VB-G RAM G Scheme: ಕುರಿ-ಮೇಕೆ ಮತ್ತು ಕೋಳಿ ಶೆಡ್ ನಿರ್ಮಾಣಕ್ಕೆ ₹83,000 ಹಾಗೂ ₹66,000 ನೆರವು! ಇಂದೇ ಅರ್ಜಿ ಸಲ್ಲಿಸಿ!

November 22, 2026 | Siddesh
VB-G RAM G Scheme: ಕುರಿ-ಮೇಕೆ ಮತ್ತು ಕೋಳಿ ಶೆಡ್ ನಿರ್ಮಾಣಕ್ಕೆ ₹83,000 ಹಾಗೂ ₹66,000 ನೆರವು! ಇಂದೇ ಅರ್ಜಿ ಸಲ್ಲಿಸಿ!
Share Now:

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ವಿಬಿ-ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಭಾಗದ ಜನರಿಗೆ ಕುರಿ-ಮೇಕೆ ಮತ್ತು ಕೋಳಿ ಶೆಡ್ ನಿರ್ಮಾಣಕ್ಕೆ ನಿರ್ಮಾಣಕ್ಕೆ ₹83,000 ಹಾಗೂ ₹66,000 ಆರ್ಥಿಕ ನೆರವನ್ನು ಪಡೆಯಲು ಅವಕಾಶವಿದ್ದು ಈ ಕುರಿತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅಧಿಕೃತವಾಗಿ ಪ್ರಕಟಣೆಯನ್ನು ಹೊರಡಿಸಲಾಗಿದ್ದು ಇದರ ವಿವರವನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಗ್ರಾಮೀಣ ಭಾಗದಲ್ಲಿ ವಾಸಿಸುವ ಜನರು ಕೃಷಿಯ ಜೊತೆಗೆ ಕುರಿ, ಮೇಕೆ ಹಾಗೂ ಕೋಳಿ ಸಾಕಾಣಿಕೆ ಮಾಡಿಕೊಂಡು ಹೆಚ್ಚುವರಿ ಆದಾಯ ಗಳಿಸಲು ಬಯಸುತ್ತಿದ್ದರೆ ಈ ಯೋಜನೆಯ ಪ್ರಯೋಜನವನ್ನು ಪಡೆಯಬಹುದು, ಕುರಿ-ಮೇಕೆ ಸಾಕಾಣಿಕೆ ಮತ್ತು ಕೋಳಿ ಸಾಕಾಣಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವತಿಯಿಂದ ಶೆಡ್ ನಿರ್ಮಾಣಕ್ಕೆ ವಿಬಿ-ಜಿ ರಾಮ್ ಜಿ ಯೋಜನೆಯಡಿ ಧನ ಸಹಾಯವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Negila Yogi Scheme-ಕೃಷಿ ಇಲಾಖೆಯಿಂದ ನೇಗಿಲಯೋಗಿ ಯೋಜನೆಯಡಿ ಗರಿಷ್ಥ 4500/- ಪ್ರೋತಾಹಧನ!

ಹಾಗಾದರೆ ಈ ಯೋಜನೆಯಡಿ ಸಹಾಯಧನವನ್ನು ಪಡೆಯುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನ? ಅಗತ್ಯ ದಾಖಲೆಗಳು ಯಾವುವು? ಅರ್ಜಿ ವಿಲೇವಾರಿ ಪಕ್ರಿಯೆ ಹೇಗಿರುತ್ತದೆ? ಕುರಿ-ಮೇಕೆ ಮತ್ತು ಕೋಳಿ ಶೆಡ್ ನಿರ್ಮಾಣಕ್ಕೆ ದೊರೆಯುವ ನೆರವಿನ ವಿವರಗಳೇನು? ಎನ್ನುವ ಸಂಪೂರ್ಣ ವಿವರವನ್ನು ಮುಂದೆ ತಿಳಿಯೋಣ.

Sheep Goat Shed Subsidy Amount-ಕುರಿ-ಮೇಕೆ ಶೆಡ್ ನಿರ್ಮಾಣಕ್ಕೆ ₹83,000 ನೆರವು!

ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡಲು ಆಸಕ್ತಿ ಹೊಂದಿರುವ ಗ್ರಾಮೀಣ ಭಾಗದ ಕುಟುಂಬಗಳಿಗೆ ಈ ಯೋಜನೆ ಅನುಕೂಲವಾಗಲಿದೆ. ಕುರಿ-ಮೇಕೆಗಳನ್ನು ಸುರಕ್ಷಿತವಾಗಿ ಸಾಕಲು ಅಗತ್ಯವಿರುವ ಶೆಡ್ ನಿರ್ಮಾಣ ಕಾಮಗಾರಿಗೆ ₹83,000 ವರೆಗೆ ನೆರವನ್ನು ಪಡೆಯಬಹುದು.

ಶೆಡ್ ನಿರ್ಮಾಣದ ಮೂಲಕ ಕುರಿ-ಮೇಕೆಗಳನ್ನು ಮಳೆ, ಬಿಸಿಲು ಹಾಗೂ ಇತರ ಹವಾಮಾನ ವೈಪರೀತ್ಯಗಳಿಂದ ರಕ್ಷಿಸಿಕೊಳ್ಳಬಹುದು. ಇದರಿಂದ ಸಾಕಾಣಿಕೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯವಾಗಲಿದೆ.

ಇದನ್ನೂ ಓದಿ: Scholarship Application-ಪಿಯುಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ!

Poultry Shed Subsidy Amount-ಕೋಳಿ ಶೆಡ್ ನಿರ್ಮಾಣಕ್ಕೆ ₹66,000 ನೆರವು!

ಕೋಳಿ ಸಾಕಾಣಿಕೆಯನ್ನು ಉಪಕಸುಬಾಗಿ ಅಥವಾ ಸ್ವಯಂ ಉದ್ಯೋಗವಾಗಿ ಪ್ರಾರಂಭಿಸಲು ಬಯಸುವವರಿಗೂ ಈ ಯೋಜನೆಯಡಿ ಅವಕಾಶವಿದ್ದು ಕೋಳಿ ಸಾಕಾಣಿಕೆಗಾಗಿ ಅಗತ್ಯವಿರುವ ಶೆಡ್ ನಿರ್ಮಾಣ ಕಾಮಗಾರಿಗೆ ₹66,000 ವರೆಗೆ ನೆರವುವನ್ನು ವಿಬಿ-ಜಿ ರಾಮ್ ಜಿ ಯೋಜನೆಯಡಿ ಪಡೆಯಲು ಅವಕಾಶವಿರುತ್ತದೆ ಎಂದು ಇಲಾಖೆಯ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Dairy Farming-ಉಚಿತ ಕುರಿ-ಆಡು ಸಾಕಾಣಿಕೆ ಜೊತೆ ಹೈನುಗಾರಿಕೆಗೆ ತರಬೇತಿ!ಇಂದೇ ಅರ್ಜಿ ಸಲ್ಲಿಸಿ!

Sheep Goat Shed Subsidy Yojana

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

VB-G RAM G Scheme In Karnataka-125 ದಿನಗಳ ಉದ್ಯೋಗಾವಕಾಶ ಮತ್ತು ದಿನಕ್ಕೆ ₹382 ಕೂಲಿ:

ಈ ಯೋಜನೆಯ ಮತ್ತೊಂದು ಪ್ರಮುಖ ಅಂಶವೆಂದರೆ ಶೆಡ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ 125 ದಿನಗಳ ಕೆಲಸದ ಅವಕಾಶವನ್ನು ನೀಡಲಾಗಿದ್ದು ಇದರ ವಿವರ ಹೀಗಿದೆ:

  • ಉದ್ಯೋಗದ ಅವಧಿ: 125 ದಿನಗಳು
  • ದಿನದ ಕೂಲಿ ದರ: ₹382
  • ಕುರಿ-ಮೇಕೆ ಶೆಡ್ ನಿರ್ಮಾಣ ನೆರವು: ₹83,000
  • ಕೋಳಿ ಶೆಡ್ ನಿರ್ಮಾಣ ನೆರವು: ₹66,000

ಈ ಮೂಲಕ ಗ್ರಾಮೀಣ ಭಾಗದ ಜನರಿಗೆ ಪಶುಸಾಕಾಣಿಕೆಗೆ ಮೂಲಸೌಕರ್ಯ ಕಲ್ಪಿಸುವುದರ ಜೊತೆಗೆ ಗ್ರಾಮೀಣ ಭಾಗದ ನಾಗರಿಕರಿಗೆ ಉದ್ಯೋಗಾವಕಾಶ ಸಹ ಒದಗಿಸಿದಂತಾಗುತ್ತದೆ.

ಇದನ್ನೂ ಓದಿ: e-Swathu Document-ಕೃಷಿ ಜಮೀನಿನ ಕಟ್ಟಡಕ್ಕೆ ಇ-ಸ್ವತ್ತು ಪಡೆಯಲು ಈ ದಾಖಲೆ ಕಡ್ಡಾಯ!

Poultry Shed Subsidy Scheme

Required Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ಅರ್ಜಿ ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ್.
  • ರೇಷನ್ ಕಾರ್ಡ್.
  • ಬ್ಯಾಂಕ್ ಪಾಸ್‌ಬುಕ್ ಪ್ರತಿ.
  • ಪಾಸ್‌ಪೋರ್ಟ್ ಅಳತೆಯ ಫೋಟೋ.
  • ಉದ್ಯೋಗ ಖಾತರಿ ಜಾಬ್ ಕಾರ್ಡ್ (ಇದ್ದಲ್ಲಿ).

ಇದನ್ನೂ ಓದಿ: Bara Parihara-2026: ಬರ ಪರಿಹಾರ ಡಿಸೆಂಬರ್ ಅಂತ್ಯದೊಳಗೆ ರೈತರ ಖಾತೆಗೆ ₹5000!

Application Procces-ಅರ್ಜಿ ವಿಲೇವಾರಿ ಪ್ರಕ್ರಿಯೆ ಹೇಗಿರುತ್ತದೆ?

ಆಸಕ್ತ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಸಿದ್ದಪಡಿಸಿಕೊಂಡು ತಮ್ಮ ಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಕಚೇರಿಯನ್ನು ನೇರವಾಗಿ ಭೇಟಿ ಮಾಡಿ ಕ್ರಿಯಯೋಜನೆಯನ್ನು ಈ ಕಾಮಗಾರಿಯನ್ನು ಸೇರ್ಪಡೆ ಮಾಡಿ ಅನುಮೋದನೆಯನ್ನು ತೆಗೆದುಕೊಳ್ಳಲು ಅರ್ಜಿ ಸಲ್ಲಿಸಬೇಕು.

ಒಮ್ಮೆ ಕ್ರ‍ಿಯ ಯೋಜನೆ ಅನುಮೋದನೆ ಆದ ಬಳಿಕ ಗ್ರಾಮ ಪಂಚಾಯಿತಿಯಿಂದ ಕಾಮಗಾರಿಯನ್ನು ಪ್ರಾರಂಭಿಸಲು ಆದೇಶ ಪತ್ರವನ್ನು ನೀಡಿದ ನಂತರ ಅರ್ಜಿದಾರರು ಕಾಮಗಾರಿ/ಕುರಿ/ಕೋಳಿ ಶೆಡ್ ಅನ್ನು ನಿರ್ಮಾಣ ಮಾಡಿಕೊಳ್ಳಬಹುದು.

VB-G RAM G Scheme Helpline-ಯೋಜನೆಯ ಕುರಿತು ಇನ್ನು ಹೆಚ್ಚಿನ ಮಾಹಿತಿ ಪಡೆಯಲು ಸಹಾಯವಾಣಿ ಸಂಖ್ಯೆ- 8277506000 ಅಧಿಕೃತ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: