Nigama Yojanegalu-ರಾಜ್ಯ ಸರ್ಕಾರದ ನಿಗಮಗಳಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ!

June 11, 2025 | Siddesh
Nigama Yojanegalu-ರಾಜ್ಯ ಸರ್ಕಾರದ ನಿಗಮಗಳಿಂದ ವಿವಿಧ ಯೋಜನೆಯಡಿ ಅರ್ಜಿ ಆಹ್ವಾನ!
Share Now:

ರಾಜ್ಯ ಸರ್ಕಾರದಡಿ ಕಾರ್ಯನಿರ್ವಹಿಸುವ ಮೂರು ನಿಗಮಗಳಿಂದ(Karnataka nigama schemes) ವಿವಿಧ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇದರ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳಲಾಗಿದೆ.

ಪ್ರಸ್ತುತ ಕರ್ನಾಟಕ ಒಕ್ಕಲಿಗ ಸಮುದಾಯ(Okkaliga Nigama) ಅಭಿವೃದ್ದಿ ನಿಗಮ ನಿಯಮಿತ, ಕರ್ನಾಟಕ ವೀರಶೈವ ಲಿಂಗಾಯತ(Lingayat Nigama) ಅಭಿವೃದ್ದಿ ನಿಗಮ ನಿಯಮಿತ ಮತ್ತು ಡಿ.ದೇವರಾಜ ಅರಸು(Devaraj Arasu Nigama) ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತದಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಒಟ್ಟೂ ಹತ್ತು ಯೋಜನೆಯಡಿ ಪ್ರಯೋಜನವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ: Bank Account-ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ!ಈ ಬ್ಯಾಂಕ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿಯಮವಿಲ್ಲ!

ನಿಗಮದಿಂದ ಯಾವೆಲ್ಲ ಯೋಜನೆಯಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ?ಯೋಜನೆವಾರು ಎಷ್ಟು ಸಬ್ಸಿಡಿ ನೀಡಲಾಗುತ್ತದೆ?ಯಾರೆಲ್ಲ ಅರ್ಜಿ ಸಲ್ಲಿಸಬಹುದು?ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಕೆಳಗೆ ತಿಳಿಸಲಾಗಿದೆ.

Karnataka Nigama Mandali-2025: ನಿಗಮದಿಂದ ಯಾವೆಲ್ಲ ಯೋಜನೆಯಡಿ ಅರ್ಜಿಯನ್ನು ಆಹ್ವಾನಿಸಲಾಗಿದೆ?

1) ಶೈಕ್ಷಣಿಕ ಸಾಲ ಯೋಜನೆ
2) ಗಂಗಾ ಕಲ್ಯಾಣ
3) ಸ್ವಾವಲಂಭಿ ಸಾರಥಿ ಯೋಜನೆ
4) ಸ್ವಯಂ ಉದ್ಯೋಗ ಸಾಲ ಯೋಜನೆ
5) ಉಚಿತ ಹೊಲಿಗೆ ಯಂತ್ರ ವಿತರಣೆ
6) ಕೌಶಲ್ಯ ತರಬೇತಿ ಕಾರ್ಯಕ್ರಮ
7) ಉನ್ನತ ವ್ಯಾಸಂಗ ಸಾಲ ಯೋಜನೆ
8) ವಿಭೂತಿ ನಿರ್ಮಾಣ ಘಟಕ ಯೋಜನೆ
9) ಭೋಜನಾಲಯ ಕೇಂದ್ರ
10) ಕಾಯಕಿರಣ ಯೋಜನೆ

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆ!

Karnataka State Nigama Details-ಯಾವೆಲ್ಲ ನಿಗಮದಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ?

ರಾಜ್ಯ ಸರ್ಕಾರದಡಿ ಬರುವ ಈ ಕೆಳಗಿನ ಮೂರು ನಿಗಮಗಳಿಂದ ಈ ಮೇಲಿನ ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ.

1) ಕರ್ನಾಟಕ ಒಕ್ಕಲಿಗ ಸಮುದಾಯ ಅಭಿವೃದ್ದಿ ನಿಗಮ ನಿಯಮಿತ.
2) ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತ.
3) ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮ ನಿಯಮಿತ.

Karnataka Nigama Yojanegalu-ಯೋಜನೆವಾರು ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

1) ಶೈಕ್ಷಣಿಕ ಸಾಲ ಯೋಜನೆ/Education Loan:

ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಅತೀ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ಈ ಮೂರು ನಿಗಮದಿಂದ ವಿತರಣೆ ಮಾಡಲಾಗುತ್ತದೆ.

2) ಗಂಗಾ ಕಲ್ಯಾಣ/Ganga Kalyana Yojane:

ಕೃಷಿಕರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಈ ಮೂರು ನಿಗಮದಿಂದ ಉಚಿತವಾಗಿ ಬೋರ್ವೆಲ್ ಅನ್ನು ಕೊರೆಸಲು ಅವಕಾಶವಿದ್ದು ಒಟ್ಟು ₹ 4.75 ಲಕ್ಷ ಘಟಕದ ಯೋಜನೆ ಇದಾಗಿರುತ್ತದೆ.

ಇದನ್ನೂ ಓದಿ: Education Loan-ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೇ 2 ಬಡ್ಡಿದರದಲ್ಲಿ ₹5 ಲಕ್ಷ ಸಾಲ ಪಡೆಯಲು ಅರ್ಜಿ ಆಹ್ವಾನ!

3) ಸ್ವಾವಲಂಭಿ ಸಾರಥಿ ಯೋಜನೆ/Swavalambi Sarati Yojane:

ನಿರುದ್ಯೋಗಿ ಚಾಲಕರಿಗೆ ಸ್ವಂತ ಉದ್ಯೋಗವನ್ನು ಆರಂಭಿಸಲು ಈ ಯೋಜನೆಯಡಿ ನಾಲ್ಕು ಚಕ್ರದ ವಾಹನಗಳದ ಟಾಕ್ಸಿ/ಸರಕು ವಾಹನ/ಕಾರು ಖರೀದಿ ಮಾಡಲು ಗರಿಷ್ಠ ₹3.00 ಲಕ್ಷ ಸಹಾಯಧನವನ್ನು ಈ ಮೂರು ನಿಗಮದಿಂದ ಒದಗಿಸಲಾಗುತ್ತದೆ.

4) ಸ್ವಯಂ ಉದ್ಯೋಗ ಸಾಲ ಯೋಜನೆ/Business Loan:

ಮೂರು ನಿಗಮಗಳಿಂದ ಆಯಾ ನಿಗಮಕ್ಕೆ ಸಂಬಂಧಪಟ್ಟ ವರ್ಗದ ನಿರುದ್ಯೋಗಿ ಯುವಕ/ಯುವತಿಯರಿಗೆ ಸ್ವಂತ ಉದ್ಯೋಗವನ್ನು ಆರಂಭಿಸಲು ಗರಿಷ್ಠ ₹3.00 ಲಕ್ಷದ ವರೆಗೆ ಶೇ 4% ರ ಬಡ್ಡಿದರದಲ್ಲಿ ಸಾಲ ಮತ್ತು ರೂ ₹30,000/- ಸಾವಿರದ ವರೆಗೆ ಸಬ್ಸಿಡಿಯನ್ನು ಈ ಯೋಜನೆಯಡಿ ನೀಡಲಾಗುತ್ತದೆ.

5) ಉಚಿತ ಹೊಲಿಗೆ ಯಂತ್ರ ವಿತರಣೆ/Uchita Holige Yantra:

ಈ ಯೋಜನೆಯಡಿ ಮೂರು ನಿಗಮದಿಂದಲು ಸಹ ಹೊಲಿಗೆ ತರಬೇತಿಯನ್ನು ಪಡೆದಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಹೊಲಿಗೆ ಯಂತ್ರವನ್ನು ವಿತರಣೆ ಮಾಡಲಾಗುತ್ತದೆ.

6) ಕೌಶಲ್ಯ ತರಬೇತಿ ಕಾರ್ಯಕ್ರಮ:

ಈ ಯೋಜನೆಯಡಿ ವಿದ್ಯಾವಂತ ಯುವಜನರಿಗೆ ವಿವಿಧ ಅಲ್ಪಾವಧಿ ಮತ್ತು ಉತ್ಕೃಷ್ಟ ಕೌಶಲ್ಯ ತರಬೇತಿಯನ್ನು ನೀಡಿ ಉದ್ಯೋಗ ಸಾಮರ್ಥ್ಯವನ್ನು ಒದಗಿಸಲಾಗುತ್ತದೆ.

karnataka nigama yojanegalu

7) ಉನ್ನತ ವ್ಯಾಸಂಗ ಸಾಲ ಯೋಜನೆ:

ಆಯಾ ನಿಗಮಕ್ಕೆ ಸಂಬಂಧಪಟ್ಟ ವರ್ಗದ ವಿದ್ಯಾರ್ಥಿಗಳಿಗೆ ಈ ಯೋಜನೆಯಡಿ ಉನ್ನತ ವ್ಯಾಸಂಗಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ರೂ ₹5.00 ಲಕ್ಷದ ವರೆಗೆ ಶೇ 2% ರ ಬಡ್ಡಿದರದಲ್ಲಿ ಶಿಕ್ಷಣ ಸಾಲವನ್ನು ಒದಗಿಸಲಾಗುತ್ತದೆ.

8) ವಿಭೂತಿ ನಿರ್ಮಾಣ ಘಟಕ ಯೋಜನೆ:

ವೀರಶೈವ-ಲಿಂಗಾಯತ ಸಮುದಾಯದವರು ವಿಭೂತಿಯನ್ನು ತಯಾರಿಸುವವರಿಗೆ ಸಾಲ ಮತ್ತು ಸಹಾಯಧನವನ್ನು ಈ ಯೋಜನೆಯಡಿ ನೀಡಲಾಗುತ್ತದೆ. ಒಟ್ಟು ₹4.00 ಲಕ್ಷದ ಘಟಕ ಇದಾಗಿದ್ದು ಇದರಲ್ಲಿ ನಿಗಮದಿಂದ ರೂ ₹3.60 ಲಕ್ಷ ನಿಗಮದಿಂದ ಸಾಲವನ್ನು ನೀಡಲಾಗುತ್ತದೆ ಇದರಲ್ಲಿ ರೂ ₹40,000/- ಸಬ್ಸಿಡಿಯನ್ನು ನೀಡಲಾಗುತ್ತದೆ.

9) ಭೋಜನಾಲಯ ಕೇಂದ್ರ:

ಲಿಂಗಾಯತ ನಿಗಮದಿಂದ ಈ ಸಮುದಾಯದ ಜನರಿಗೆ ಹೋಟೆಲ್/ಖಾನಾವಳಿಯನ್ನು ಆರಂಭಿಸಲು ಈ ಯೋಜನೆಯಡಿ ಸಾಲ ಮತ್ತು ಸಹಾಯಧನವನ್ನು ನೀಡಲಾಗುತ್ತದೆ ಒಟ್ಟು ರೂ ₹5.00 ಲಕ್ಷದ ಘಟಕ ಇದಾಗಿದ್ದು ಇದರಲ್ಲಿ ರೂ ₹40,000/- ಸಬ್ಸಿಡಿ ಮತ್ತು ರೂ ₹4.60 ಲಕ್ಷ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಈ ಯೋಜನೆಯಡಿ ಅವಕಾಶ ನೀಡಲಾಗಿರುತ್ತದೆ.

10) ಕಾಯಕಿರಣ ಯೋಜನೆ

ಲಿಂಗಾಯತ ನಿಗಮದಿಂದ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದ್ದು ಈ ಯೋಜನೆಯ ಮೂಲಕ ಈ ವರ್ಗದ ನಿರುದ್ಯೋಗಿಗಳಿಗೆ ಒಟ್ಟು ಘಟಕ ವೆಚ್ಚ ರೂ ₹ 2.00 ಲಕ್ಷಕ್ಕೆ ಶೇ 4 ಬಡ್ಡಿದರದಲ್ಲಿ ಸಾಲ ಮತ್ತು ಗರಿಷ್ಠ ರೂ ₹30,000 ಸಾವಿರದ ವರೆಗೆ ಸಹಾಯಧನವನ್ನು ನಿಗಮದಿಂದ ನೀಡಲಾಗುತ್ತದೆ.

ಇದನ್ನೂ ಓದಿ: Car Subsidy Application-₹3.0 ಲಕ್ಷ ಸಬ್ಸಿಡಿಯಲ್ಲಿ ಕಾರು ಖರೀದಿ ಮಾಡಲು ಅರ್ಜಿ!

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ನಿಗಮವಾರು ಯೋಜನೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ವಿವರ ಈ ಕೆಳಗಿನಂತಿದೆ.

ಲಿಂಗಾಯತ ನಿಗಮ(Lingayat Nigama)- 31 ಆಗಸ್ಟ್ 2025
ಒಕ್ಕಲಿಗ ನಿಗಮ(Okkaliga Nigama)- 02 ಜುಲೈ 2025
ದೇವರಾಜ ಅರಸು ನಿಗಮ(Devaraj Arasu Nigama)- 30 ಜೂನ್ 2025

Who Can Apply-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಈ ಮೇಲೆ ತಿಳಿಸಿರುವ ಯೋಜನೆಗಳ ಪ್ರಯೋಜನವನ್ನು ಪಡೆಯಲು ಅರ್ಜಿದಾರರು ಈ ಕೆಳಗೆ ತಿಳಿಸಿರುವ ಅರ್ಹತೆಯನ್ನು ಹೊಂದಿರಬೇಕು.

  • ಅರ್ಜಿದಾರರು ಆಯಾ ನಿಗಮಕ್ಕೆ ಸಂಬಂಧಪಟ್ಟ ವರ್ಗಕ್ಕೆ ಸೇರಿದವರಾಗಿರಬೇಕು.
  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ಅಭ್ಯರ್ಥಿಯ ವಯಸ್ಸು 21 ವರ್ಷದಿಂದ 50 ವರ್ಷದ ಒಳಗಿರಬೇಕು.
  • ಅರ್ಜಿದಾರ ಕುಟುಂಬದ ವಾರ್ಷಿಕ ಆದಾಯವು ಗ್ರಾಮೀಣ ಭಾಗದಲ್ಲಿ ರೂ 98,000/- ಹಾಗೂ ನಗರ ಪ್ರದೇಶದಲ್ಲಿ ರೂ 1,20,000/- ಮಿತಿಯಲ್ಲಿರಬೇಕು.
  • ಅರ್ಜಿದಾರ ಅಭ್ಯರ್ಥಿಯ ಕುಟುಂಬದ ಸದಸ್ಯರು ರಾಜ್ಯ ಮತ್ತು ಕೇಂದ್ರ ಸರಕಾರಿದ ನೌಕರಿಯಲ್ಲಿರಬಾರದು.
  • ಈ ಹಿಂದೆ ನಿಗಮದಿಂದ ಈ ಯೋಜನೆಯಡಿ ಸೌಲಭ್ಯವನ್ನು ಪಡೆದಿರುವವರು ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.

ಇದನ್ನೂ ಓದಿ: Vibhuti Ghataka Subsidy- ₹4.00 ಲಕ್ಷದಲ್ಲಿ ವಿಭೂತಿ ಘಟಕ ಸ್ಥಾಪನೆ ಮಾಡಲು ಸಬ್ಸಿಡಿ ಪಡೆಯಲು ಅರ್ಜಿ!

How To Apply For Karnataka Nigama Schemes-ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ಮತ್ತು ಆಸಕ್ತ ಅರ್ಜಿದಾರರು ಅಗತ್ಯ ದಾಖಲಾತಿಗಳನ್ನು ಸಿದ್ದಪಡಿಸಿಕೊಂಡು ನೇರವಾಗಿ ಸೇವಾ ಸಿಂಧು ತಂತ್ರಾಂಶದ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ತಮ್ಮ ಹತ್ತಿರದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರವನ್ನು ಭೇಟಿ ಮಾಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Required Documents- ಅರ್ಜಿ ಸಲ್ಲಿಸಲು ಅವಶ್ಯಕ ದಾಖಲಾತಿಗಳು:

1) ಅಭ್ಯರ್ಥಿಯ ಆಧಾರ್ ಕಾರ್ಡ ಪ್ರತಿ
2) ಬ್ಯಾಂಕ್ ಪಾಸ್ ಬುಕ್ ಪ್ರತಿ
3) ಜಾತಿ ಮತ್ತು ಆದಾಯ ಪ್ರಮಾಣ ಪತ್ರ
4) ಪೋಟೋ
5) ಡ್ರೈವಿಂಗ್ ಲೈಸೆನ್ಸ್
6) ರೇಶನ್ ಕಾರ್ಡ ಪ್ರತಿ
7) ಮೊಬೈಲ್ ನಂಬರ್

For More Information-ಇನ್ನು ಹೆಚ್ಚಿನ ಮಾಹಿತಿಗಾಗಿ:

ಲಿಂಗಾಯತ ನಿಗಮ-Click Here ಸಹಾಯವಾಣಿ-8022865522/9900012351
ಒಕ್ಕಲಿಗ ನಿಗಮ-Click Here ಸಹಾಯವಾಣಿ-8022865522/9900012351
ದೇವರಾಜ ಅರಸು ನಿಗಮ- Click Here ಸಹಾಯವಾಣಿ-8022865522/9900012351

WhatsApp Group Join Now
Telegram Group Join Now
Share Now: