- Advertisment -
HomeFarm machineryNHM scheme- ತೋಟಗಾರಿಕೆ ಇಲಾಖೆಯಿಂದ ಸಣ್ಣ ಟ್ರ್ಯಾಕ್ಟರ್, ಡ್ರಾಗನ್ ಪ್ರೂಟ್, ಈರುಳ್ಳಿ ಶೇಖರಣಾ ಘಟಕಕ್ಕೆ ಸಹಾಯಧನ...

NHM scheme- ತೋಟಗಾರಿಕೆ ಇಲಾಖೆಯಿಂದ ಸಣ್ಣ ಟ್ರ್ಯಾಕ್ಟರ್, ಡ್ರಾಗನ್ ಪ್ರೂಟ್, ಈರುಳ್ಳಿ ಶೇಖರಣಾ ಘಟಕಕ್ಕೆ ಸಹಾಯಧನ ಪಡೆಯಲು ಅರ್ಜಿ ಅಹ್ವಾನ!

Last updated on October 1st, 2024 at 05:54 am

ಸೇಡಂ: ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್‌(NHM scheme) ಯೋಜನೆಯಡಿ ಸಹಾಯಧನಕ್ಕಾಗಿ ರೈತರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಈ ಕುರಿತು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆ ಹೊರಡಿಸಿದ್ದಾರೆ. 

ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ವಿವಿಧ ಸೌಲಭ್ಯಗಳನ್ನು/ಸವಲತ್ತನ್ನು ಹೊಂದಲು ಅರ್ಥಿಕವಾಗಿ ಸಹಾಯ ಮಾಡುವ ದೇಸೆಯಲ್ಲಿ ಮತ್ತು ತೋಟಗಾರಿಕೆ ಬೆಳೆಗೆ ಉತ್ತೇಜನ ನೀಡಲು ನಮ್ಮ ರಾಜ್ಯದಲ್ಲಿ 2005 ರಿಂದ “ರಾಷ್ಟ್ರೀಯ ತೋಟಗಾರಿಕೆ ಮಿಷನ್‌”(NHM-National Horticulture mission) ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದನ್ನೂ ಓದಿ: Pension amount Status check- 77 ಲಕ್ಷ ನಾಗರಿಕರಿಗೆ ಸೆಪ್ಟೆಂಬರ್ ತಿಂಗಳ ಪಿಂಚಣಿ ಹಣ ಜಮಾ! ನಿಮಗೆ ಬಂತಾ ಚೆಕ್ ಮಾಡಿ.

ಈ ಯೋಜನೆಯಡಿ ಯಾವೆಲ್ಲ ಕಾಮಗಾರಿಗಳನ್ನು ಕೈಗೊಳ್ಳಬವುದು:

ವಿವಿಧ ಬೆಳೆ ಹೊಸ ಪ್ರದೇಶ ವಿಸ್ತರಣಿ, ಡ್ರಾಗನ್ ಪ್ರೂಟ್ ಬೆಳೆಯಲು ಸಹಾಯಧನ, ಹೈಬ್ರಿಡ್ ತರಕಾರಿ ಮತ್ತು ಹೂವಿನ ಬೆಳೆಗಳು, ಸಣ್ಣ ಟ್ರ್ಯಾಕ್ಟರ್, ಪ್ಲಾಸ್ಟಿಕ್ ಮಲ್ಟಿಂಗ್ ಮತ್ತು ಪ್ಯಾಕ್ ಹೌಸ್, ಈರುಳ್ಳಿ ಶೇಖರಣಾ ಘಟಕಗಳಿಗೆ ಸಹಾಯಧನ ಪಡೆಯಬವುದು ಇದಲ್ಲದೆ ನೀರು ಶೇಖರಣ ಘಟಕ/ಕೃಷಿ ಹೊಂಡ ಇತ್ಯಾದಿ ಕಾಮಗಾರಿಗಳನ್ನು ಅನುಷ್ಥಾನ ಮಾಡಲು ಅವಕಾಶವಿರುತ್ತದೆ.

ಯಾವೆಲ್ಲ ಜಿಲ್ಲೆಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ?

ಅನುದಾನ ಲಭ್ಯತೆ ಅನುಸಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಈ ಯೋಜನೆಯ ಅನುಷ್ಥಾನ ಆರಂಭವಿದ್ದು ಅರ್ಹ ರೈತರು ನಿಮ್ಮ ತಾಲ್ಲೂಕಿನ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿ ಭೇಟಿ ಮಾಡಿ ಅರ್ಜಿ ಸಲ್ಲಿಸಬವುದು, ಪ್ರಸ್ತುತ ಸೇಡಂ ತಾಲ್ಲೂಕಿನಲ್ಲಿ ಆಸಕ್ತ ರೈತರು ಅರ್ಜಿ ಸಲ್ಲಿಸಬಹುದು.  ಅರ್ಜಿ ಸಲ್ಲಿಸಲು 22 ಸೆಪ್ಟೆಂಬರ್ 2023  ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ: 8250939263, 7619319331, 7899994358 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.

ಇದನ್ನೂ ಓದಿ: Karnataka guarantee schemes: ಈ ಪಟ್ಟಿಯಲ್ಲಿ ಹೆಸರಿಲ್ಲದವರಿಗಿಲ್ಲ ಅನ್ನಭಾಗ್ಯ,ಗೃಹಲಕ್ಷ್ಮಿ ಹಣ! ಇಲ್ಲಿದೆ ಪರಿಷ್ಕೃತ ರೇಷನ್ ಕಾರ್ಡ ಪಟ್ಟಿ.

ಅಗತ್ಯ ದಾಖಲಾತಿ ಮಾಹಿತಿ:

1)ಅರ್ಜಿದಾರರ ಅಧಾರ್ ಕಾರ್ಡ ಪ್ರತಿ.
2)ಬ್ಯಾಂಕ್ ಪಾಸ್ ಬುಕ್ ಪ್ರತಿ.
3)ಪೋಟೋ.
4)ಪಹಣಿ/ಉತಾರ್/RTC.
5)ರೇಷನ್ ಕಾರ್ಡ ಪ್ರತಿ.
6)ಜಂಟಿ ಮಾಲೀಕರ ಖಾತೆಯಿದಲ್ಲಿ ಎಲ್ಲಾ ಮಾಲೀಕರ ಒಪ್ಪಿಗೆ ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಈ ಯೋಜನೆಯಡಿ ಅರ್ಜಿ ಸಲ್ಲಿಸಲು ಆಸಕ್ತ ರೈತರು ನಿಮ್ಮ ತಾಲ್ಲೂಕಿನ ತೋಟಗಾರಿಕೆ ಇಲಾಖೆಯ ಹಿರಿಯ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಭೇಟಿ ಮಾಡಿ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬವುದು.

ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ಲಿಂಕ್ ಗಳು:

ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಮಾರ್ಗಸೂಚಿ/National Horticulture mission guidelines: Click here

ತೋಟಗಾರಿಕೆ ಇಲಾಖೆ ವೆಬ್ಸೈಟ್ ಲಿಂಕ್: Click here 

ಸಹಾಯಧನದಲ್ಲಿ ಎಲ್ಲಾ ಬಗ್ಗೆಯ ಕೃಷಿ ಯಂತ್ರೋಪಕರಣಗಳ ಖರೀದಿಗೆ ಇಂದೇ ಸಂಪರ್ಕಿಸಿ: 9901876682(ಕಾರ್ತಿಕ್, ಈಸೀ ಲೈಫ್ ಎಂಟರ್ ಪ್ರೈಸಸ್, ಉಡುಪಿ)

- Advertisment -
LATEST ARTICLES

Related Articles

- Advertisment -

Most Popular

- Advertisment -