Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsFID number: ಬೆಳೆ ವಿಮೆ ,ಬೆಳೆ ಸಾಲ ಪಡೆಯಲು ರೈತರಿಗೆ ಕಡ್ಡಾಯ ಈ ಐಡಿ! ಇದನ್ನು...

FID number: ಬೆಳೆ ವಿಮೆ ,ಬೆಳೆ ಸಾಲ ಪಡೆಯಲು ರೈತರಿಗೆ ಕಡ್ಡಾಯ ಈ ಐಡಿ! ಇದನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಪಡೆಯುವುದು?

ಬೆಳೆ ವಿಮೆಗೆ ಅರ್ಜಿ ಸಲ್ಲಿಸಲು ಮತ್ತು ಬೆಳೆ ಸಾಲ ಪಡೆಯಲು ಹಾಗೂ ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳಿಂದ ಯಾವುದೇ ಸರಕಾರಿ ಸೌಲಭ್ಯ ಪಡೆಯಲು ಪ್ರತಿಯೊಬ್ಬ ರೈತರು FID ನಂಬರ್ ಅನ್ನು ಅಗತ್ಯವಾಗಿ ಒದಗಿಸಬೇಕಾಗುತ್ತದೆ. ಏನಿದು FID ಸಂಖ್ಯೆ? ಎಲ್ಲಿ ಪಡೆಯಬೇಕು? ಫ್ರೂಟ್ಸ್(FRUITS) ತಂತ್ರಾಂಶದ ಮೂಲಕ FID ನಂಬರ್ ಪಡೆಯುವುದ್ ಹೇಗೆ?  FID ನಂಬರ್ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ರಾಜ್ಯದ ಕೃಷಿ ಇಲಾಖೆಯಿಂದ ರೈತರ ಜಮೀನಿನ ವಿವರ ಮತ್ತು ಬ್ಯಾಂಕ್ ಖಾತೆಯ ವಿವರವನ್ನು ಡಿಜಿಟಲ್ ತಂತ್ರಾಂಶದಲ್ಲಿ ಸಂಗ್ರಹಣೆ ಮಾಡಲಾಗಿದ್ದು, ಪ್ರತಿಯೊಬ್ಬರ ರೈತರಿಗೂ ವಿವಿಧ ಬಗ್ಗೆಯ ಗುರುತಿನ ಸಂಖ್ಯೆಯನ್ನು(FID) ಸಹ ನೀಡಲಾಗಿರುತ್ತದೆ.

ಈ ತಂತ್ರಾಂಶಕ್ಕೆ ಪ್ರೂಟ್ಸ್ ಎಂದು ಕರೆಯಲಾಗುತ್ತದೆ “FRUITS”ಅಂದರೆ Farmer Registration and Unified beneficiary InformaTion System ಎಂದರ್ಥ ಈ ತಂತ್ರಾಂಶದಲ್ಲಿ ಒಬ್ಬ ರೈತ ಹೆಸರಿನಲ್ಲಿರುವ ಎಲ್ಲಾ ಜಮೀನಿನ ಸರ್ವೆ ನಂಬರ್ ವಿವರ ಮತ್ತು ಅವರ ಬ್ಯಾಂಕ್ ಖಾತೆಯ ವಿವರವನ್ನು ದಾಖಲಾತಿ ಮಾಡಿದಾಗ “FID” ನಂಬರ್ ಸೃಜನೆಯಾಗುತ್ತದೆ.

FID number lick- ನಿಮ್ಮ ಮೊಬೈಲ್ ನಲ್ಲಿ FID ನಂಬರ್ ಪಡೆಯುವ ವಿಧಾನ:

ಈಗಾಗಲೇ ರಾಜ್ಯ ಶೇ 90 ಕ್ಕಿಂತ ಹೆಚ್ಚಿನ ರೈತರ ವಿವರವು ಪ್ರೂಟ್ಸ್ ತಂತ್ರಾಂಶದಲ್ಲಿ ನೋಂದಾವಣೆಯಾಗಿದ್ದು ಇವರಿಗೆ “FID number” ಸೃಜನೆಯಾಗುತ್ತದೆ ಇವರು ತಮ್ಮ ಈ ನಂಬರ್ ಅಲ್ಲಿ ತಿಳಿದುಕೊಳ್ಳಲು ಈ ಲಿಂಕ್ https://fruitspmk.karnataka.gov.in/MISReport/GetDetailsByAadhaar.aspx ಮೇಲೆ ಕ್ಲಿಕ್ ಮಾಡಿ ತಮ್ಮ 12 ಅಂಕಿಯ ಆಧಾರ್ ನಂಬರ್ ನಮೂದಿಸಿ “Search” ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ತಮ್ಮ “FID” ಸಂಖ್ಯೆ ಗೋಚರಿಸುತ್ತದೆ.

FID ನಂಬರ್ ಯಾವುದಕ್ಕೆ ಬೇಕಾಗುತ್ತದೆ?

ಈ ಸಂಖ್ಯೆಯನ್ನು ಬೆಳೆ ವಿಮೆ ಅರ್ಜಿ ಸಲ್ಲಿಸಲು, ಬೆಳೆ ಸಾಲ ವಿತರಿಸಲು, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಕೆಯಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಾಗಿ ಒದಗಿಸಬೇಕಾಗುತ್ತದೆ.

FID ನಂಬರ್ ನ ಇತರೆ ಮಾಹಿತಿ ಪಡೆಯುವ ವಿಧಾನ:

ಈ FID ನಂಬರ್ ನಲ್ಲಿ ನಮೂದಿಸಿರುವ ಜಮೀನಿನ ಸರ್ವೆ ನಂಬರ್ ಯಾವುವು? ಬ್ಯಾಂಕ್ ಖಾತೆ ವಿವರ ಮತ್ತು ರೈತರ ಹೆಸರು ವಿಳಾಸ ಇತ್ಯಾದಿ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ವಿಧಾನ ಅನುಸರಿಸಿ.

ಈ ಲಿಂಕ್ https://fruits.karnataka.gov.in/OnlineUserLogin.aspx ಮೇಲೆ ಕ್ಲಿಕ್ ಮಾಡಿ ಅರ್ಜಿದಾರರ ಮೊಬೈಲ್ ಸಂಖ್ಯೆಯ ಮೂಲಕ ನೊಂದಣಿ ಮಾಡಿಕೊಂಡು ಅವರ ಅಧಾರ್ ನಂಬರ್ ಮತ್ತು ಆಧಾರ್ ನಲ್ಲಿರುವಂತೆ ಹೆಸರನ್ನು ನಮೂದಿಸಿ ಅವರ ಹೆಸರಿನಲ್ಲಿ ದಾಖಲಿಸಲಾದ “FID” ವಿವರವನ್ನು ತಿಳಿಯಬವುದು.

FIDಗೆ ಹೊಸ ಅರ್ಜಿ ಮತ್ತು ಬಿಟ್ಟು ಹೊದ ಸರ್ವೆ ನಂಬರ್ ಸೇರಿಸಲು ಎಲ್ಲಿ ಸಲ್ಲಿಸಬೇಕು?

ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರದಲ್ಲಿ(RSK) ಹೊಸ ಅರ್ಜಿ ಮತ್ತು FID ಸಂಖ್ಯೆಯಲ್ಲಿ ಬಿಟ್ಟಿ ಹೋಗಿರುವ ಸರ್ವೆ ನಂಬರ್ ಗಳನ್ನು ಸೇರ್ಪಡೆ ಮಾಡಿಕೊಳ್ಳಬವುದು. 

ಇದನ್ನೂ ಓದಿ: Electric bill Details: ಒಂದು ವರ್ಷದಲ್ಲಿ ನಿಮ್ಮ ಮನೆಯ ವಿದ್ಯುತ್ ಎಷ್ಟು ಯುನಿಟ್ ಬಳಕೆಯಾಗಿದೆ ಎಂದು ಹೇಗೆ ತಿಳಿಯಬವುದು? ಇಲ್ಲಿದೆ ವೆಬ್ಸೈಟ್ ಲಿಂಕ್

ಫ್ರೂಟ್ಸ್(FRUITS) ತಂತ್ರಾಶದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ:

Fruits/FID number: ಫ್ರೂಟ್ಸ್ ಎಂದರೇನು ಮತ್ತು ಅದನ್ನು ಹೇಗೆ ಬಳಸಲಾಗುತ್ತದೆ?

ಫ್ರೂಟ್ಸ್ (ರೈತ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ – Farmer Registration & Unified Beneficiary InformaTion System – FRUITS) ಅಂತರ್ಜಾಲ ಆಧಾರಿತ ತಂತ್ರಾಂಶಯಾಗಿದೆ. ಇದು ರೈತರಿಗೆ ರಾಜ್ಯ ಸರ್ಕಾರದಿಂದ ಸವಲತ್ತುಗಳನ್ನು ಪಡೆಯಲು ಆಸಕ್ತಿಯಿರುವ ರೈತರು / ವ್ಯಕ್ತಿಯ ನೋಂದಣಿಗೆ ಸಹಕಾರಿಯಾಗಿದೆ. ಅಲ್ಲದೇ ಫಲಾನುಭವಿಗಳು ಪಡೆಯುವ ಪ್ರಯೋಜನಗಳ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಲಾಗುತ್ತದೆ ಆದ್ದರಿಂದ ಇದು ರೈತರು, ಭೂಮಿ ಮತ್ತು ಅವರಿಗೆ ವಿಸ್ತರಿಸಿದ ಪ್ರಯೋಜನಗಳ ಸಮಗ್ರ ವಿವರಗಳನ್ನೊಳಗೊಂಡ ಏಕೀಕೃತ ದತ್ತಾಂಶವಾಗಿರುತ್ತದೆ.

ರೈತರು ಸ್ವಯಂ ನೋಂದಾಯಿಸಿಕೊಳ್ಳಬಹುದೇ?

ಹೌದು. ಜಮೀನು ಹೊಂದಿರುವವವರು ಈ ಲಿಂಕ್ https://fruits.karnataka.gov.in/OnlineUserLogin.aspx ಮೇಲೆ ಕ್ಲಿಕ್ ಮಾಡಿ ಮುಖಪುಟದ ಎಡಬದಿಯಲ್ಲಿ ಕಾಣುವ  “ನಾಗರೀಕ ಪ್ರವೇಶ (Citizen Login)”  ಆಯ್ಕೆಯಗೆ ಭೇಟಿ ನೀಡಿ ಅವಶ್ಯ ದಾಖಲೆಗಳನ್ನು ಒದಗಿಸಿ ಸ್ವಯಂ ನೋಂದಣಿ ಮಾಡುವ ಮೂಲಕ ನೋಂದಾಯಿಸಿಕೊಳ್ಳಬಹುದು. ಆಧಾರ್ ಪ್ರಕಾರ ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಿ ಮ್ನಂತರ. ತಮ್ಮ ಹೆಸರಿನಲ್ಲಿರುವ ಜಮೀನಿನ ವಿವರಗಳನ್ನು ಭೂಮಿ ತಂತ್ರಾಂಶದ ಮೂಲಕ ಪಡೆದು ದಾಖಲಿಸಬೇಕಾಗುತ್ತದೆ ಮತ್ತು ಅನುಮೋದನಾ ಇಲಾಖೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಕ್ಕೆ ಸಂಬಂಧಪಟ್ಟ ಅನುಮೋದನಾ ಅಧಿಕಾರಿಯು ಅನುಮೋದಿಸಿದ ನಂತರ, ನೋಂದಣಿ ಪೂರ್ಣಗೊಳ್ಳುತ್ತದೆ. ಮೊಬೈಲ್ ಸಂಖ್ಯೆಯನ್ನು ಬಳಕೆದಾರರ ID ಯಾಗಿ ಬಳಸಬೇಕು. ಪ್ರವೇಶ (Login) ಒಟಿಪಿ ದೃಢೀಕರಣ ಆಧರಿಸಿದೆ; ಒಟಿಪಿಯನ್ನು ಆಧಾರ್ ಆಧಾರಿತ ಮೊಬೈಲ್ಗೆ ಕಳುಹಿಸಲಾಗುತ್ತದೆ.

FID number:- ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಲು ಬೇಕಾಗುವ ದಾಖಲಾತಿಗಳು:

1. ಆಧಾರ್ ಕಾರ್ಡ
2. ಬ್ಯಾಂಕ್ ಪಾಸ್ ಬುಕ್
3. ಪಹಣಿ/ಉತಾರ್/RTC
4. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪ್ರಮಾಣ ಪತ್ರ(ಈ ವರ್ಗಕ್ಕೆ ಸೇರಿ ರೈತರಿಗೆ ಮಾತ್ರ)

Joint owner: ಜಮೀನು ಜಂಟಿ ಮಾಲೀಕತ್ವದ ರೈತರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಬಹುದೇ?

ನೋಂದಣಿ ಮಾಡಿಕೊಳ್ಳಬವುದು, ಜಂಟಿ ಮಾಲೀಕತ್ವದ ದಾಖಲೆಗಳನ್ನು (RTC) ಭೂಮಿಯಲ್ಲಿ ಏಕ ದಾಖಲೆಯಾಗಿ ಪರಿಗಣಿಸಲಾಗುತ್ತದೆ. ಆದಾಗ್ಯೂ, ಸರ್ಕಾರದ ಸವಲತ್ತುಗಳನ್ನು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಜಂಟಿ ಮಾಲೀಕರು ಈ ಕೆಳಗಿನ ಮೂರು ಪ್ರಕಾರಗಳಲ್ಲಿ ಯಾವುದಾದರೂ ಒಂದು ಪ್ರಕಾರದಲ್ಲಿ ನೋಂದಾಯಿಸಿಕೊಳ್ಳಲು ಫ್ರೂಟ್ಸ್ ತಂತ್ರಾಂಶದಲ್ಲಿ ಅವಕಾಶ ಕಲ್ಪಿಸಲಾಗಿದೆ.
(A) ಜಂಟಿ ಮಾಲೀಕರು ಒಟ್ಟಾಗಿ ನೋಂದಾಯಿಸಬಹುದು, ಹೀಗೆ ನೋಂದಾಯಿಸಿದಲ್ಲಿ ಒಬ್ಬರ ಹೆಸರಿನಲ್ಲಿ ನೋಂದಾಯಿಸಿಕೊಳ್ಳಬಹುದು.
(B) ಸ್ವಯಂ ಘೋಷಣೆಯೊಂದಿಗೆ, ಘೋಷಣೆಯ ಪ್ರಕಾರ ಪ್ರತಿ ಮಾಲೀಕರಿಗೆ ಭೂ ವ್ಯಾಪ್ತಿಯನ್ನು ದಾಖಲಿಸಿ ಎಲ್ಲಾ ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು
(C) ಪ್ರತಿ ಮಾಲಿಕರಿಗೆ ಸಮಾನ ಪಾಲು ಹೊಂದಿರುವಂತೆ ಭೂ ವ್ಯಾಪ್ತಿಯನ್ನು ದಾಖಲಿಸಿ ಪ್ರತಿ ಒಬ್ಬ ಜಂಟಿ ಮಾಲೀಕರು ಪ್ರತ್ಯೇಕವಾಗಿ ನೋಂದಾಯಿಸಿಕೊಳ್ಳಬಹುದು.

ಇದನ್ನೂ ಓದಿ: Annabhagya amount 2023: ಅನ್ನಭಾಗ್ಯ ಯೋಜನೆ ಪರಿಷ್ಕೃತ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ.

Most Popular

Latest Articles

- Advertisment -

Related Articles