Budget 2026-27: ಕೇಂದ್ರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು?ಇಲ್ಲಿದೆ ಸಂಪೂರ್ಣ ವಿವರ!

February 1, 2026 | Siddesh
Budget 2026-27: ಕೇಂದ್ರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಕ್ಕ ಕೊಡುಗೆಗಳೇನು?ಇಲ್ಲಿದೆ ಸಂಪೂರ್ಣ ವಿವರ!
Share Now:

ಇಂದು ಕೇಂದ್ರ ಸರಕಾರದಿಂದ 2026-27 ನೇ ಸಾಲಿನಲ್ಲಿ ಅನುಷ್ಥಾನ ಮಾಡಲಿರುವ ಎಲ್ಲಾ ಅಭಿವೃದ್ದಿ ಯೋಜನೆಗಳಿಗೆ(UNION BUDGET 2026) ಅನುದಾನವನ್ನು ಒದಗಿಸಲು ಬಜೆಟ್ ಅನ್ನು ಮಂಡನೆ ಮಾಡಲಾಗಿದ್ದು ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲ ಯೋಜನೆಗಳಿಗೆ ಅನುದಾನವನ್ನು ಒದಗಿಸಲಾಗಿದೆ? ಕೃಷಿ ಕ್ಷೇತ್ರಕ್ಕೆ ಸಿಕ್ಕ ಅನುದಾನವೆಷ್ಟು? ಇನ್ನಿತರ ಅಗತ್ಯ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

2026ರ ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್, ದೇಶದ ಬೆನ್ನೆಲುಬಾದ ಕೃಷಿ ವಲಯ(Agriculture Grants) ಮತ್ತು ಸಾಮಾನ್ಯ ವರ್ಗದ ಜನರ ನಿರೀಕ್ಷೆಗಳಿಗೆ ಹೊಸ ಆಯಾಮ ನೀಡಿದೆ. "ವಿಕಸಿತ ಭಾರತ"ದ ಗುರಿಯತ್ತ ಸಾಗುತ್ತಿರುವ ಈ ಬಜೆಟ್‌ನಲ್ಲಿ ರೈತರಿಗೆ ತಂತ್ರಜ್ಞಾನದ ಸ್ಪರ್ಶ ನೀಡುವ ಜೊತೆಗೆ ಮಧ್ಯಮ ವರ್ಗದವರಿಗೆ ತೆರಿಗೆ ಸರಳೀಕರಣದ ಭರವಸೆ ನೀಡಲಾಗಿದೆ.

ಇದನ್ನೂ ಓದಿ: Fodder Seed Kit-ಕೃಷಿಕರಿಗೆ ಉಚಿತ ಮೇವಿನ ಬೀಜದ ಕಿಟ್ ವಿತರಣೆ! ಅರ್ಜಿ ಸಲ್ಲಿಸುವುದು ಹೇಗೆ?

ದೇಶದ ಆರ್ಥಿಕತೆಯ ಗತಿಯನ್ನು ನಿರ್ಧರಿಸುವ 2026-27ನೇ ಸಾಲಿನ ಕೇಂದ್ರ ಬಜೆಟ್(Central budget 2026) ಮಂಡನೆಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಆಧುನೀಕರಣ, ಮತ್ತು ಸಣ್ಣ ಮಧ್ಯಮ ಕೈಗಾರಿಕೆ ಸೇರಿದಂತೆ ಕರಾವಳಿ ಕೃಷಿ ಮತ್ತು ಸಾಮಾನ್ಯ ಜನರ ಜೀವನ ಮಟ್ಟ ಸುಧಾರಣೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿ ಈ ಕೆಳಗಿನಂತಿವೆ.

Central Budget Highlights-ರೈತರಿಗಾಗಿ ಘೋಷಿಸಲಾದ ಪ್ರಮುಖ ಯೋಜನೆಗಳು:

ಭಾರತ್ ವಿಸ್ತಾರ್ (Bharat Vistar):

ಇದು ಬಜೆಟ್‌ನ ಅತ್ಯಂತ ಮಹತ್ವದ ಘೋಷಣೆ. ಇದು ಬಹುಭಾಷಾ AI(ಕೃತಕ ಬುದ್ಧಿಮತ್ತೆ) ಸಾಧನವಾಗಿದ್ದು, ರೈತರಿಗೆ ಹವಾಮಾನ ವರದಿ, ಬೆಳೆಗಳ ಮಾಹಿತಿ ಮತ್ತು ಮಾರುಕಟ್ಟೆ ದರವನ್ನು ಅವರದ್ದೇ ಭಾಷೆಯಲ್ಲಿ ನೀಡಲಿದೆ.

ಅಧಿಕ ಮೌಲ್ಯದ ತೋಟಗಾರಿಕೆ ಬೆಳೆಗಳಿಗೆ ಉತ್ತೇಜನ:

ತೆಂಗು, ಶ್ರೀಗಂಧ, ಗೋಡಂಬಿ, ಕೋಕೋ ಮತ್ತು ಅಗರವುಡ್‌ನಂತಹ ಅಧಿಕ ಲಾಭ ತರುವ ಬೆಳೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗಿದೆ. ಪ್ರಮುಖವಾಗಿ ಹಳೆಯ ತೋಟಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡಿ ನೂತನ ಯೋಜನೆಯನ್ನು ಜಾರಿಗೆ ತರಲು ಅನುದಾನವನ್ನು ಮೀಸಲಿಡಲಾಗಿದೆ.

ಇದನ್ನೂ ಓದಿ: Caste And Income Certificate-ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಿ!

ಮೀನುಗಾರಿಕೆ ಮತ್ತು ಪಶುಸಂಗೋಪನೆ:

500 ಜಲಾನಯನ ಪ್ರದೇಶಗಳಲ್ಲಿ ಮೀನುಗಾರಿಕೆ ಅಭಿವೃದ್ಧಿಪಡಿಸಲು ಮತ್ತು ಜಾನುವಾರು ಸಾಕಣೆಗೆ ಕ್ರೆಡಿಟ್-ಲಿಂಕ್ಡ್ ಸಬ್ಸಿಡಿ (ಸಾಲ ಆಧಾರಿತ ಸಹಾಯಧನ) ಯೋಜನೆಯನ್ನು ಘೋಷಿಸಲಾಗಿದೆ.

ಕಿಸಾನ್ ಕ್ರೆಡಿಟ್ ಕಾರ್ಡ್ (KCC):

ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲದ ಮಿತಿಯನ್ನು ₹3 ಲಕ್ಷದಿಂದ ₹5 ಲಕ್ಷಕ್ಕೆ ಏರಿಸಲಾಗಿದೆ.

ಬೆಳೆ ವೈವಿಧ್ಯೀಕರಣ:

ಕಡಿಮೆ ಉತ್ಪಾದಕತೆ ಹೊಂದಿರುವ 100 ಜಿಲ್ಲೆಗಳಲ್ಲಿ ಉತ್ಪಾದಕತೆ ಹೆಚ್ಚಿಸಲು 'ಪ್ರಧಾನ ಮಂತ್ರಿ ಧಾನ್ಯ-ಧಾನ್ಯ ಕೃಷಿ ಯೋಜನೆ' ಜಾರಿಗೊಳಿಸಲಾಗುತ್ತಿದೆ.

ಇದನ್ನೂ ಓದಿ: Fellowship Application-ಸಿಇಟಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶಿಷ್ಯವೇತನಕ್ಕೆ ಅರ್ಜಿ!

Budget 2026

Agriculture Grants Details-ಅನುದಾನದ ಹಂಚಿಕೆ ವಿವರ (ಅಂದಾಜು):

ಯೋಜನೆ/ವಲಯನಿಗದಿಪಡಿಸಿದ ಅನುದಾನ (ಕೋಟಿ ರೂ.ಗಳಲ್ಲಿ)
ಒಟ್ಟು ಕೃಷಿ ವಲಯದ ಹಂಚಿಕೆ₹1,62,671 ಕೋಟಿ
ರಸಗೊಬ್ಬರ ಸಹಾಯಧನ (Fertilizer Subsidy)₹1.71 ಲಕ್ಷ ಕೋಟಿ
ಪಿಎಂ ಕಿಸಾನ್ (PM-KISAN)₹60,000 ಕೋಟಿಗಿಂತ ಅಧಿಕ (ಹೆಚ್ಚಳದ ನಿರೀಕ್ಷೆಯಿದೆ)
ಕೃಷಿ ಮೂಲಸೌಕರ್ಯ ಮತ್ತು ಸಂಶೋಧನೆಗಮನಾರ್ಹ ಏರಿಕೆ

ಕೃಷಿ ಮತ್ತು ಪೂರಕ ವಲಯಗಳಿಗೆ ಈ ಬಾರಿಯ ಬಜೆಟ್ ನಲ್ಲಿ ನಿಗದಿಪಡಿಸಿದ ಅನುದಾನದ ಮೊತ್ತದ ವಿವರ:

Central Budget 2026-ಬಜೆಟ್‌ನ ಇತರ ಪ್ರಮುಖ ಘೋಷಣೆಗಳು:

ಹೈಸ್ಪೀಡ್ ರೈಲು ಕಾರಿಡಾರ್: ಬೆಂಗಳೂರಿನಿಂದ ಎರಡು ನೆರೆರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆಯಾಗಿದ್ದು, ಇದು ಕರ್ನಾಟಕದ ಜನತೆಗೆ ದೊಡ್ಡ ಉಡುಗೊರೆಯಾಗಿದೆ.

ಆರೋಗ್ಯ ಕ್ಷೇತ್ರ: ಕ್ಯಾನ್ಸರ್, ಮಧುಮೇಹ ಸೇರಿದಂತೆ 7 ಅಪರೂಪದ ಕಾಯಿಲೆಗಳ ಔಷಧಿಗಳ ಬೆಲೆ ಇಳಿಕೆಯಾಗಲಿದೆ.

ಡಿಜಿಟಲ್ ಇಂಡಿಯಾ 2.0: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (MSME) ಬಡ್ಡಿ ಸಹಾಯಧನ ಮತ್ತು ರಫ್ತು ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಇದನ್ನೂ ಓದಿ: Adarsha Vidyalaya Admission-ಆದರ್ಶ ವಿದ್ಯಾನಿಯಲಗಳ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ!

ಸಾಮಾನ್ಯ ವರ್ಗ ಮತ್ತು ಮಧ್ಯಮ ವರ್ಗಕ್ಕೆ ಸಿಕ್ಕಿದ್ದೇನು?

ಸಾಮಾನ್ಯ ಜನರಿಗೆ ನೇರ ತೆರಿಗೆಯಲ್ಲಿ ದೊಡ್ಡ ಬದಲಾವಣೆಗಳಿಲ್ಲದಿದ್ದರೂ, ಸುಲಭ ಜೀವನಕ್ಕೆ (Ease of Living) ಒತ್ತು ನೀಡಲಾಗಿದೆ.

ಆದಾಯ ತೆರಿಗೆ: ಹೊಸ ತೆರಿಗೆ ಪದ್ಧತಿಯಲ್ಲಿ 4 ಲಕ್ಷ ರೂ.ವರೆಗೆ ಯಾವುದೇ ತೆರಿಗೆ ಇಲ್ಲ. ಸ್ಟ್ಯಾಂಡರ್ಡ್ ಡಿಡಕ್ಷನ್ (Standard Deduction) ಮತ್ತು ಇತರ ವಿನಾಯಿತಿಗಳನ್ನು ಸೇರಿಸಿದರೆ ಸುಮಾರು 12-13 ಲಕ್ಷ ರೂ. ವಾರ್ಷಿಕ ಆದಾಯದವರೆಗೆ ತೆರಿಗೆ ವಿನಾಯಿತಿ ಪಡೆಯುವ ಅವಕಾಶ ಮುಂದುವರಿದಿದೆ.

ಅಗ್ಗವಾಗುವ ವಸ್ತುಗಳು: ಸ್ಮಾರ್ಟ್‌ಫೋನ್, ಇವಿ ಬ್ಯಾಟರಿಗಳು, ಸೌರ ಫಲಕಗಳು (Solar Panels), ಔಷಧಿಗಳು ಮತ್ತು ಕ್ರೀಡಾ ಪರಿಕರಗಳ ಬೆಲೆ ಇಳಿಕೆಯಾಗಲಿದೆ.

ಇದನ್ನೂ ಓದಿ: Tarpaulin Subsidy 2026-ಕೃಷಿ ಇಲಾಖೆಯಿಂದ ಶೇ 90% ರಿಯಾಯಿತಿಯಲ್ಲಿ ಟಾರ್ಪಾಲಿನ್ ಪಡೆಯಲು ಅರ್ಜಿ!

ದುಬಾರಿಯಾಗುವ ವಸ್ತುಗಳು: ಸಿಗರೇಟ್, ತಂಬಾಕು ಉತ್ಪನ್ನಗಳು ಮತ್ತು ಆಮದು ಮಾಡಿಕೊಳ್ಳುವ ಐಷಾರಾಮಿ ವಸ್ತುಗಳ ಬೆಲೆ ಏರಿಕೆಯಾಗಲಿದೆ.

ಒಟ್ಟಾರೆಯಾಗಿ, 2026ರ ಬಜೆಟ್ ಕೃಷಿಯಲ್ಲಿ ಆಧುನಿಕತೆ ಮತ್ತು ಸಾಮಾನ್ಯ ಜೀವನದಲ್ಲಿ ಸ್ಥಿರತೆಯನ್ನು ತರುವ ಪ್ರಯತ್ನ ಮಾಡಿದೆ. ರೈತರಿಗೆ ತಂತ್ರಜ್ಞಾನದ ಸಾಥ್ ಸಿಕ್ಕರೆ, ಮಧ್ಯಮ ವರ್ಗದವರಿಗೆ ಅಗತ್ಯ ವಸ್ತುಗಳ ಬೆಲೆ ಇಳಿಕೆಯಿಂದ ತುಸು ನಿರಾಳತೆ ಸಿಕ್ಕಿದೆ. ಈ ಯೋಜನೆಗಳು ಹಂತ-ಹಂತವಾಗಿ ಜಾರಿಗೆ ಬಂದಾಗ ದೇಶದ ಆರ್ಥಿಕತೆಯಲ್ಲಿ ಮಹತ್ತರ ಬದಲಾವಣೆ ನಿರೀಕ್ಷಿಸಬಹುದು.

ಈ ವರ್ಷದ ಬಜೆಟ್ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೇಂದ್ರ ಸರಕಾರದ ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: