FID Number-ರಸಗೊಬ್ಬರ ಮಾಫಿಯಾಗೆ ‘ಫ್ರೂಟ್ಸ್’ ಬ್ರೇಕ್: ಇನ್ಮುಂದೆ FID ನಂಬರ್ ಇದ್ದರೆ ಮಾತ್ರ ಗೊಬ್ಬರ!

April 5, 2026 | Siddesh
FID Number-ರಸಗೊಬ್ಬರ ಮಾಫಿಯಾಗೆ ‘ಫ್ರೂಟ್ಸ್’ ಬ್ರೇಕ್: ಇನ್ಮುಂದೆ FID ನಂಬರ್ ಇದ್ದರೆ ಮಾತ್ರ ಗೊಬ್ಬರ!
Share Now:

ಬೆಂಗಳೂರು: ರಾಜ್ಯದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ಅಭಾವಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆ ಈಗ ಮಾಸ್ಟರ್ ಪ್ಲಾನ್ ರೂಪಿಸಿದೆ. ಇನ್ಮುಂದೆ ರೈತರು ರಸಗೊಬ್ಬರ ಪಡೆಯಲು ಕೇವಲ ಆಧಾರ್ ಕಾರ್ಡ್ ನೀಡಿದರೆ ಸಾಲದು, ಬದಲಿಗೆ ಕಡ್ಡಾಯವಾಗಿ 'ಫ್ರೂಟ್ಸ್ ಐಡಿ' (FID) ಹೊಂದಿರಲೇಬೇಕು. ಮುಂಗಾರು ಹಂಗಾಮು ಆರಂಭವಾಗುತ್ತಿರುವ ಬೆನ್ನಲ್ಲೇ ಈ ಹೊಸ ನಿಯಮವನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದ್ದು, ಗೊಬ್ಬರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಇದರ ಮುಖ್ಯ ಉದ್ದೇಶವಾಗಿದೆ.

ಕಳೆದ ಕೆಲವು ವರ್ಷಗಳಿಂದ ಗೊಬ್ಬರ(Fertilizer) ವಿತರಣೆಯಲ್ಲಿ ವ್ಯಾಪಕ ಅವ್ಯವಹಾರಗಳು ನಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಕೆಲವು ಮಧ್ಯವರ್ತಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ನಕಲಿ ಆಧಾರ್ ಸಂಖ್ಯೆಗಳನ್ನು ಬಳಸಿ ಅಥವಾ ರೈತರ ಹೆಸರಿನಲ್ಲಿ ದೊಡ್ಡ ಪ್ರಮಾಣದ ಗೊಬ್ಬರವನ್ನು ದಾಸ್ತಾನು ಮಾಡಿ, ಅದನ್ನು ಕೈಗಾರಿಕೆಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇದರಿಂದಾಗಿ ನೈಜ ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗದೆ ಸಂಕಷ್ಟ ಅನುಭವಿಸುವಂತಾಗಿತ್ತು. ಈ ‘ರಸಗೊಬ್ಬರ ಮಾಫಿಯಾ’ಗೆ ಈಗ ಎಫ್‌ಐಡಿ (FID) ಮೂಲಕ ಕೃಷಿ ಇಲಾಖೆ ಬಲವಾದ ಕಡಿವಾಣ ಹಾಕಿದೆ.

ಇದನ್ನೂ ಓದಿ: SSLC Key Answer-SSLC ಪರೀಕ್ಷೆ 1ರ ಕೀ ಉತ್ತರಗಳು ಬಿಡುಗಡೆ: ಏಪ್ರಿಲ್ 24ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ!

ಈ ಹೊಸ ವ್ಯವಸ್ಥೆಯಡಿ, ರೈತರು ಗೊಬ್ಬರ ಖರೀದಿಸುವಾಗ ನೀಡುವ ಫ್ರೂಟ್ಸ್ ಐಡಿಯನ್ನು ತಂತ್ರಾಂಶದಲ್ಲಿ ಪರಿಶೀಲಿಸಲಾಗುತ್ತದೆ. ಆ ರೈತನ ಹೆಸರಿನಲ್ಲಿ ಎಷ್ಟು ಜಮೀನಿದೆ ಮತ್ತು ಆ ಬೆಳೆಗೆ ಎಷ್ಟು ಗೊಬ್ಬರದ ಅವಶ್ಯಕತೆ ಇದೆ ಎಂಬುದನ್ನು ಆಧರಿಸಿ ನಿಗದಿತ ಪ್ರಮಾಣದ ಗೊಬ್ಬರವನ್ನು ಮಾತ್ರ ವಿತರಿಸಲಾಗುತ್ತದೆ. ಇದರಿಂದ ಅನಗತ್ಯ ದಾಸ್ತಾನು ತಡೆಯುವುದಲ್ಲದೆ, ಜಿಲ್ಲಾ ಮತ್ತು ರಾಜ್ಯ ಮಟ್ಟದ ಸಮಿತಿಗಳ ಮೂಲಕ ಕಟ್ಟುನಿಟ್ಟಿನ ನಿಗಾ ವಹಿಸಲು ಸಾಧ್ಯವಾಗುತ್ತದೆ.

ಇಂದಿನ ಲೇಖನದಲ್ಲಿ ಪ್ರೂಟ್ಸ್ ಐಡಿ ಎಂದರೇನು? ಇದನ್ನು ಪಡೆಯುವುದು ಹೇಗೆ? ಪ್ರೂಟ್ಸ್ ಐಡಿ ಪಡೆಯಲು ಅವಶ್ಯಕ ದಾಖಲೆಗಳು ಯಾವುವು? ಈ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

What Is FID Number-ಪ್ರೂಟ್ಸ್ ಐಡಿ ಎಂದರೇನು?

FRUITS ಎಂದರೆ Farmer Registration and Unified Beneficiary Information System. ಇದು ಕರ್ನಾಟಕ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಡಿಜಿಟಲ್ ಪೋರ್ಟಲ್ ಆಗಿದ್ದು, ರಾಜ್ಯದ ಪ್ರತಿಯೊಬ್ಬ ರೈತನ ಜಮೀನಿನ ವಿವರ ಮತ್ತು ವೈಯಕ್ತಿಕ,ಬ್ಯಾಂಕಿ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಂಗ್ರಹಿಸುತ್ತದೆ. ಇದು ರೈತರಿಗೆ ವಿಶಿಷ್ಟವಾದ FID (Farmer ID) ಸಂಖ್ಯೆಯನ್ನು ನೀಡುತ್ತದೆ. ಸರ್ಕಾರದ ವಿವಿಧ ಯೋಜನೆಯ ಪ್ರಯೋಜನವನ್ನು ಪಡೆಯಲು ಈ ಐಡಿ ಕಡ್ಡಾಯವಾಗಿದೆ.

ಇದನ್ನೂ ಓದಿ: Free Tailoring Course-ಮಹಿಳೆಯರಿಗೆ ಉಚಿತ ಟೈಲರಿಂಗ್‌ ತರಬೇತಿಗಾಗಿ ಅರ್ಜಿ ಆಹ್ವಾನ!

Fertilizer Stock Details-ಪ್ರಸ್ತುತ ರಸಗೊಬ್ಬರ ದಾಸ್ತಾನು ಅಂಕಿ-ಅಂಶ:

ರಾಜ್ಯದಲ್ಲಿ ಈ ಬಾರಿಯ ಮುಂಗಾರು ಹಂಗಾಮಿಗೆ 30.05 ಲಕ್ಷ ಮೆ.ಟನ್ ರಸಗೊಬ್ಬರ ಅವಶ್ಯಕವಿದ್ದು ಪ್ರಸ್ತುತ 11.42 ಲಕ್ಷ ಮೆ.ಟನ್ ದಾಸ್ತಾಅನು ಲಭ್ಯವಿರುತ್ತದೆ.

Fruits ID-ಪ್ರೂಟ್ಸ್ ಐಡಿ ಇದ್ದರೆ ಮಾತ್ರ ರಸಗೊಬ್ಬರ:

ಅರ್ಹತೆ ಪರಿಶೀಲನೆ: ರೈತರು ಗೊಬ್ಬರ ಅಂಗಡಿಗೆ ಹೋದಾಗ ತಮ್ಮ FID ನೀಡಬೇಕು.

ಜಮೀನು ಆಧಾರಿತ ವಿತರಣೆ: ಈ ಐಡಿ ಮೂಲಕ ರೈತನ ಜಮೀನಿನ ವಿಸ್ತೀರ್ಣಕ್ಕೆ ತಕ್ಕಂತೆ ಮಾತ್ರ ಗೊಬ್ಬರ ನೀಡಲಾಗುತ್ತದೆ.

ದುರುಪಯೋಗಕ್ಕೆ ತಡೆ: ಒಬ್ಬರೇ ವ್ಯಕ್ತಿ ಬೇರೆ ಬೇರೆ ಹೆಸರಿನಲ್ಲಿ ಗೊಬ್ಬರ ಖರೀದಿಸಿ ಕಾಳಸಂತೆಯಲ್ಲಿ ಮಾರುವುದನ್ನು ಇದು ಸಂಪೂರ್ಣವಾಗಿ ತಡೆಯಲು ಸಹಕಾರಿಯಾಗಿದೆ.

ಇದನ್ನೂ ಓದಿ: Free Computer Courses-ಉಚಿತ ಕಂಪ್ಯೂಟರ್ ಕಲಿಕಾ ತರಬೇತಿಗೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ!

FID Number

ಇದನ್ನೂ ಓದಿ: Government Office Timings-ಸರ್ಕಾರಿ ಕಚೇರಿಗಳ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆ!

How To Get FID Number-ಪ್ರೂಟ್ಸ್ ಐಡಿ ಪಡೆಯುವುದು ಹೇಗೆ?

ಕೃಷಿಕರು ಎರಡು ವಿಧಾನವನ್ನು ಅನುಸರಿಸಿ ಪ್ರೂಟ್ಸ್ ಐಡಿ ಪಡೆಯಲು ಅರ್ಜಿ ಸಲ್ಲಿಸಬಹುದು ಒಂದು ಅಗತ್ಯ ದಾಖಲೆಗಳ ಸಮೇತ ನೇರವಾಗಿ ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ಈ ಕೆಳಗೆ ನೀಡಿರುವ ವೆಬ್ಸೈಟ್ ಅನ್ನು ಭೇಟಿ ಮಾಡಿ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು.

Fruits Website-ಪ್ರೂಟ್ಸ್ ಅಧಿಕೃತ ವೆಬ್ಸೈಟ್- Click Here

ಇದನ್ನೂ ಓದಿ: Census-2026: ಇಂದಿನಿಂದ ಮೊಬೈಲ್ ಮೂಲಕ ಸ್ವಯಂ-ಜನಗಣತಿ ಆರಂಭ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

Documents For FID Number-ಪ್ರೂಟ್ಸ್ ಐಡಿಗಾಗಿ ಅವಶ್ಯಕ ದಾಖಲೆಗಳು:

ಪ್ರೂಟ್ಸ್ ಐಡಿಯನ್ನು ಪಡೆಯಲು ಅವಶ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:

  • ಆಧಾರ್ ಕಾರ್ಡ್ ಸಂಖ್ಯೆ.
  • ಜಮೀನಿನ ಪಹಣಿ (RTC) ವಿವರಗಳು.
  • ಬ್ಯಾಂಕ್ ಪಾಸ್ ಬುಕ್ ಪ್ರತಿ.
  • ಜಾತಿ ಪ್ರಮಾಣ ಪತ್ರ (ಅನ್ವಯವಾಗುವಲ್ಲಿ).
  • ಇತ್ತೀಚಿನ ಭಾವಚಿತ್ರ.

ಗಮನಿಸಿ: ಮುಂಬರುವ ಮುಂಗಾರು ಹಂಗಾಮಿಗೆ ರಾಜ್ಯದಲ್ಲಿ ಸುಮಾರು 30.05 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ರೈತರು ಯಾವುದೇ ತೊಂದರೆಯಿಲ್ಲದೆ ಗೊಬ್ಬರ ಪಡೆಯಲು ಕೂಡಲೇ ತಮ್ಮ ಹೆಸರನ್ನು ಫ್ರೂಟ್ಸ್ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳುವುದು ಉತ್ತಮ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: