Breaking News:
LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ! Disabled pension scheme-2024: ವಿಕಲಚೇತನರ ಆರೈಕೆದಾರರಿಗೆ ಪ್ರತಿ ತಿಂಗಳಿಗೆ ರೂ 1,000! Raagi kharidi kendra-ರೈತರಿಗೆ ಭರ್ಜರಿ ಸಿಹಿ ಸುದ್ದಿ: ರೂ. 4290 ರಂತೆ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ!
HomeNew postsNadakacheri- ನಾಡಕಚೇರಿಯಲ್ಲಿ ಯಾವೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು? ಎಷ್ಟು ಶುಲ್ಕ ಪಾವತಿ ಮಾಡಬೇಕು?

Nadakacheri- ನಾಡಕಚೇರಿಯಲ್ಲಿ ಯಾವೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು? ಎಷ್ಟು ಶುಲ್ಕ ಪಾವತಿ ಮಾಡಬೇಕು?

ನಾಡಕಚೇರಿಯಲ್ಲಿ ಯಾವೆಲ್ಲ ಪ್ರಮಾಣ ಪತ್ರ ಪಡೆಯಲು ಅರ್ಜಿ ಸಲ್ಲಿಸಬಹುದು? ಎಷ್ಟು ಶುಲ್ಕ ಪಾವತಿ ಮಾಡಬೇಕು? ಮತ್ತು ಯಾವ ರೀತಿಯ ಪ್ರಮಾಣ ಪತ್ರಕ್ಕೆ ಎಷ್ಟು ಕಾಲಾವಧಿ ನಿಗದಿಪಡಿಸಲಾಗಿದೆ ಎನ್ನುವ ಕುರಿತು ಅನೇಕ ಜನರಿಗೆ ಸರಿಯಾದ ಮತ್ತು ಸಂಪೂರ್ಣ ಮಾಹಿತಿ ಲಭ್ಯವಾಗದ ಕಾರಣ ಇಂದು ಈ ಅಂಕಣದಲ್ಲಿ ನಾಡಕಚೇರಿಯ ಆನ್ಲೈನ್ ಸೇವೆಗಳ ಕುರಿತು  ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ.

ಈ ಮಾಹಿತಿ ಉಪಯುಕ್ತ ಅನಿಸಿದ್ದಲ್ಲಿ ತಪ್ಪದೇ ನಿಮ್ಮ ಬಳಿಯಿರುವ ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ  ನಮ್ಮ ಈ ಪ್ರಯತ್ನಕ್ಕೆ ಬೆಂಬಲಿಸಿ. ನಾಡಕಚೇರಿಗಳು(Nadakacheri link) ನಮ್ಮ ರಾಜ್ಯದಲ್ಲಿ ಎಲ್ಲಾ ಭಾಗಗಳಲ್ಲಿದ್ದು ಸಾರ್ವಜನಿಕರಿಗೆ ಬಹುತೇಕ ಅತೀ ಅಗತ್ಯ ಸರಕಾರಿ ಕಾಗದ ಪತ್ರಗಳನ್ನು ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಹಕರಿಸುತ್ತವೆ.

ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದ ವರೆಗೆ ನಡುವ ಬರುವಂತಹ ಎಲ್ಲಾ ಕಾಗದ ಪತ್ರಗಳನ್ನು ಈ ಕಚೇರಿ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಒದಗಿಸಿ ನಿಗದಿತ ಶುಲ್ಕ ಪಾವತಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ: HSRP number plate-ನಿಮ್ಮ ಮೊಬೈಲ್ ನಲ್ಲೇ HSRP ನಂಬರ್ ಪ್ಲೇಟ್ ಬುಕ್ ಮಾಡಲು ಲಿಂಕ್ ಬಿಡುಗಡೆ!

Nadakacheri address- ನಾಡಕಚೇರಿ/ನೆಮ್ಮದಿ ಕೇಂದ್ರ ಎಲ್ಲಿ ಇರುತ್ತವೆ?

ರಾಜ್ಯದ ಎಲ್ಲಾ ಹೋಬಳಿಗಳಲ್ಲಿ ಈ ಕೇಂದ್ರಗಳು ಇದ್ದು ಆ ಹೋಬಳಿ ವ್ಯಾಪ್ತಿಯ ಸಾರ್ವಜನಿಕರ ಎಲ್ಲಾ ಬಗ್ಗೆಯ ಅರ್ಜಿಯನ್ನು ಈ ಕೇಂದ್ರಗಳಲ್ಲಿ ಹಾಕಲಾಗುತ್ತದೆ.

ನಿಮ್ಮ ಹತ್ತಿರದ ನಾಡಕಚೇರಿ ವಿಳಾಸ ಪಡೆಯಲು ಇಲ್ಲಿ ಕ್ಲಿಕ್ ಮಾಡಿ: click here

ಇದನ್ನೂ ಓದಿ: ration card- ಇಂದು ಮತ್ತು ನಾಳೆ ಈ ಜಿಲ್ಲೆಗಳಲ್ಲಿ ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ!

Nadakacheri application fee details-ಯಾವೆಲ್ಲ ಪ್ರಮಾಣ ಪತ್ರ/ಸೇವೆ ಪಡೆಯಲು ಇಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಶುಲ್ಕ ಎಷ್ಟು ಪಾವತಿ ಮಾಡಬೇಕು? 

1) ಜಾತಿ ಮತ್ತು ಆದಾಯ ದೃಡೀಕರಣ ಪತ್ರ: 40/- 21 ದಿನ

2) ಜಾತಿ ಪ್ರಮಾಣ ಪತ್ರ (ಪ್ರವರ್ಗ-1): 40/- 21 ದಿನ

3) ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣ ಪತ್ರ (ಪ.ಜಾ/ಪ.ಪಂ): 40/-
21 ದಿನದ ಒಳಗಾಗಿ

4) ಆದಾಯ ದೃಢೀಕರಣ ಪತ್ರ: 40/- 21 ದಿನ

5) ಅನುಕಂಪದ ಆಧಾರದ ನೇಮಕಾತಿಗೆ ಆದಾಯ ದೃಡೀಕರಣ ಪತ್ರ: 40/- 21 ದಿನ

6) ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ ಪತ್ರ- 40/- 21 ದಿನ

7) ಇತರೆ ಹಿಂದುಳಿದ ವರ್ಗಗಳ ದೃಡೀಕರಣ ಪತ್ರ (ಕೇಂದ್ರ)- 40/- 21 ದಿನ

8) ಸಾಲ ತೀರಿಸುವ ಶಕ್ತಿ ದೃಡೀಕರಣ ಪತ್ರ- 40/- 21 ದಿನ

9) ವ್ಯವಸಾಯಗಾರರ ಕುಟುಂಬದ ಸದಸ್ಯ ದೃಡೀಕರಣ ಪತ್ರ- 40/- 7 ದಿನ

10) ಕೃಷಿ ಕಾರ್ಮಿಕ ದೃಡೀಕರಣ ಪತ್ರ- 40/- 7 ದಿನ

ಇದನ್ನೂ ಓದಿ: ಈ ಜಿಲ್ಲೆಗಳಲ್ಲಿ ಮೊದಲ ಕಂತಿನ ಬರ ಪರಿಹಾರ ರೈತರ ಖಾತೆಗೆ ಬಿಡುಗಡೆ!

11) ವ್ಯವಸಾಯಗಾರರ ದೃಡೀಕರಣ ಪತ್ರ- 40/- 7 ದಿನ

12) ವಂಶವೃಕ್ಷ ದೃಢೀಕರಣ ಪತ್ರ- 40/- 7 ದಿನ

13) ಬೋನ್‌ ಪೈಡ್ ದೃಡೀಕರಣ ಪತ್ರ- 40/- 7 ದಿನ

14) ವಸತಿ ದೃಡೀಕರಣ ಪತ್ರ- 40/- 7 ದಿನ

15) ಭೂ ಹಿಡುವಳಿ ಪ್ರಮಾಣ ಪತ್ರ- 40/- 7 ದಿನ

16) ಜಮೀನು ಇಲ್ಲದಿರುವ ದೃಡೀಕರಣ ಪತ್ರ- 40/- 7 ದಿನ

17) ಜೀವಂತ ದೃಡೀಕರಣ ಪತ್ರ- 40/- 7 ದಿನ

18) ಸರ್ಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ- 40/- 7 ದಿನ

19) ಮರು ವಿವಾಹವಾಗದಿರುವ ದೃಡೀಕರಣ ಪತ್ರ- 40/- 7 ದಿನ

20) ಮೇಲುಸ್ಥರಕ್ಕೆ ಸೇರಿಲ್ಲವೆಂಬ ದೃಡೀಕರಣ ಪತ್ರ- 40/- 7 ದಿನ

21) ಗೇಣಿ ರಹಿತ ದೃಡೀಕರಣ ಪತ್ರ- 40/- 7 ದಿನ

22) ಜನಸಂಖ್ಯೆ ದೃಡೀಕರಣ ಪತ್ರ- 40/- 7 ದಿನ

23) ವಾಸಸ್ಥಳ ದೃಢೀಕರಣ ಪತ್ರ- 40/- 7 ದಿನ

24) ಸಣ್ಣ/ಅತಿ ಸಣ್ಣ ಹಿಡುವಳಿದಾರರ ದೃಢೀಕರಣ ಪತ್ರ- 40/- 7 ದಿನ

25) ಮೃತರ ಕುಟುಂಬದ ಜೀವಂತ ಸದಸ್ಯರ ದೃಡೀಕರಣ ಪತ್ರ- 40/- 7 ದಿನ

26) ನಿರುದ್ಯೋಗ ದೃಡೀಕರಣ ಪತ್ರ- 40/- 7 ದಿನ

27) ವಿಧವಾ ದೃಡೀಕರಣ ಪತ್ರ- 40/- 7 ದಿನ

28) ಬೆಳೆ ದೃಢೀಕರಣ ಪತ್ರ- 40/- 7 ದಿನ

29) ಹೈದ್ರಾಬಾದ್ ಕರ್ನಾಟಕ ಪ್ರದೇಶದ ವಸತಿ & ಅರ್ಹತಾ ದೃಡೀಕರಣ ಪತ್ರ- 40/- 7 ದಿನ

30) ಅಲ್ಪ ಸಂಖ್ಯಾತರ ದೃಡೀಕರಣ ಪತ್ರ- 40/- 7 ದಿನ

31) ಆದಾಯ ಮತ್ತು ಸ್ವತ್ತು ಪ್ರಮಾಣ ಪತ್ರ (EWS)- 40/- 7 ದಿನ

32) ಜಾತಿ ಪ್ರಮಾಣ ಮತ್ತು ಸ್ವತ್ತು ಪ್ರಮಾಣ ಪತ್ರ(ಅ.ಚಾ/ಅ.ಪ-ವಲಸೆ)- 40/- 7 ದಿನ

33) ವಿಶೇಷ ಚೇತನ ಪಿಂಚಣಿ- ಉಚಿತ- 45  ದಿನ

35) ಸಂಧ್ಯಾ ಸುರಕ್ಷಾ ಪಿಂಚಣಿ- ಉಚಿತ- 45  ದಿನ

38) ಮನಸ್ವಿನಿ- ಉಚಿತ- 45  ದಿನ

39) ಆಸಿಡ್ ದಾಳಿಗೊಳಗಾದ ಮಹಿಳೆಯರಿಗೆ ಪಿಂಚಣಿ- ಉಚಿತ- 45  ದಿನ

40) ಆತ್ಮಹತ್ಯೆಗೊಳಗಾದ ರೈತರ ವಿಧವೆಯರ ಪಿಂಚಣಿ- ಉಚಿತ- 45  ದಿನ

ಇದನ್ನೂ ಓದಿ: Fastag kyc- ನಿಮ್ಮ ವಾಹನದ ಫಾಸ್ಟ್ ಟ್ಯಾಗ್ ಕೆವೈಸಿ ಮಾಡಲು ಫೆ,29 ಕೊನೆಯ ದಿನ! ಕೆವೈಸಿ ನಿಮ್ಮ ಮೊಬೈಲ್ ನಲ್ಲೇ ಮಾಡಬಹುದು!ಪರಿಹಾರ

41) ರಾಷ್ಟ್ರೀಯ ಕಟುಂಬ ನೆರವು ಯೋಜನೆ- ಉಚಿತ- 45  ದಿನ

42) ಅಂತ್ಯ ಸಂಸ್ಕಾರ ಯೋಜನೆ- ಉಚಿತ- 45  ದಿನ

43) ಎಂಡೋಸಲ್ಫಾನ್ ಪೀಡಿತರ ಮಿತ ವೇತನ- ಉಚಿತ- 45  ದಿನ

ಭೂಮಿ ಆನ್‌ಲೈನ್ ಸೇವೆಗಳ ವಿವರ ಹೀಗಿದೆ:

  • ಪಹಣಿ ಪತ್ರ/ಉತಾರ(RTC)- 4 ಪುಟಗಳವರೆಗೆ ರೂ 15 ಪ್ರತಿ ಹೆಚ್ಚುವರಿ ಪುಟಕ್ಕೆ ರೂ 2 ರಂತೆ (5 ನೇ ಪುಟದ ನಂತರ)
  • ಮುಟೇಶನ್ (ಹಕ್ಕು ಬದಲಾವಣೆ ಪ್ರತಿ)- 15 ರೂ
  • ಖಾತಾ ಪ್ರತಿ- 15 ರೂ
  • ಹಕ್ಕು ಬದಲಾವಣೆ- ಪ್ರತಿ ಸರ್ವೆ ನಂಬರ್ ಗೆ 35 ರೂ (60 ದಿನಗಳು)
  • ಆಧಾರ/ಬಿಡುಗಡೆ- 35 ರೂ (7 ದಿನಗಳು)
  • ಭೂ ಪರಿವರ್ತನೆ-ಜಿಲ್ಲಾಧಿಕಾರಿಗಳ ಪರಿವರ್ತನೆಯ ಆದೇಶವನ್ನು ಪಹಣಿಯಲ್ಲಿ ಕಾಲೋಜಿತಗೊಳಿಸುವುದು- 35 ರೂ (7 ದಿನಗಳು)
  • 94 ಸಿ ಮತ್ತು 94 ಸಿಸಿ -ಸರ್ಕಾರಿ ಜಮೀನಿನಲ್ಲಿ ಅಕ್ರಮ ನಿರ್ಮಾಣಗಳ ಸಕ್ರಮೀಕರಣ- 65 ರೂ (7 ದಿನಗಳು)
  • ಇ ಸ್ವತ್ತು- 800 ರೂ 
  • ಆಧಾರ್ ನೋಂದಣಿ- ಉಚಿತ

ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಮತ್ತು ನಿಮ್ಮ ಅರ್ಜಿಯ ಸ್ಥಿತಿ ಚೆಕ್ ಮಾಡಲು ನಾಡಕಚೇರಿಯ ವೆಬ್ಸೈಟ್ ಭೇಟಿ ಮಾಡಲು ಇಲ್ಲಿ ಕ್ಲಿಕ್ ಮಾಡಿ: click here

Most Popular

Latest Articles

- Advertisment -

Related Articles