UAE ನಲ್ಲಿ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ! ತಿಂಗಳಿಗೆ 1 ಲಕ್ಷ ವೇತನ!

March 23, 2025 | Siddesh
UAE ನಲ್ಲಿ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ! ತಿಂಗಳಿಗೆ 1 ಲಕ್ಷ ವೇತನ!
Share Now:

ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ದಿ(Nursing job vacancies) ನಿಗಮದ ಸಹಯೋಗದಲ್ಲಿ UAE ದೇಶದಲ್ಲಿ ಕೆಲಸ ಮಾಡಲು ಪುರುಷ ನರ್ಸ್ ಗಳನ್ನು ಆಯ್ಕೆ ಮಾಡಲು ನೇರ ಸಂದರ್ಶನದಲ್ಲಿ ಭಾಗವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದೇಶದಲ್ಲಿ(UAE Nurse jobs) ಕೆಲಸ ಮಾಡಲು ಇಚ್ಚೆಯನ್ನು ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಸಂದರ್ಶದ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಅರ್ಜಿ ಸಲ್ಲಿಸಲು ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು? ಅರ್ಜಿ ಸಲ್ಲಿಸಲು ಅರ್ಹರು ಯಾರು ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಸಲಾಗಿದ್ದು ತಪ್ಪದೇ ಈ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗುಂಪಿನಲ್ಲಿ ಶೇರ್ ಮಾಡಿ ಸಹಕರಿಸಿ.

ಇದನ್ನೂ ಓದಿ: Yashaswini Card-2025: ಯಶಸ್ವಿನಿ ಕಾರ್ಡ ಪಡೆಯಲು ಇನ್ನು 10 ದಿನ ಮಾತ್ರ ಅವಕಾಶ!

BSc Nursing job opportunities-ವಿದೇಶದಲ್ಲಿ ಕೆಲಸ ಮಾಡುವುದರಿಂದ ಹೆಚ್ಚು ಗಳಿಕೆ ಸಾಧ್ಯ:

ಭಾರತ ದೇಶದ ರೂಪಾಯಿ ಮೌಲ್ಯವು ಕೆಲವು ಆಯ್ದ ವಿದೇಶಗಳಿಗೆ ಹೋಲಿಕೆ ಮಾಡಿದರೆ ಕಡಿಮೆ ಇರುವುದರಿಂದ ಅಲ್ಲಿ ಕೆಲಸ ಮಾಡುವುದರ ಮೂಲಕ ನಮ್ಮ ದೇಶದ ನಾಗರಿಕರು ಹೆಚ್ಚು ಗಳಿಕೆಯನ್ನು ಮಾಡಬಹುದಾಗಿದೆ. ಉದಾಹರಣೆಗೆ ಹೇಳುವುದಾದರೆ UAE ದೇಶದಲ್ಲಿ ಒಂದು ರೂ(AED) ಬೆಲೆ ಭಾರತ ದೇಶದ ರೂಪಾಯಿಯಲ್ಲಿ 23 ರೂ ಅಗಿರುತ್ತದೆ ಅಲ್ಲಿ ಒಂದು ರೂ ದುಡಿದರೆ ಇಲ್ಲಿಯ ಲೆಕ್ಕಾಚಾರದಲ್ಲಿ 23 ರೂ ದುಡಿಮೆ ಮಾಡಿದಂತೆ.

UAE ದೇಶದಲ್ಲಿ ಕೆಲಸ ಮಾಡಲು ಪುರುಷ ನರ್ಸ್ ಕೆಲಸಕ್ಕೆ ನಿಗದಿಪಡಿಸಿದ ಅರ್ಹತೆಗಳು:

  • ಅಭ್ಯರ್ಥಿಯು BSc ನರ್ಸಿಂಗ್/ Post Basic ನರ್ಸಿಂಗ್ ವಿದ್ಯಾರ್ಹತೆಯನ್ನು ಹೊಂದರಬೇಕು.
  • ಕನಿಷ್ಥ 2 ವರ್ಷದ ವೃತ್ತಿ ಅನುಭವವನ್ನು ಹೊಂದಿರಬೇಕು.
  • ಅರ್ಜಿದಾರ ಅಭ್ಯರ್ಥಿಯ ವಯಸ್ಸು 40 ವರ್ಷಕ್ಕಿಂತ ಕಡಿಮೆ ಇರಬೇಕು.

ಇದನ್ನೂ ಓದಿ: Land Conversion-ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಚಿವ ಕೃಷ್ಣಬೈರೇಗೌಡ

nurse job

Monthly Salary Details-ಮಾಸಿಕ ವೇತನ:

UAE ದೇಶದಲ್ಲಿ ಕೆಲಸ ಮಾಡಲು ಪುರುಷ ನರ್ಸ್ ಹುದ್ದೆಗ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಅಲ್ಲಿಯ ದೇಶದ ಕರೆನ್ಸಿ ಯಲ್ಲಿ ಅಂದರೆ ಪ್ರತಿ ತಿಂಗಳಿಗೆ 5,000 AED ಅನ್ನು ಪಾವತಿ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದ್ದು ಇದ ಭಾರತೀಯ ರೂಪಾಯಿ ಮೌಲ್ಯದಲ್ಲಿ 1,15,000/- ರೂ ಅಗಿರುತ್ತದೆ.

ಇತರೆ ಸೌಲಭ್ಯಗಳು:

ಸಂದರ್ಶನದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವೀಸಾ ಮತ್ತು ವಿಮಾನ ಟಿಕೆಟ್ ಸಂಪೂರ್ಣ ಉಚಿತವಾಗಿ ನೀಡಲಾಗುತ್ತದೆ. ಜೊತೆಗೆ UAE ದೇಶದಲ್ಲಿ ಉಳಿದುಕೊಳ್ಳಲು ಉಚಿತ ವಸತಿ ಮತ್ತು ಕೆಲಸಕ್ಕೆ ಹೋಗಿ-ಬರಲು ಸಾರಿಗೆ ವ್ಯವಸ್ಥೆಯನ್ನು ಸಹ ಮಾಡಿಕೊಡಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Diploma Certificate Courses-ಕೃಷಿ ವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವ ಅರ್ಜಿ ಆಹ್ವಾನ!

Online Application Link For UAE Nurse Job-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಗತ್ಯ ವಿವರವನ್ನು ಭರ್ತಿ ಮಾಡಿ ಈ ಕೆಳಗೆ ನೀಡಿರುವ ಗೂಗಲ್ ಪಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲೇ ಕುಳಿತು ಅರ್ಜಿಯನ್ನು ಸಲ್ಲಿಸಬಹುದು.

Application Link-ಅರ್ಜಿ ಸಲ್ಲಿಸಲು ಲಿಂಕ್- Apply Now

ನಿಮ್ಮ CV ಮತ್ತು ದಾಖಲಾತಿಗಳನ್ನು hr.imck@gmail.com ಈ ಮೇಲ್ ವಿಳಾಸಕ್ಕೆ ಕಳುಹಿಸಬೇಕು.

ಇದನ್ನೂ ಓದಿ: Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!

Interview Date And Place-ಸಂದರ್ಶನ ನಡೆಯುವ ದಿನ ಮತ್ತು ಸ್ಥಳ:

ಅರ್ಜಿಯನ್ನು ಸಲ್ಲಿಸಿದ ಬಳಿಕ ಅರ್ಹ ಅಭ್ಯರ್ಥಿಗಳಿಗೆ ಬೆಂಗಳೂರಿನಲ್ಲಿ ಇದೆ ತಿಂಗಳು ಅಂದರೆ ಎಪ್ರಿಲ್-2025 ರಂದು ನೇರ ಸಂದರ್ಶನ ನಡೆಯಲಿದೆ.

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ:

ಅಂತರಾಷ್ಟ್ರೀಯ ವಲಸೆ ಕೇಂದ್ರ - ಕರ್ನಾಟಕ (IMC-K)
4ನೇ ಮಹಡಿ ಕಲ್ಯಾಣ ಸುರಕ್ಷಾ ಭವನ, ITI ಕಾಲೇಜು ಆವರಣ, ಡೈರಿ ವೃತ್ತ. ಬನ್ನೇರುಘಟ್ಟ ಮುಖ್ಯ ರಸ್ತೆ, ಬೆಂಗಳೂರು - 560029

Share Now: