SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ”ಸ್ತ್ರೀ ಶಕ್ತಿ ಪ್ಯಾಕೇಜ್”! ಇಲ್ಲಿದೆ ಸಂಪೂರ್ಣ ಮಾಹಿತಿ!

February 4, 2026 | Siddesh
SBI Women Loan-ಮಹಿಳೆಯರ ಸ್ವಂತ ಉದ್ಯಮಕ್ಕೆ”ಸ್ತ್ರೀ ಶಕ್ತಿ ಪ್ಯಾಕೇಜ್”! ಇಲ್ಲಿದೆ ಸಂಪೂರ್ಣ ಮಾಹಿತಿ!
Share Now:

ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸುವ ಉದ್ದೇಶದಿಂದ ನಿರ್ದೇಶನಾಲಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ(SBI Women Loans) ಮಹಿಳೆಯರ ಸ್ವಂತ ಉದ್ಯಮವನ್ನು ಮಾಡಲು "ಸ್ತ್ರೀ ಶಕ್ತಿ ಪ್ಯಾಕೇಜ್" ಅನ್ನು ಜಾರಿಗೆ ತಂದಿದ್ದು, ಮಹಿಳಾ ಅಭ್ಯರ್ಥಿಗಳು ಅವಕಾಶವನ್ನು ಪಡೆದುಕೊಳ್ಳಲು ಕೋರಿದೆ.

ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ಪಂಚ ಯೋಜನೆಗಳಲ್ಲಿ ಸ್ತ್ರೀ ಶಕ್ತಿ ಪ್ಯಾಕೇಜ್(Stree Shakti Package) ಕೂಡ ಒಂದಾಗಿದ್ದು, ಇದನ್ನು 2000-01ನೇ ಸಾಲಿನಲ್ಲಿ ಜಾರಿಗೆ ತಂದಿದ್ದು, ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ಯೋಜನೆಯೊಂದನ್ನು ಪರಿಚಯ ಮಾಡಿಸಿರುವ ಯೋಜನೆಯೇ ಈ ಸ್ತ್ರೀ ಶಕ್ತಿ ಪ್ಯಾಕೇಜ್ ಯೋಜನೆ.

ಮಹಿಳೆಯರು ಮನೆಯಲ್ಲಿಯೇ ಸಣ್ಣ ಕೈಗಾರಿಕೆ ಅಥವಾ ದೊಡ್ಡ ಮಟ್ಟದ ಉದ್ಯಮವನ್ನು ಪ್ರಾರಂಭಿಸಲು ಇದು ಉತ್ತಮ ಆರ್ಥಿಕ ನೆರವು ನೀಡುತ್ತದೆ. ಈ ಮಾಹಿತಿಯು ನಿಮಗೆ ಉಪಯುಕ್ತ ಎನಿಸಿದ್ದಲ್ಲಿ ನಿಮ್ಮ ವಾಟ್ಸಾಪ್ ಗುಂಪುಗಳಲ್ಲಿ ಶೇರ್ ಮಾಡಿ.

ಇದನ್ನೂ ಓದಿ: SSP Scholarship-ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ ಅರ್ಜಿ ಸಲ್ಲಿಸುವ ಗಡುವು ವಿಸ್ತರಣೆ!

Stree Shakti Package-ಸ್ತ್ರೀ ಶಕ್ತಿ ಪ್ಯಾಕೇಜ್ ಎಂದರೇನು?

ಸ್ತ್ರೀ ಶಕ್ತಿ ಪ್ಯಾಕೇಜ್ (Stree Shakti Package) ಎಂಬುದು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ಆರ್ಥಿಕ ನೆರವು ನೀಡಲು ರೂಪಿಸಿರುವ ಒಂದು ವಿಶೇಷ ಸಾಲ ಯೋಜನೆಯಾಗಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಪ್ರಾರಂಭ ಮಾಡಿ ವ್ಯವಹಾರಗಳಿಗೆ ಕಡಿಮೆ ಬಡ್ಡಿದರದಲ್ಲಿ 25 ಲಕ್ಷ ರೂ.ವರೆಗೆ ಸಾಲ ಸೌಲಭ್ಯಗಳನ್ನು ಪಡೆಯಲು ಅವಕಾಶವಿದ್ದು,10 ಲಕ್ಷ ರೂ.ದವರೆಗೆ ಮೇಲಾಧಾರ ರಹಿತ ಸಾಲ ಲಭ್ಯವಾಗಲಿದೆ.

ಇದನ್ನೂ ಓದಿ: Labour Pension Scheme-ಲೇಬರ್ ಕಾರ್ಡದಾರರಿಗೆ ತಿಂಗಳಿಗೆ ₹3,000 ಪಿಂಚಣಿ ಹಣ! ಪಡೆಯುವುದು ಹೇಗೆ!

Purpose Of This Scheme-ಈ ಯೋಜನೆಯ ಮುಖ್ಯ ಉದ್ದೇಶವೇನು?

ಮಹಿಳೆಯರು ತಮ್ಮದೇ ಆದ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಅಥವಾ ಈಗಾಗಲೇ ನಡೆಸುತ್ತಿರುವ ಸಣ್ಣ ಪ್ರಮಾಣದ ಉದ್ಯಮವನ್ನು ಮುಂದುವರಿಸಲು ಈ ಯೋಜನೆ ಆರ್ಥಿಕ ಸಹಾಯ ಮಾಡುತ್ತದೆ.

ಈ ಯೋಜನೆಯ ಅಡಿಯಲ್ಲಿ ಸಾಲ ಪಡೆಯಲು, ಆ ಉದ್ಯಮ ಅಥವಾ ಸಂಸ್ಥೆಯಲ್ಲಿ ಮಹಿಳೆಯರ ಪಾಲುದಾರಿಕೆ ಕನಿಷ್ಠ 51% ಕ್ಕಿಂತ ಹೆಚ್ಚಿರಬೇಕು.

ಈ ಯೋಜನೆಯಡಿ ಬಡ್ಡಿ ದರ. ಸಾಲದ ಮೊತ್ತವು 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿದ್ದರೆ, ಚಾಲ್ತಿಯಲ್ಲಿರುವ ಬಡ್ಡಿ ದರಕ್ಕಿಂತ ಸುಮಾರು 0.50% ರಿಯಾಯಿತಿ ನೀಡಲಾಗುತ್ತದೆ.

ಸಣ್ಣ ಕೈಗಾರಿಕೆಗಳ ಅಡಿಯಲ್ಲಿ ಬರುವ ಉದ್ಯಮಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಲು ಯಾವುದೇ ಹೆಚ್ಚಿನ ಶ್ಯೂರಿಟಿ ನೀಡುವ ಅಗತ್ಯ ಇರುವುದಿಲ್ಲ.

ರಾಜ್ಯ ಏಜೆನ್ಸಿಗಳು ನಡೆಸುವ ಉದ್ಯಮಶೀಲತೆ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ (EDP) ಭಾಗವಹಿಸಿದ ಮಹಿಳೆಯರಿಗೆ ಈ ಯೋಜನೆಯಡಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಇದನ್ನೂ ಓದಿ: Lakhpati Didi-ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗಿಫ್ಟ್! ಏನಿದು ಲಖ್ ಪತಿ ದೀದಿ ಮತ್ತು ಶಿ-ಮಾರ್ಟ್ ಯೋಜನೆ?

Uses Of this Scheme-ಈ ಯೋಜನೆಯ ಅಡಿಯಲ್ಲಿ ದೊರೆಯುವ ಲಾಭಗಳು?

ಅಭ್ಯರ್ಥಿಯು 50,000 ರೂ ಗಳಿಂದ ಗರಿಷ್ಠ ರೂ. 25 ಲಕ್ಷ ದವರೆಗೆ ಸಾಲ ಪಡೆಯಲು ಅವಕಾಶವಿರುತ್ತದೆ.

2 ಲಕ್ಷಕ್ಕಿಂತ ಹೆಚ್ಚಿನ ಸಾಲಕ್ಕೆ ಬಡ್ಡಿ ದರದಲ್ಲಿ 0.50% ರಿಯಾಯಿತಿ ಸಿಗುತ್ತದೆ.

ಸಾಲದ ಮಾರ್ಜಿನ್ ಮೊತ್ತದಲ್ಲಿ 5% ವರೆಗೆ ರಿಯಾಯಿತಿ ಲಭ್ಯವಿದೆ.

Who Can Apply-ಯಾರೆಲ್ಲ ಈ ಅವಕಾಶ ಅಡೆಯಲು ಅರ್ಹರು?

ಚಿಲ್ಲರೆ ವ್ಯಾಪಾರಿಗಳು ಅಂದರೆ ದಿನಸಿ ಅಂಗಡಿ, ಬಟ್ಟೆ ಅಂಗಡಿ ನೆಡೆಸುವವರು.

ಸಣ್ಣ ಕೈಗಾರಿಕೆಗಳು ವ್ಯಾಪಾರಿಗಳು ಅರ್ಜಿ ಸಲ್ಲಿಸಬಹುದು.

ಕೃಷಿಗೆ ಸಂಬಂಧಿತ ಚಟುವಟಿಕೆಗಳನ್ನು ನೆಡೆಸುವ ವ್ಯಾಪಾರಿಗಳು ಅರ್ಹರು.

ಇದನ್ನೂ ಓದಿ: PM Kisan Tractor Yojana-ರೈತರಿಗೆ ಟ್ರ್ಯಾಕ್ಟರ್ ಖರೀದಿಗೆ 50% ಸಬ್ಸಿಡಿ! ಅರ್ಜಿ ಸಲ್ಲಿಸುವುದು ಹೇಗೆ?

womens loan scheme

ಇದನ್ನೂ ಓದಿ: LIC Policy Status-ಮೊಬೈಲ್ ನಲ್ಲೇ ಎಲ್ಐಸಿ ಪಾಲಿಸಿ ಸ್ಟೇಟಸ್ ಚೆಕ್ ಮಾಡಲು ಲಿಂಕ್ ಬಿಡುಗಡೆ!

What are the Documents Required-ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ/Aadhar Card
  • ಪಾನ್ ಕಾರ್ಡ/Pan card
  • ರೇಷನ್ ಕಾರ್ಡ/Ration Card
  • ಉದ್ಯಮ ನೋಂದಣಿ ಪತ್ರ/Udyam Registration
  • ಯೋಜನೆಯ ವರದಿ ಪತ್ರ/Project Report
  • ಬ್ಯಾಂಕ ಪಾಸ್ ಪುಸ್ತಕ/Bank Passbook
  • ಫೋಟೋ/Photocopy

ಇದನ್ನೂ ಓದಿ: Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?

Where To Applyಎಲ್ಲಿ ಅರ್ಜಿ ಸಲ್ಲಿಸಬೇಕು?

ಈ ಯೋಜನೆಯ ಪ್ರಯೋಜನೆಯನ್ನು ಪಡೆಯಲು ಅರ್ಹ ಇರುವ ಅಭ್ಯರ್ಥಿಗಳು ನಿಮ್ಮ ಹತ್ತಿರದ ಭಾರತೀಯ ಸ್ಟೇಟ್ ಬ್ಯಾಂಕ್ (SBI) ಶಾಖೆಗೆ ನೇರವಾಗಿ ಭೇಟಿ ನೀಡಿ ಯೋಜನೆಯ ಬಗ್ಗೆ ವಿಚಾರಿಸಿ ಅರ್ಜಿ ಫಾರಂ ಅನ್ನು ಪಡೆದು ಅಗತ್ಯ ದಾಖಲಾತಿಗಳೊಂದಿಗೆ ನಮೂನೆಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

More Information-ಹೆಚ್ಚಿನ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ: Click Here
Helpline Number:ಸಹಾಯವಾಣಿ ಸಂಖ್ಯೆ: 18001234

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: