Voter List-2026: ಪರಿಷ್ಕೃತ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!

April 6, 2026 | Siddesh
Voter List-2026: ಪರಿಷ್ಕೃತ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಚೆಕ್ ಮಾಡಿ!
Share Now:

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನ ಮತವೂ ಅತ್ಯಂತ ಅಮೂಲ್ಯವಾದುದು. ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ, ಚುನಾವಣಾ ಆಯೋಗವು 2026ರ ಪರಿಷ್ಕೃತ ಮತದಾರರ ಪಟ್ಟಿಯನ್ನು(Voter ID List) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಕೇವಲ ಹಕ್ಕಲ್ಲ, ಅದು ನಿಮ್ಮ ಜವಾಬ್ದಾರಿಯೂ ಆಗಿದೆ. ಒಂದು ವೇಳೆ ಈ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಅಥವಾ ವಿವರಗಳಲ್ಲಿ ತಪ್ಪುಗಳಿದ್ದರೆ, ನೀವು ಮತದಾನದ ಹಕ್ಕಿನಿಂದ ವಂಚಿತರಾಗುವ ಸಾಧ್ಯತೆ ಇರುತ್ತದೆ.

ರಾಜ್ಯ ಚುನಾವಣಾ ಆಯೋಗವು(Election Commission) ತಂತ್ರಜ್ಞಾನದ ನೆರವಿನಿಂದ ಮತದಾರರಿಗೆ ಸುಲಭವಾಗಿ ಮಾಹಿತಿ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ಈಗ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲದೆ, ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಮನೆಯಲ್ಲೇ ಕುಳಿತು 'ವೋಟರ್ ಲಿಸ್ಟ್/Voter List-2026' ಚೆಕ್ ಮಾಡಬಹುದು. ಹೊಸದಾಗಿ 18 ವರ್ಷ ತುಂಬಿದ ಯುವ ಮತದಾರರು ತಮ್ಮ ಹೆಸರನ್ನು ಸೇರಿಸಲು ಮತ್ತು ಹಳೆಯ ಮತದಾರರು ತಮ್ಮ ವಿಳಾಸ ಅಥವಾ ಇತರೆ ಬದಲಾವಣೆಗಳನ್ನು ಮಾಡಿಕೊಳ್ಳಲು ಈ ಪರಿಷ್ಕೃತ ಪಟ್ಟಿ ಒಂದು ಉತ್ತಮ ಅವಕಾಶವಾಗಿದೆ.

ಇದನ್ನೂ ಓದಿ: FID Number-ರಸಗೊಬ್ಬರ ಮಾಫಿಯಾಗೆ ‘ಫ್ರೂಟ್ಸ್’ ಬ್ರೇಕ್: ಇನ್ಮುಂದೆ FID ನಂಬರ್ ಇದ್ದರೆ ಮಾತ್ರ ಗೊಬ್ಬರ!

ಮತದಾರರ ಪಟ್ಟಿಯಲ್ಲಿ(Voter ID Online Status) ನಿಮ್ಮ ಹೆಸರು ಅಧಿಕೃತವಾಗಿ ದಾಖಲಾಗಿದೆಯೇ ಎಂದು ತಿಳಿಯಲು ಹಾಗೂ ನಿಮ್ಮ ಮತಗಟ್ಟೆಯ ವಿವರಗಳನ್ನು ಪಡೆಯಲು ಆನ್‌ಲೈನ್ ವಿಧಾನವು ಅತ್ಯಂತ ಸರಳವಾಗಿದೆ. ನಿಮ್ಮ ಬಳಿ ಇರುವ EPIC ಸಂಖ್ಯೆಯನ್ನು ಬಳಸಿಕೊಂಡು ಕೆಲವೇ ನಿಮಿಷಗಳಲ್ಲಿ ನಿಮ್ಮ ವೋಟರ್ ಐಡಿಯ ಸ್ಥಿತಿಗತಿಯನ್ನು ನೀವು ತಿಳಿದುಕೊಳ್ಳಬಹುದು. ಈ ಪ್ರಕ್ರಿಯೆಯ ಸಂಪೂರ್ಣ ಹಂತಗಳನ್ನು ಕೆಳಗೆ ವಿವರವಾಗಿ ನೀಡಲಾಗಿದೆ.

Online Voter ID Status-ಪರಿಷ್ಕೃತ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರಿದಿಯಾ ಎಂದು ಚೆಕ್ ಮಾಡುವುದು ಹೇಗೆ?

ನಾಗರಿಕರು ರಾಜ್ಯ ಸರಕಾರದ ಎಲೆಕ್ಷನ್ ಕಮೀಶನ್ ನ ಅಧಿಕೃತ ತಂತ್ರಾಂಶವನ್ನು ಭೇಟಿ ಮಾಡಿ ಪರಿಷ್ಕೃತ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇನ್ನಿತರೆ ವಿವರ ಸರಿಯಾಗಿ ನಮೂದಿಸಲಾಗಿದಿಯೇ ಎಂದು ಈ ಕೆಳಗಿನ ವಿಧಾನವನ್ನು ಅನುಸರಿಸಿ ಚೆಕ್ ಮಾಡಿಕೊಳ್ಳಬಹುದು.

Step-1: ಸಾರ್ವಜನಿಕರು ಮೊದಲಿಗೆ ಈ Voter ID Status Check ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೋಟರ್ ಐಡಿಗೆ ಸಂಬಂಧಪಟ್ಟ ತಂತ್ರಾಂಶವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: SSLC Key Answer-SSLC ಪರೀಕ್ಷೆ 1ರ ಕೀ ಉತ್ತರಗಳು ಬಿಡುಗಡೆ: ಏಪ್ರಿಲ್ 24ಕ್ಕೆ ಫಲಿತಾಂಶ ಪ್ರಕಟವಾಗುವ ಸಾಧ್ಯತೆ!

Voter List

ಇದನ್ನೂ ಓದಿ: Free Tailoring Course-ಮಹಿಳೆಯರಿಗೆ ಉಚಿತ ಟೈಲರಿಂಗ್‌ ತರಬೇತಿಗಾಗಿ ಅರ್ಜಿ ಆಹ್ವಾನ!

Step-2: ಇದಾದ ಬಳಿಕ ಇಲ್ಲಿ ಮುಖಪುಟದಲ್ಲಿ ಕಾಣಿಸುವ "ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಬೇಕೆ?" ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ನಂತರ ಈ ಪೇಜ್ ನಲ್ಲಿ ಭಾಷೆ "ಕನ್ನಡ" ಎಂದು ಆಯ್ಕೆ ಮಾಡಿಕೊಂಡು ನಿಮ್ಮ ವೋಟರ್ ಐಡಿಯಲ್ಲಿರುವ EPIC Number ಅನ್ನು ನಮೂದಿಸಿ ರಾಜ್ಯ "Karnataka" ಎಂದು ಆಯ್ಕೆ ಮಾಡಿಕೊಂಡು ಕೆಳಗೆ ಕಾಣಿಸುವ ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ "Search" ಬಟನ್ ಮೇಲೆ ಕ್ಲಿಕ್ ಮಾಡಿದರೆ ವೋಟರ್ ಐಡಿ ಪಟ್ಟಿಯಲ್ಲಿ ನಿಮ್ಮ ಹೆಸರಿನ ವಿವರವನ್ನು ಇಲ್ಲಿ ನೀವು ನೋಡಬಹುದು. ಒಮ್ಮೆ ಎಲ್ಲಾ ವಿವರ ಸರಿಯಾಗಿದಿಯಾ? ಎಂದು ಖಚಿತಪಡಿಸಿಕೊಳ್ಳಿ ತಪ್ಪಿದ್ದಲ್ಲಿ ನಿಮ್ಮ ಹಳ್ಳಿ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಯನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿ ವಿವರವನ್ನು ಸರಿಪಡಿಸಿಕೊಳ್ಳಿ.

ಇದನ್ನೂ ಓದಿ: Free Computer Courses-ಉಚಿತ ಕಂಪ್ಯೂಟರ್ ಕಲಿಕಾ ತರಬೇತಿಗೆ ಅರ್ಜಿ ಆಹ್ವಾನ! ಇಂದೇ ಅರ್ಜಿ ಸಲ್ಲಿಸಿ!

Voter ID Importance-ವೋಟರ್ ಐಡಿ ಪ್ರಾಮುಖ್ಯತೆ ಏನು?

ಮತದಾರರ ಗುರುತಿನ ಚೀಟಿಯು ಕೇವಲ ಚುನಾವಣೆಯಲ್ಲಿ ಮತ ಚಲಾಯಿಸಲು ಬಳಸುವ ಕಾರ್ಡ್ ಮಾತ್ರವಲ್ಲ, ಇದು ಒಬ್ಬ ನಾಗರಿಕನಿಗೆ ಹಲವು ವಿಧಗಳಲ್ಲಿ ಸಹಕಾರಿಯಾಗಿದೆ:

ದೇಶದ ಭವಿಷ್ಯವನ್ನು ನಿರ್ಧರಿಸುವ ನಾಯಕರನ್ನು ಆಯ್ಕೆ ಮಾಡಲು ಮತದಾನ ಮಾಡುವುದು ಅತಿ ಮುಖ್ಯ. ಈ ಹಕ್ಕನ್ನು ಚಲಾಯಿಸಲು ವೋಟರ್ ಐಡಿ ಪ್ರಾಥಮಿಕ ದಾಖಲೆಯಾಗಿದೆ.

ಭಾರತ ಸರ್ಕಾರದ ಚುನಾವಣಾ ಆಯೋಗ ನೀಡುವುದರಿಂದ, ಇದು ಭಾರತದಾದ್ಯಂತ ಅತ್ಯಂತ ವಿಶ್ವಾಸಾರ್ಹವಾದ ಗುರುತಿನ ಚೀಟಿ (Identity Proof) ಆಗಿ ಬಳಕೆಯಾಗುತ್ತದೆ.

ಇದನ್ನೂ ಓದಿ: Government Office Timings-ಸರ್ಕಾರಿ ಕಚೇರಿಗಳ ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆ!

ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್ ಪಡೆಯಲು ಅಥವಾ ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಇದನ್ನು ವಿಳಾಸದ ಪುರಾವೆ (Address Proof) ಆಗಿ ಬಳಸಬಹುದು.

ಇದರಲ್ಲಿ ಜನ್ಮ ದಿನಾಂಕ ಮತ್ತು ವಿಳಾಸವನ್ನು ನಮೂದಾಗಿರುವುದರಿಂದ, ವಯಸ್ಸಿನ ಹಾಗೂ ವಿಳಾಸದ ಪುರಾವೆಯಾಗಿ ವಿವಿಧ ಕಡೆಗಳಲ್ಲಿ ಸಲ್ಲಿಸಬಹುದು.

ನೀವು ಭಾರತದ ಕಾನೂನುಬದ್ಧ ಪ್ರಜೆ ಎಂಬುದಕ್ಕೆ ಇದು ಒಂದು ಪ್ರಬಲ ದಾಖಲೆಯಾಗಿದೆ.

ಇದನ್ನೂ ಓದಿ: Census-2026: ಇಂದಿನಿಂದ ಮೊಬೈಲ್ ಮೂಲಕ ಸ್ವಯಂ-ಜನಗಣತಿ ಆರಂಭ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್!

New Voter ID Application-ಹೊಸದಾಗಿ ವೋಟರ್ ಐಡಿಗೆ ಸೇರ್ಪಡೆ ಮಾಡುವುದು ಹೇಗೆ?

ವೋಟರ್ ಐಡಿ ಒಂದು ಕೇವಲ ದಾಖಲೆ ಅಗಿರುವುದಿಲ್ಲ ಪ್ರತಿಯೊಬ್ಬರ ಭಾರತೀಯ ನಾಗರಿಕರು ತಮ್ಮ ಹಕ್ಕನ್ನು ಪ್ರತಿಪಾದಿಸಲು ತಮ್ಮ ಬಳಿ ಹೊಂದಿರಬೇಕಾದ ಪ್ರಮುಖ ದಾಖಲೆಯಾಗಿದ್ದು ಈ ದಾಖಲೆಯನ್ನು ಪಡೆಯಲು ಅರ್ಹರಿರುವ ನಾಗರಿಕರು ಎರಡು ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು ಒಂದು ನೇರವಾಗಿ ಅಧಿಕೃತ ವೆಬ್ಸೈಟ್ ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ಗ್ರಾಮ ಒನ್ ಅಥವಾ ನಿಮ್ಮ ಹಳ್ಳಿ ಮಟ್ಟದ ಬೂತ್ ಅಧಿಕಾರಿಗಳನ್ನು ಭೇಟಿ

How To Apply For New Voter ID-ಎಲ್ಲಿ ಅರ್ಜಿ ಸಲ್ಲಿಸಬೇಕು?

ಗುರುತಿನ ಚೀಟಿ/Voter ID ಅನ್ನು ಪಡೆಯಲು ಅರ್ಹ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ಹತ್ತಿರದ ಗ್ರಾಮ ಒನ್ ಅಥವಾ ನಿಮ್ಮ ಹಳ್ಳಿ ವ್ಯಾಪ್ತಿಯ ಶಾಲಾ ಶಿಕ್ಷಕರನ್ನು ಭೇಟಿ ಮಾಡಿ ಆಪ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ ಪಡೆದು ಅರ್ಜಿ ಸಲ್ಲಿಸಬಹುದು.

Required Documents For Voter ID-ಅವಶ್ಯಕ ದಾಖಲೆಗಳು:

ಈ ವರ್ಷಕ್ಕೆ 18 ವರ್ಷ ಭರ್ತಿಯಾಗುವ ಭಾರತೀಯ ನಾಗರಿಕರು ವೋಟರ್ ಐಡಿಯನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

1) ಅಭ್ಯರ್ಥಿಯ ಆಧಾರ್ ಕಾರ್ಡ್
2) ಪೋಟೋ
3) ನಿವಾಸಿ ದೃಡೀಕರಣ ಪ್ರಮಾಣ ಪತ್ರ
4) ಮೊಬೈಲ್ ನಂಬರ್

Voter ID Helpline Number-ಹೆಚ್ಚಿನ ಮಾಹಿತಿಗಾಗಿ:

  • ಸಹಾಯವಾಣಿಗಳು: 1950/180042551950
  • ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: