HomeFarm machinerySolar pump set subsidy- ಸೋಲಾರ್ ಪಂಪ್ ಸೆಟ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಲು...

Solar pump set subsidy- ಸೋಲಾರ್ ಪಂಪ್ ಸೆಟ್ ಮತ್ತು ಯಂತ್ರೋಪಕರಣ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನ!

ಮೈಸೂರು: ತೋಟಗಾರಿಕೆ ಇಲಾಖೆಯಿಂದ ರೈತರು ಸೋಲಾರ್ ಪಂಪ್ ಸೆಟ್(Solar pump set) ಮತ್ತು ಯಂತ್ರೋಪಕರಣ ಖರೀದಿ ಮಾಡಲು ಸಹಾಯಧನ ಪಡೆಯಲು ಅರ್ಜಿ ಆಹ್ವಾನ ಮಾಡಲಾಗಿದೆ.

2023-24ನೇ ಸಾಲಿನ ಯೋಜನೆಯ ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಾಂತ್ರೀಕರಣ ಕಾರ್ಯಕ್ರಮವನ್ನು  ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಯಂತ್ರೋಪಕರಣಗಳನ್ನು ಖರೀದಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ.50 ರಂತೆ ಸಹಾಯಧನವನ್ನು ಹಾಗೂ ಸೋಲಾರ್ ಪಂಪ್‌ ಸೆಟ್ ಖರೀದಿಸಲು ಸಾಮಾನ್ಯ ವರ್ಗದವರಿಗೆ ಶೇ.40 ರಂತೆ ಹಾಗೂ ಸಣ್ಣ, ಅತಿ ಸಣ್ಣ, ಮತ್ತು ಸಾಮಾನ್ಯ ಮಹಿಳಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 50 ರಂತೆ ಸಹಾಯಧನವನ್ನು ನೀಡಲಾಗುತ್ತಿದೆ.

ಸೌರಶಕ್ತಿ ಆಧರಿತ 3HP ಸೋಲಾರ್ ಪಂಪ್‌ಸೆಟ್‌ಗಳಿಗೆ ಘಟಕ ವೆಚ್ಚ 2 ಲಕ್ಷ ಗಳ ಶೇ.50 ರಂತೆ 1 ಲಕ್ಷಗಳಿಗೆ ಮಿತಗೊಳಿಸಿ ಸಹಾಯಧನ ನೀಡಲಾಗುವುದು 3HP ಗಿಂತ ಮೇಲ್ಪಟ್ಟ ಸೋಲಾರ್‌ ಪಂಪ್‌ಸೆಟ್‌ಗಳಿಗೆ ಘಟಕ ವೆಚ್ಚ 3 ಲಕ್ಷಗಳನ್ನು ಶೇ.50 ರಂತೆ 1.50 ಲಕ್ಷಗಳಿಗೆ ಮಿತಗೊಳಿಸಿ ಸಹಾಯಧನವನ್ನು ನೀಡಲಾಗುವುದು, ರೈತರು ಅನುಮೋದಿತ ಸಂಸ್ಥೆಯಿಂದ ಸೋಲಾರ್ ಪಂಪ್‌ ಸೆಟ್‌ಗಳನ್ನು ಖರೀದಿಸುವುದು ಕಡ್ಡಾಯವಾಗಿರುತ್ತದೆ. 

ಇದನ್ನೂ ಓದಿ: Kisan credit card loan-2023: ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಬಡ್ಡಿ ರಿಯಾಯಿತಿಯಲ್ಲಿ  ರೂ 3 ಲಕ್ಷದವರೆಗೆ ಸಾಲ ಸೌಲಭ್ಯ!

ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿಲ್ಲಾ ಪಂಚಾಯತ್, ಮೈಸೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 0821- 2430450, ಹೆಚ್.ಡಿ.ಕೋಟೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ-08228-255261, ಹುಣಸೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08222-252447, ಕೆ. ಆರ್ ನಗರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08223-262791, on ತಾಲೂಕು ಹಿರಿಯ ಸಹಾಯಕ ತೋಟ ಗಾರಿಕೆ ನಿರ್ದೇಶಕರ ದೂ.ಸಂ: 08221- 226201, ಪಿರಿಯಾಪಟ್ಟಣ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇ ಶಕರ ದೂ.ಸಂ: 08223-273535, ಟಿ. ನರಸೀಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ದೂ.ಸಂ: 08227-260086 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾ ಯತ್‌ನ ತೋಟಗಾರಿಕೆ ಉಪನಿರ್ದೇ ಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತರೆ ಜಿಲ್ಲೆಯವರು ಎಲ್ಲಿ ಅರ್ಜಿ ಸಲ್ಲಿಸಬೇಕು?

ಮೈಸೂರು ಜಿಲ್ಲೆಯನ್ನು ಹೊರತುಪಡಿಸಿ ಇತರೆ ಜಿಲ್ಲೆಯ ರೈತರು ನಿಮ್ಮ ತಾಲ್ಲೂಕಿನ ಹಿರಿಯ ತೋಟಕಾರಿಗೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಭೇಟಿ ಮಾಡಿ ಯೋಜನೆಯ ಲಭ್ಯತೆಯನ್ನು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಬವುದು.

ಗಮನಿಸಿ: ಅನುದಾನ ಲಭ್ಯತೆ ಆಧಾರದ ಮೇಲೆ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.

ಇದನ್ನೂ ಓದಿ: ಆಹಾರ ಇಲಾಖೆಯಿಂದ ಸೆಪ್ಟೆಂಬರ್ ತಿಂಗಳ ರದ್ದಾದ ರೇಷನ್ ಕಾರ್ಡ ಪಟ್ಟಿ ಬಿಡುಗಡೆ! ನಿಮ್ಮ ಜಿಲ್ಲೆಯ ಪಟ್ಟಿಯಲ್ಲಿರುವ ಹೆಸರನ್ನು ಚೆಕ್ ಮಾಡಿ.

ಅಗತ್ಯ ದಾಖಲಾತಿಗಳೇನು?

1)ಆಧಾರ್ ಕಾರ್ಡ ಪ್ರತಿ
2)ಬ್ಯಾಂಕ್ ಪಾಸ್ ಬುಕ್ ಪ್ರತಿ
3)FID ನಂಬರ್
4)ಪಹಣಿ/ಉತಾರ್/RTC
5)ಪೋಟೋ.
6)ಜಾತಿ ಮತ್ತು ಆಧಾಯ ಪ್ರಮಾಣ ಪತ್ರ.

Most Popular

Latest Articles

Related Articles