Airtel Scholarship- ಏರ್‌ಟೆಲ್ ಫೌಂಡೇಶನನಿಂದ ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ!

June 12, 2025 | Siddesh
Airtel Scholarship- ಏರ್‌ಟೆಲ್ ಫೌಂಡೇಶನನಿಂದ ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿವೇತನ ಪಡೆಯಲು ಅರ್ಜಿ!
Share Now:

ಏರ್‌ಟೆಲ್ ಫೌಂಡೇಶನ್‌ನಿಂದ ಭಾರ್ತಿ ಏರ್‌ಟೆಲ್ ವಿದ್ಯಾರ್ಥಿವೇತನ(Bharti Airtel Scholarship Program 2025)ಕಾರ್ಯಕ್ರಮದಡಿ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿವೇತನವನ್ನು ನೀಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣವನ್ನು(Bharti Airtel Scholarship) ಪಡೆಯುವುದರಿಂದ ಹಿಂದೆ ಸರಿಯುವುದನ್ನು ತಪ್ಪಿಸಲು ಭಾರ್ತಿ ಏರ್‌ಟೆಲ್ ವಿದ್ಯಾರ್ಥಿವೇತನ ಕಾರ್ಯಕ್ರಮದಡಿ ಇತ್ತೀಚಿನ NIRF ಶ್ರೇಯಾಂಕದ ಪ್ರಕಾರ, NIRF-ಶ್ರೇಯಾಂಕಿತ (ಎಂಜಿನಿಯರಿಂಗ್) ವಿಶ್ವವಿದ್ಯಾಲಯಗಳು/ಸಂಸ್ಥೆಗಳಲ್ಲಿ ತಂತ್ರಜ್ಞಾನ ಆಧಾರಿತ ಎಂಜಿನಿಯರಿಂಗ್ ಪದವಿಪೂರ್ವ ಮತ್ತು 5 ವರ್ಷಗಳ ಸಂಯೋಜಿತ ಕೋರ್ಸ್‌ಗಳಲ್ಲಿ ಪ್ರವೇಶ ಪಡೆದ ಅರ್ಹ ವಿದ್ಯಾರ್ಥಿಗಳಿಗಳಿಗೆ ಈ ಯೋಜನೆಯ ಸೌಲಭ್ಯವನ್ನು ಒದಗಿಸಲಾಗುತ್ತದೆ.

ಇದನ್ನೂ ಓದಿ: Crop Insurance-2025: ಬೆಳೆ ವಿಮೆ ಮಾಡಿಸಲು ರೈತರಿಂದ ಅರ್ಜಿ ಆಹ್ವಾನ!

ಏರ್‌ಟೆಲ್ ಫೌಂಡೇಶನನಿಂದ(Bharti Airtel Scholarship Application) ಲ್ಯಾಪ್ ಟಾಪ್ ಮತ್ತು ವಿದ್ಯಾರ್ಥಿವೇತನ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿ ಸಲ್ಲಿಸಲು ಒದಗಿಸಬೇಕಾದ ಅಗತ್ಯ ದಾಖಲಾತಿಗಳೇನು? ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

Bharti Airtel Scholarship eligibility criteria-ಅರ್ಜಿ ಸಲ್ಲಿಸಲು ಅರ್ಹರು:

ವಿದ್ಯಾರ್ಥಿಯು ಭಾರತೀಯ ನಿವಾಸಿಯಾಗಿರಬೇಕು.

ಈ ಪಟ್ಟಿಯಲ್ಲಿರುವ ಇಂಜಿನಿಯರಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಪ್ರವೇಶವನ್ನು ಪಡೆದಿರಬೇಕು(ಪಟ್ಟಿಯನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ)

ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ, ಟೆಲಿಕಾಂ, ಮಾಹಿತಿ ತಂತ್ರಜ್ಞಾನ, ಕಂಪ್ಯೂಟರ್ ವಿಜ್ಞಾನ, ಡೇಟಾ ಸೈನ್ಸಸ್, ಏರೋಸ್ಪೇಸ್ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು (AI, IoT, AR/VR, ಮೆಷಿನ್ ಲರ್ನಿಂಗ್, ರೊಬೊಟಿಕ್ಸ್) ಕ್ಷೇತ್ರಗಳಲ್ಲಿ ಪದವಿಪೂರ್ವ/5 ವರ್ಷಗಳ ಸಂಯೋಜಿತ ಕೋರ್ಸ್‌ಗಳಿಗೆ ಪ್ರವೇಶವನ್ನು ಪಡೆದಿರಬೇಕು.

ಎಲ್ಲಾ ಮೂಲಗಳಿಂದ ಪೋಷಕರ/ಪೋಷಕರ ವಾರ್ಷಿಕ ಆದಾಯವು INR 8.5 ಲಕ್ಷ ಮೀರಬಾರದು.

ಅರ್ಜಿದಾರ ವಿದ್ಯಾರ್ಥಿಯು ಭಾರ್ತಿ ಏರ್‌ಟೆಲ್ ಫೌಂಡೇಶನ್‌ನಿಂದ ಬೇರೆ ಯಾವುದೇ ವಿದ್ಯಾರ್ಥಿವೇತನ/ಅನುದಾನಗಳನ್ನು ಪಡೆದಿರಬಾರದು.

ಇದನ್ನೂ ಓದಿ: Cashewnut farming subsidy-ಗೇರು ಕೃಷಿ ಮಾಡಲು ₹1.20 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಜುಲೈ 2025

Airtel Scholarship Benefits-ಈ ಕಾರ್ಯಕ್ರಮದಡಿ ಯಾವೆಲ್ಲ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತದೆ?

ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ ಆಯಾ ವಿಶ್ವವಿದ್ಯಾಲಯ/ಸಂಸ್ಥೆಯ ಕೋರ್ಸ್ ಕಲಿಕೆಗೆ ತಗಲುವ ಸಂಪೂರ್ಣ ವೆಚ್ಚವನ್ನು ಈ ಫೌಂಡೇಶನನಿಂದ ಒದಗಿಸಲಾಗುತ್ತದೆ.

ವಿದ್ಯಾರ್ಥಿಯ ಹಾಸ್ಟೆಲ್ ಮತ್ತು ಮೆಸ್ ಶುಲ್ಕವನ್ನು ಸಹ ಈ ಕಾರ್ಯಕ್ರಮದಡಿ ವಿದ್ಯಾರ್ಥಿಗೆ ಒದಗಿಸಲಾಗುತ್ತದೆ.

ಆಯ್ಕೆಯಾದ ವಿದ್ಯಾರ್ಥಿಗೆ ಕೋರ್ಸ್‌ನ ಮೊದಲ ವರ್ಷದಲ್ಲಿ ಲ್ಯಾಪ್‌ಟಾಪ್ ಅನ್ನು ಉಚಿತವಾಗಿ ಒದಗಿಸಲಾಗುತ್ತದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಲ್ಯಾಪ್‌ಟಾಪ್‌ನ ಸುರಕ್ಷತೆ/ಸುರಕ್ಷತೆಯ ಜವಾಬ್ದಾರಿ ವಿದ್ಯಾರ್ಥಿಯದ್ದಾಗಿರುತ್ತದೆ. ಯಾವುದೇ ಬದಲಿ ವಸ್ತುಗಳನ್ನು ಒದಗಿಸಲಾಗುವುದಿಲ್ಲ ಎಂದು ಸೂಚನೆ ನೀಡಲಾಗಿದೆ)

ಇದನ್ನೂ ಓದಿ: Nigama Yojanegalu-ರಾಜ್ಯ ಸರ್ಕಾರದ ನಿಗಮಗಳಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ!

Required Documents For Airtel Scholarship-ಅರ್ಜಿ ಸಲ್ಲಿಸಲು ದಾಖಲೆಗಳು:

  • ವಿದ್ಯಾರ್ಥಿಯ ಆಧಾರ್/ಗುರುತಿನ ಚೀಟಿ.
  • ಪ್ರಸ್ತುತ ಕಾಲೇಜು ಪ್ರವೇಶದ ಕುರಿತು ದೃಡೀಕರಣ ಪತ್ರ.
  • 12ನೇ ತರಗತಿ ಅಂಕಪಟ್ಟಿ.
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಅರ್ಜಿದಾರರ ವಿದ್ಯಾರ್ಥಿಯ ಪೋಟೋ

ಇದನ್ನೂ ಓದಿ: Bank Account-ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ!ಈ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವಿಲ್ಲ!

How To Apply-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿವೇತನವನ್ನು ಪಡೆಯಲು ವಿದ್ಯಾರ್ಥಿಗಳು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಆನ್ಲೈನ್ ಮೂಲಕ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.

Step-1: ವಿದ್ಯಾರ್ಥಿಗಳು ಮೊದಲಿಗೆ ಈ ಲಿಂಕ್ Airtel Scholarship Application ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆ!

Bharti Airtel Scholarship

Step-2: ಇದಾದ ನಂತರ ಇಲ್ಲಿ ಅಧಿಕೃತ ವೆಬ್ ಪೇಜ್ ತೆರೆದುಕೊಳ್ಳುತ್ತದೆ ಇಲ್ಲಿ "Apply Now" ಬಟನ್ ಮೇಲೆ ಕ್ಲಿಕ್ ಮಾಡಿ, ಮೊದಲ ಬಾರಿಗೆ ಈ ತಂತ್ರಾಂಶವನ್ನು ಭೇಟಿ ಮಾಡುತ್ತಿರುವ ವಿದ್ಯಾರ್ಥಿಗಳು “Create an Account” ಬಟನ್ ಮೇಲೆ ಕ್ಲಿಕ್ ಮಾಡಿ ಖಾತೆಯನ್ನು ರಚಿಸಿಕೊಳ್ಳಬೇಕು ಬಳಿಕ “Login” ಬಟನ್ ಕ್ಲಿಕ್ ಮಾಡಿ ಲಾಗಿನ್ ಅಗತ್ಯ ವಿವರವನ್ನು ಹಾಕಿ ಲಾಗಿನ್ ಅಗಬೇಕು.

Step-3: "Login" ಆದ ನಂತರ ಅರ್ಜಿ ನಮೂನೆ ಒಪನ್ ಅಗುತ್ತದೆ ಇಲ್ಲಿ ಕೇಳುವ ಎಲ್ಲಾ ಅಗತ್ಯ ಮಾಹಿತಿ ಮತ್ತು ಅವಶ್ಯಕ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನೂ ಓದಿ: Education Loan-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

For More Information-ಹೆಚ್ಚಿನ ಮಾಹಿತಿಗಾಗಿ:

ಸಹಾಯವಾಣಿ/Helpline: 011-430-92248 (- 350) (ಸೋಮವಾರದಿಂದ ಶುಕ್ರವಾರದವರೆಗೆ - ಬೆಳಿಗ್ಗೆ 10:00 ರಿಂದ ಸಂಜೆ 06:00 (IST)
Mali-bhartiairtelscholarship@buddy4study.com

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: