HomeNew postsPower tiller subsidy- ಶೇ.90ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ!

Power tiller subsidy- ಶೇ.90ರಷ್ಟು ಸಬ್ಸಿಡಿಯಲ್ಲಿ ಪವರ್ ಟಿಲ್ಲರ್ ಪಡೆಯಲು ಅರ್ಜಿ!

ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅನುದಾನ ಲಭ್ಯತೆ ಆಧಾರದ ಮೇಲೆ ವಿವಿಧ ಕೃಷಿ ಯಂತ್ರಗಳನ್ನು(Power tiller subsidy) ಸಬ್ಸಿಡಿಯಲ್ಲಿ ರೈತರಿಗೆ ಒದಗಿಸಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರಕಾರದ ಸಹಯೋಗದಲ್ಲಿ ವಿವಿಧ ಯೋಜನೆಯಡಿ ರೈತರಿಗೆ ಕೃಷಿ ಯಂತ್ರಗಳ ಖರೀದಿ ಮಾಡಲು ಅರ್ಥಿಕವಾಗಿ ನೆರವು ನೀಡಲು ಅನೇಕ ಯಂತ್ರಗಳಿಗೆ ಸಹಾಯಧನವನ್ನು ನೀಡಲಾಗುತ್ತದೆ ಇದರಿಂತೆ ಪ್ರಸ್ತುತ ಯಾವೆಲ್ಲ ಯಂತ್ರಗಳಿಗೆ ಸಹಾಯಧನ ನೀಡಲಾಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Vidyasiri scholarship-ವಿದ್ಯಾಸಿರಿ ವಿದ್ಯಾರ್ಥಿವೇತನ ಪ್ರತಿ ತಿಂಗಳಿಗೆ ರೂ 2,000 ಕ್ಕೆ ಏರಿಕೆ!

ಕೃಷಿಯಲ್ಲಿನ ಕೂಲಿ-ಕಾರ್ಮಿಕರ ಸಮಸ್ಯೆಯನ್ನು ಸರಿದೂಗಿಸಲು ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಯಂತ್ರಗಳ ಬಳಕೆಯನ್ನು ಮಾಡುವುದು ಅತ್ಯಗತ್ಯವಾಗಿದೆ ಅರ್ಥಿಕವಾಗಿ ಹಿಂದುಳಿದ ರೈತರಿಗೆ ದೊಡ್ಡ ಮೊತ್ತ ನೀಡಿ ಯಂತ್ರಗಳನ್ನು ಖರೀದಿ ಮಾಡುವುದು ಕಷ್ಟಕರ ಆದ್ದರಿಂದ ಇಂತಹ ರೈತರಿಗೆ ನೆರವಾಗಲು ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ.

Agriculture equipment subsidy- ಪ್ರಸ್ತುತ ಸಬ್ಸಿಡಿ ನೀಡುತ್ತಿರುವ ಯಂತ್ರಗಳ ವಿವರ ಹೀಗಿದೆ:

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಯಡಿ ಅನುದಾನ ಲಭ್ಯತೆ ಆಧಾರದ ಮೇಲೆ ಕೃಷಿ ಯಾಂತ್ರೀಕರಣ ಯೋಜನೆಯಡಿ ರೈತರಿಗೆ ಶೇ50 ರಿಂದ ಶೇ.90ರಷ್ಟು ಸಹಾಯಧನದಡಿ ಕೃಷಿ. ಯಂತ್ರೋಪಕರಣಗಳನ್ನು ರೈತರು ಪಡೆಯಲು ಅರ್ಜಿ ಆಹ್ವಾನಿಸಲಾಗಿದ್ದು.

ಮಿನಿ ಟ್ರ್ಯಾಕ್ಟರ್(Mini Tractor subsidy), ಪವರ್ ಟಿಲ್ಲರ್(Power tiller) , ಟ್ರ್ಯಾಕ್ಟರ್ ಚಾಲಿತ ಎಂ.ಬಿ.ಪ್ಲೋ(Tractor mb plough subsidy), ರೋಟೋವೇಟರ್(rotavator),ಡಿಸ್ಕ್ ಫ್ಲೋ(Disc plough), ಡಿಸ್ಕ್ ಹ್ಯಾರೋ(Disc harrow) ಸೇರಿದಂತೆ ಇನ್ನಿತರ ಕೃಷಿ ಯಂತ್ರಗಳನ್ನು ಪಡೆಯಲು ಅವಕಾಶವಿದೆ.

ಇದನ್ನೂ ಓದಿ: Mobile addiction- ನಿಮ್ಮ ಮೊಬೈಲ್ ನಲ್ಲಿ ಈ ಸೆಟ್ಟಿಂಗ್ ಆನ್ ಮಾಡಿ! ನಿಮ್ಮ ಮಕ್ಕಳು ಮೊಬೈಲ್ ಬಳಕೆ ಮಾಡುವುದನ್ನು ತಪ್ಪಿಸಿ!

Agriculture equipment wise subsidy- ಯಂತ್ರವಾರು ಸಹಾಯಧನ ಮಾಹಿತಿ:

1) ಮಿನಿ ಟ್ರ್ಯಾಕ್ಟರ್/Mini Tractor:

ಮಿನಿ ಟ್ರ್ಯಾಕ್ಟರ್‌ ಖರೀದಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುತ್ತದೆ. ಸಾಮಾನ್ಯ ವರ್ಗದ ರೈತರಿಗೆ 75 ಸಾವಿರ ರೂ ಸಹಾಯಧನ ಸಿಗುತ್ತದೆ.

2) ಪವರ್ ಟಿಲ್ಲರ್/Power tiller :

ಪವರ್ ಟಿಲ್ಲರ್ ಪಡೆಯಲು ಸಾಮಾನ್ಯ ವರ್ಗದವರಿಗೆ ಶೇ. 50 ರಷ್ಟು ಸಬ್ಸಿಡಿ ನೀಡಲಾಗುತ್ತದೆ ಗರಿಷ್ಠ 72,500 ರೂಪಾಯಿವರೆಗೆ ಸಹಾಯಧನ ಪಡೆಯಬಹುದು. ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90ರಷ್ಟು ಸಹಾಯಧನ, ಗರಿಷ್ಠ 1 ಲಕ್ಷ ರೂ ಸಬ್ಸಿಡಿ ದೊರೆಯುತ್ತದೆ.

Power tiller

ಇದನ್ನೂ ಓದಿ: Yuvanidhi application-2024: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ!

3) ಟ್ರ್ಯಾಕ್ಟರ್ ಚಾಲಿತ ಎಂ.ಬಿ. ಫ್ಲೋ ಫಿಕ್ಸ್ಡ್‌/Tractor mb plough:

ಸಾಮಾನ್ಯ ವರ್ಗದವರಿಗೆ 14,100 ರೂ, ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 25,800 ರೂ ಸಬ್ಸಿಡಿ ದೊರೆಯುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಎಂ.ಬಿ. ಫ್ಲೋ 25,830 ರೂ ರಿವರ್ಸಿಬಲ್ ಎಂ.ಬಿ. ಫ್ಲೋ ಗೆ 51,300 ರೂ ಅರ್ಥಿಕ ನೆರವು ಪಡೆಯಬಹುದು.

mb plough

4) ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಫ್ಲೋ/Disc plough:

ಖರೀದಿಗೆ ಸಾಮಾನ್ಯ ವರ್ಗದವರಿಗೆ 29,000ದಿಂದ 36,500 ರೂಪಾಯಿಯವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200 ರೂಪಾಯಿಯಿಂದ 65,700 ರೂಪಾಯಿಯವರೆಗೆ ಸಬ್ಸಿಡಿ ಪಡೆಯಬಹುದು.

ಇದನ್ನೂ ಓದಿ: Scholarship application- ವಿದ್ಯಾಧನ ರೂ 55,000 ಸಾವಿರ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಆಹ್ವಾನ!

5) ಟ್ರ್ಯಾಕ್ಟರ್ ಚಾಲಿತ ಡಿಸ್ಕ್ ಹ್ಯಾರೋ/Disc harrow:

ಸಾಮಾನ್ಯ ವರ್ಗದವರಿಗೆ 29,000-35,000 ರೂಪಾಯಿಯವರೆಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 52,200 ದಿಂದ 63,000 ರೂ ಸಬ್ಸಿಡಿ ದೊರೆಯುತ್ತದೆ.

Application- ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?

ಅರ್ಹ ರೈತರು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: BPL Card guidelines- ರಾಜ್ಯ ಸರಕಾರದಿಂದ ಈ ವರ್ಗಕ್ಕೆ ಸೇರಿದವರ ಬಿಪಿಎಲ್ ಕಾರ್ಡ ರದ್ದುಗೊಳಿಸಲು ಸೂಚನೆ!

Documents- ದಾಖಲೆಗಳು:

1) ಅರ್ಜಿದಾರರ ಆಧಾರ್ ಕಾರ್ಡ
2) ಪೋಟೋ
3) ಬ್ಯಾಂಕ್ ಪಾಸ್ ಬುಕ್
4) ರೇಶನ್ ಕಾರ್ಡ
5) ಪಹಣಿ/RTC
6) ಹಿಡುವಳಿ ಪ್ರಮಾಣ ಪತ್ರ
7) ಜಾತಿ ಮತ್ತು ಆದಾಯ ಪ್ರಮಾಣ ಪತ್ರ

Online application link-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಲಿಂಕ್: Apply Now

ಇದನ್ನೂ ಓದಿ: Health Department- ಆರೋಗ್ಯ ಇಲಾಖೆಯಿಂದ ಮತ್ತೊಂದು ಜನಸ್ನೇಹಿ ಯೋಜನೆ ಜಾರಿ!

Most Popular

Latest Articles

- Advertisment -

Related Articles