಾವುದೇ ಹೆಚ್ಚಿನ ದಾಖಲೆಗಳನ್ನು/ಪ್ರಮಾಣಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.

3) ಮೀಸಲಾತಿಯನ್ನು ಕೋರಿ ಸಲ್ಲಿಸುವ ಎಲ್ಲಾ ಪ್ರಮಾಣಪತ್ರಗಳು, ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಂದರೆ ದಿನಾಂಕ: 18.07.2025 ಅಥವಾ ಅದರ ಹಿಂದಿನ ದಿನಾಂಕಗಳಲ್ಲಿ ಪಡೆದಿರಬೇಕು.

4) ಅಭ್ಯರ್ಥಿಯು/ಪೋಷಕರು ತಮ್ಮ ಅರ್ಜಿ ನಮೂನೆಯಲ್ಲಿ ಅಥವಾ ಸಲ್ಲಿಸಿರುವ ಇತರ ಯಾವುದೇ ದಾಖಲೆಗಳಲ್ಲಿ ನೀಡಿರುವ ಮಾಹಿತಿಯು ತಪ್ಪಾಗಿದೆ ಎಂದು ಕಂಡುಬಂದಲ್ಲಿ, ಅಂತಹ ಅಭ್ಯರ್ಥಿಯ ಪ್ರವೇಶವನ್ನು ಆತನ/ಆಕೆಯ ಕೋರ್ಸ್‌ ಅವಧಿಯ ಯಾವುದೇ ಸಮಯದಲ್ಲಾದರೂ ಅಥವಾ ಡಿಪ್ಲೊಮಾ ಪಡೆದ ನಂತರವೂ ರದ್ದುಗೊಳಿಸಲಾಗುತ್ತದೆ ಹಾಗೂ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

For More Infomation-ಹೆಚ್ಚಿನ ಮಾಹಿತಿಯನ್ನು ಪಡೆಯಲು:

Diploma Agriculture Helpline-ಕೃಷಿ ಕಾಲೇಜು, ವಿ.ಸಿ ಫಾರಂ ಮಂಡ್ಯ ಸಂಪರ್ಕ ಸಂಖ್ಯೆ- 9449864257
Gkvk Website-ಬೆಂಗಳೂರು ಕೃಷಿ ವಿವಿ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: