Breaking News:
Gruhalakshmi 15th Installment- ಗೃಹಲಕ್ಷ್ಮಿ ಯೋಜನೆಯಡಿ ಈ ಜಿಲ್ಲೆಯ ಮಹಿಳೆಯರಿಗೆ 15ನೇ ಕಂತಿನ ಹಣ ಬಿಡುಗಡೆ! Akrama sakrama-ಅಕ್ರಮ-ಸಕ್ರಮ ನಮೂನೆ 57 ತಿರಸ್ಕೃತಗೊಂಡ ಅರ್ಜಿ ಪುನರ್ ಪರಿಶೀಲನೆಗೆ ಅವಕಾಶ! LIC Scholarship-ಎಲ್‌ಐಸಿಯಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? BPL Card-ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್‌ ವಿತರಣೆ: ಸಚಿವ ಕೆ.ಎಚ್.ಮುನಿಯಪ್ಪ PM kisan-ಪಿಎಂ ಕಿಸಾನ್ ಯೋಜನೆಯ ಅನರ್ಹ ಫಲಾನುಭವಿಗಳಿಂದ 335 ಕೋಟಿ ರೂ ಹಣ ವಾಪಾಸ್! ಇಲ್ಲಿದೆ ಅಧಿಕೃತ ಪಟ್ಟಿ! Bagar hukum yojana- ರೈತರಿಗೆ ಭರ್ಜರಿ ಸಿಹಿ ಸುದ್ದಿ: ಬಗರ್ ಹುಕುಂ ಡಿಜಿಟಲ್ ಸಾಗವಳಿ ಚೀಟಿ ವಿತರಣೆ ಆರಂಭ! Podi abiyana-ರೈತರಿಗೆ ಭರ್ಜರಿ ಸಿಹಿ ಸುದ್ದಿ: ಕಂದಾಯ ಇಲಾಖೆಯಿಂದ ಪೋಡಿ ದುರಸ್ತಿ ಕುರಿತು ಮಹತ್ವದ ಕ್ರಮ! Best health insurance plan- 599ಕ್ಕೆ 5 ಲಕ್ಷ ಅಪಘಾತ ವಿಮೆ ಸೌಲಭ್ಯ ಪಡೆಯಲು ಅರ್ಜಿ! ಇಲ್ಲಿದೆ ಕಂಪ್ಲೀಟ್ ಡೈಟೈಲ್ಸ್! Bele vime-ಅಡಿಕೆ ಸೇರಿದಂತೆ ತೋಟಗಾರಿಕೆ ಬೆಳೆಗಳ ವಿಮೆ ಹಣ ಬಿಡುಗಡೆ! ಇಲ್ಲಿದೆ ಸ್ಟೇಟಸ್ ಚೆಕ್ ಲಿಂಕ್! Sheep and Wool Development-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
HomeNewsAadhar- ಆಧಾರ್ ಕಾರ್ಡಯಿರುವವರು ಈ ಮಾಹಿತಿ ತಿಳಿಯುವುದು ಅತ್ಯಗತ್ಯ!

Aadhar- ಆಧಾರ್ ಕಾರ್ಡಯಿರುವವರು ಈ ಮಾಹಿತಿ ತಿಳಿಯುವುದು ಅತ್ಯಗತ್ಯ!

ಯುಐಡಿಎಐ ಪ್ರಾಧಿಕಾರದಿಂದ ಉಚಿತವಾಗಿ ಆಧಾರ್ ಕಾರ್ಡ ಅಪ್ಡೇಟ್(Aadhar update) ಮಾಡಲು ಇನ್ನು 2 ದಿನ ಮಾತ್ರ ಬಾಕಿ ಉಳಿದಿದ್ದು, ನಾಗರಿಕರು ತಮ್ಮ ಮೊಬೈಲ್ ನಲ್ಲೇ ಈ ಕೆಲಸವನ್ನು ಮಾಡಲು ಅವಕಾಶವಿದ್ದು ಈ ಕುರಿತು ಸಂಪೂರ್ಣ ವಿವರವನ್ನು ತಿಳಿಸಲಾಗಿದೆ.

ಆಧಾರ್ ಕಾರ್ಡ ಪಡೆದುಕೊಂಡು 10 ವರ್ಷ ಮತ್ತು ಅದಕ್ಕಿಂತ ಹೆಚ್ಚು ವರ್ಷಗಳಾದರೂ ಇನ್ನೂ ತಮ್ಮ ಆಧಾರ್ ಕಾರ್ಡಗಳನ್ನು ಅಪ್ಡೇಟ್ ಮಾಡಿಸದವರು 14 ಸೆಪ್ಟಂಬರ್ 2024 ರ ಒಳಗಾಗಿ ಉಚಿತವಾಗಿ ನವೀಕರಣ ಮಾಡಿಕೊಳ್ಳಬಹುದು.

ನಮ್ಮ ದೇಶದಲ್ಲಿ ಆಧಾರ್ ಕಾರ್ಡ ಒಂದು  ಮುಖ್ಯ ಅಗತ್ಯ ಗುರುತಿನ ಚೀಟಿಯಲ್ಲಿ ಒಂದಾಗಿದ್ದು, ಸರಕಾರದ ಎಲ್ಲಾ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು ಈ ಕಾರ್ಡ ಹೊಂದಿರುವುದು ಕಡ್ಡಾಯವಾಗಿದೆ. ಈ ದಾಖಲೆಯನ್ನು ಸರಿಯಾಗಿಟ್ಟುಕೊಳ್ಳವುದು ಅತ್ಯಗತ್ಯ ಇದರಂತೆ ಕೊನೆಯ ದಿನಾಂಕ ಮುಗಿಯುವುದರ ಒಳಗಾಗಿ ಉಚಿತವಾಗಿ ಆಧಾರ್ ನವೀಕರಣ ಮಾಡಿಕೊಳ್ಳುವಂತೆ ಯುಐಡಿಎಐ ಪ್ರಾಧಿಕಾರದಿಂದ ತಿಳಿಸಲಾಗಿದೆ.

ಇದನ್ನೂ ಓದಿ: Micro credit scheme- ಮೈಕ್ರೋ ಕ್ರೆಡಿಟ್ ಯೋಜನೆಗೆ ಅರ್ಜಿ! ₹2.5 ಲಕ್ಷಕ್ಕೆ ₹1.5 ಲಕ್ಷ ಸಹಾಯಧನ!

Aadhar update last date- ಉಚಿತವಾಗಿ ಆಧಾರ್  ಕಾರ್ಡ ಅಪ್ಡೇಟ್ ಮಾಡಲು ಕೊನೆಯ ದಿನ!

ಯುಐಡಿಎಐ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಿರುವ ಮಾಹಿತಿಯನ್ವಯ ಉಚಿತವಾಗಿ ಆಧಾರ್ ಕಾರ್ಡ ಅಪ್ಡೇಟ್ ಮಾಡಲು 14 ಸೆಪ್ಟಂಬರ್ 2024 ಕೊನೆಯ ದಿನಾಂಕವಾಗಿದೆ.

aadhar update online- ಆಧಾರ್ ಕಾರ್ಡ ಅಪ್ಡೇಟ್ ಎಲ್ಲಿ ಮಾಡಿಸಬೇಕು?

ಸಾರ್ವಜನಿಕರು ಉಚಿತವಾಗಿ ಆಧಾರ್ ಕಾರ್ಡ ಅನ್ನು ನಿಮ್ಮ್ ಹತ್ತಿರದ ಆಧಾರ್ ಕೇಂದ್ರ/ಗ್ರಾಮ ಒನ್/ಕರ್ನಾಟಕ ಒನ್ ಅನ್ನು ಭೇಟಿ ಮಾಡಿ ಅಥವಾ ತಮ್ಮ ಸ್ವಂತ ಮೊಬೈಲ್ ನಲ್ಲಿ ಆಧಾರ್ ಪ್ರಾಧಿಕಾರದ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಆಧಾರ್ ಕಾರ್ಡ ಅಪ್ಡೇಟ್ ಮಾಡಿಸಬಹುದು.

ಇದನ್ನೂ ಓದಿ: four wheeler subsidy- 4.00 ಲಕ್ಷ ಸಹಾಯಧನದಲ್ಲಿ ಗೂಡ್ಸ್ ವಾಹನ, ಟ್ಯಾಕ್ಸಿ ಪಡೆಯಲು ಅರ್ಜಿ ಆಹ್ವಾನ!

Documents for Aadhar update-ಅಪ್ಡೇಟ್ ಬೇಕಾಗುವ ದಾಖಲೆಗಳು:

1) ಅರ್ಜಿದಾರರ ಆಧಾರ್ ಪ್ರತಿ.
2) ವಿಳಾಸ ದೃಢೀಕರಣಕ್ಕೆ ಗುರುತಿನ ಚೀಟಿ.
3) ಮೊಬೈಲ್ ನಂಬರ್.

aadhaar update on mobile- ಮೊಬೈಲ್ ನಲ್ಲೇ ಆಧಾರ್ ಕಾರ್ಡ ಅಪ್ಡೇಟ್ ಮಾಡಲು ಲಿಂಕ್:

ಸಾರ್ವಜನಿಕರು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಆಧಾರ್ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ ತಮ್ಮ ಮೊಬೈಲ್ ನಲ್ಲೇ ಆಧಾರ್ ಕಾರ್ಡ ಅಪ್ಡೇಟ್ ಅನ್ನು ಮಾಡಿಕೊಳ್ಳಬಹುದು.

ಇದನ್ನೂ ಓದಿ: Crop loan farmer list-ಬೆಳೆ ಸಾಲ ಮನ್ನಾ ಅಗಿರುವ ಪಟ್ಟಿಯನ್ನು ನೋಡಲು ವೆಬ್ಸೈಟ್ ಲಿಂಕ್ ಬಿಡುಗಡೆ!

Step-1: ಮೊದಲಿಗೆ ಈ Apply Now ಬಟನ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

Step-2: ತದನಂತರ “Login” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಆಧಾರ್ ಕಾರ್ಡ ನಂಬರ್ ಮತ್ತು ಪಕ್ಕದಲ್ಲಿರುವ ಕ್ಯಾಪ್ಚರ್ ಕೊಡ್ ಅನ್ನು ನಮೂದಿಸಿ “Send OTP” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-2: ಇದಾದ ಬಳಿಕ ಆಧಾರ್ ಕಾರ್ಡನಲ್ಲಿ ನಮೂದಿಸಿದ ಮೊಬೈಲ್ ಸಂಖ್ಯೆಗೆ 6 ಅಂಕಿಯ OTP ಬರುತ್ತದೆ ಅದನ್ನು ಇಲ್ಲಿ ನಮೂದಿಸಿ “Login” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಪೇಜ್  ನಲ್ಲಿ “Document Update” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Next” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

Step-4: ಈ ವೆಬ್ ಪೇಜ್ ನಲ್ಲಿ ನಿಮ್ಮ ಆಧಾರ್ ಕಾರ್ಡನಲ್ಲಿ ಇರುವಂತೆ ಹೆಸರು, ಹುಟ್ಟಿದ ದಿನಾಂಕ ಮತ್ತು ವಿಳಾಸದ ವಿವರ ಗೋಚರಿಸುತ್ತದೆ ಎಲ್ಲಾ ಮಾಹಿತಿ ಸರಿ ಇದಿಯೇ ಎಂದು ನೋಡಿ ಸರಿ ಇದಲ್ಲಿ “I verify that above details are correct” ಆಯ್ಕೆಯ ಮೇಲೆ ಕ್ಲಿಕ್ ಮಾಡಿ “Next” ಬಟನ್ ಮೇಲೆ ಕ್ಲಿಕ್ ಮಾಡಿ ಮುಂದುವರೆಯಿರಿ.

ಇದನ್ನೂ ಓದಿ: Land purchase scheme- 25 ಲಕ್ಷದಲ್ಲಿ ಶೇ 50% ಸಬ್ಸಿಡಿಯಲ್ಲಿ ಕೃಷಿ ಜಮೀನು ಖರೀದಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ!

Step-5:  ಕೊನೆಯಲ್ಲಿ ಗುರುತಿನ ಪುರಾವೆ ಮತ್ತು ವಿಳಾಸ ಪುರಾವೆ ದಾಖಲಾತಿಗಳನ್ನು ಅಪ್ಲೋಡ ಮಾಡಬೇಕು(Document size should be less than 2 MB, Supported file Formats are: JPEG, PNG and PDF ) ಕೊನೆಯಲ್ಲಿ “Next” ಆಯ್ಕೆಯ ಮೇಲೆ ಒತ್ತಿ “Submit” ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆಧಾರ್ ಅಪ್ಡೇಟ್ ಅಗುತ್ತದೆ.

Why Update Aadhaar Card? ಆಧಾರ್ ಕಾರ್ಡ ಅಪ್ಡೇಟ್ ಏಕೆ ಮಾಡಬೇಕು?

ಆಧಾರ್ ಕಾರ್ಡ ಹೊಂದಿರುವ ನಾಗರಿಕರ ನೈಜತೆಯನ್ನು ಖಚಿತಪಡಿಸಿಕೊಳ್ಳಲು 10 ವರ್ಷಕ್ಕೊಮೆ ನಾಗರಿಕರು ತಮ್ಮ ಆಧಾರ್ ಕಾರ್ಡ ಅನ್ನು ನವೀಕರಣ ಮಾಡಿಕೊಳ್ಳಬೇಕು ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Aadhar helpline-ಆಧಾರ್ ಸಹಾಯವಾಣಿ: 1947
adhar website-ವೆಬ್ಸೈಟ್: Click here
adhar update link-ಅಪ್ಡೇಟ್ ಮಾಡಲು ಲಿಂಕ್: Apply Now

Most Popular

Latest Articles

- Advertisment -

Related Articles