HomeNew postsCrop insurance-2024:ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು?ಸಂಪೂರ್ಣ ವಿವರ ಬಿಡುಗಡೆ!

Crop insurance-2024:ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು?ಸಂಪೂರ್ಣ ವಿವರ ಬಿಡುಗಡೆ!

ರಾಜ್ಯದಲ್ಲಿ ಬಹುತೇಕ ಭಾಗಗಳಲ್ಲಿ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಬಂದಿದ್ದು, ರೈತರು ಬಿತ್ತನೆಗೆ ಭೂಮಿ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಪ್ರತಿ ವರ್ಷದಂತೆ ಈ ಭಾರಿಯು ರೈತರು ತಮ್ಮ ಬೆಳೆಗೆ ಬೆಳೆ ವಿಮೆ(Crop insurance-2024) ಮಾಡಿಸಿಕೊಳ್ಳಲು ಸರಕಾರದಿಂದ ಅವಕಾಶ ಕಲ್ಪಿಸಲಾಗಿದೆ.

ಫಸಲ್ ಬಿಮಾ ಯೋಜನೆಯಡಿ ಬೆಳೆ ವಿಮೆ(crop insurance) ಮಾಡಿಕೊಳ್ಳಲು ಅವಕಾಶವಿದ್ದು ಯಾವ ಬೆಳೆಗೆ ಎಷ್ಟು ಮೊತ್ತದ ಪ್ರೀಮಿಯಂ ಪಾವತಿ ಮಾಡಬೇಕು? ಒಂದು ವೇಳೆ ನಿಮ್ಮ ಹಳ್ಳಿ ವ್ಯಾಪ್ತಿಯ ವಿಮಾ ಘಟಕದಲ್ಲಿ ಬೆಳೆ ನಷ್ಟ ಅದಾಗ ಎಷ್ಟು ಪರಿಹಾರ ಬರುತ್ತದೆ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ರೈತರು ತಮ್ಮ ಮೊಬೈಲ್ ನಲ್ಲಿ ಬೆಳೆ ವಿಮೆಯ(kharif crop insurance) ಅಧಿಕೃತ ಸಂರಕ್ಷಣೆ(Samrakshane) ವೆಬ್ಸೈಟ್ ಅನ್ನು ಪ್ರವೇಶ ಮಾಡಿ ಈ ವರ್ಷ ಮುಂಗಾರು ಹಂಗಾಮಿನ ಬೆಳೆ ವಿಮೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಹೇಗೆ ಪಡೆಯುವುದು ಎಂದು ಈ ಕೆಳಗೆ ವಿವರಿಸಲಾಗಿದೆ.

ಇದನ್ನೂ ಓದಿ: Karnataka Apex Bank Recruitment-2024: ಕರ್ನಾಟಕ ಅಪೇಕ್ಸ್ ಬ್ಯಾಂಕ್ ನಲ್ಲಿ ನೇಮಕಾತಿ!

Kharif Crop insurance-2024: ಈ ವರ್ಷ ಯಾವೆಲ್ಲ ಬೆಳೆಗೆ ಬೆಳೆ ವಿಮೆ ಕಟ್ಟಬಹುದು?ಸಂಪೂರ್ಣ ವಿವರ ಪಡೆಯುವ ವಿಧಾನ:

ಬೆಳೆ ವಿಮೆ ಕುರಿತು ಎಲ್ಲಾ ಅಗತ್ಯ ಮಾಹಿತಿಯನ್ನು ರಾಜ್ಯ ಸರಕಾರದ ಸಂರಕ್ಷಣೆ ಪೋರ್ಟಲ್ ನಲ್ಲಿ ದಾಖಲಿಸಲಾಗಿದ್ದು ರೈತರು ಈ ಕೆಳಗೆ ವಿವರಿಸಿರುವ ಹಂತವನ್ನು ಅನುಸರಿಸಿ ನಿಮ್ಮ ಮೊಬೈಲ್ ನಲ್ಲಿ ಈ ವರ್ಷ ಯಾವ ಬೆಳೆಗೆ ಎಷ್ಟು ವಿಮೆ ಪ್ರಿಮೀಯಂ ಪಾವತಿ ಮಾಡಬೇಕು ಮತ್ತು ವಿಮಾ ಮೊತ್ತ ಎಷ್ಟು? ಬೆಳೆವಾರು ವಿಮೆ ಮಾಡಿಸಲು ಕೊನೆಯ ದಿನಾಂಕ ಇತ್ಯಾದಿ ಸಂಪೂರ್ಣ ವಿವರ ಪಡೆಯಬಹುದು.

Step-1: ರೈತರು ತಮ್ಮ ಮೊಬೈಲ್ ನಲ್ಲಿ ಪ್ರಥಮದಲ್ಲಿ ಈ Kharif crop insurance ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/Year: 2024-25” ಹಾಗೂ “ಋತು: Kharif/ಮುಂಗಾರು” ಎಂದು ಸೆಲೆಕ್ಟ್ ಮಾಡಿಕೊಂಡು “ಮುಂದೆ/Go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

ಗಮನಿಸಿ: ಮುಟಪುಟದಲ್ಲಿ ಮೇಲೆ ಕಾಣುವ ಕನ್ನಡ/English ಭಾಷೆಯನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಬಹುದು.

ಇದನ್ನೂ ಓದಿ: LIC Assistant Recruitment- LIC ಯಿಂದ 7000 ಹುದ್ದೆಗಳ ಬೃಹತ್ ನೇಮಕಾತಿ ಶೀಘ್ರದಲ್ಲಿ!ಮಾಸಿಕ ವೇತನ ₹78,230!

Step-2: ಬಳಿಕ ಈ ಪೇಜ್ ನಲ್ಲಿ ಕೆಳಗೆ “Farmers’ ಕಾಲಂ ನಲ್ಲಿ  ಕಾಣುವ “Crop you can insure/ವಿಮೆ ಮಾಡಬಹುದಾದ ಬೆಳೆಗಳು” ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3: ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ನಿಮ್ಮ ಹಳ್ಳಿಯ ಹೆಸರನ್ನು ಸೆಲೆಕ್ಟ್ ಮಾಡಿಕೊಂಡು “Display” ಬಟನ್ ಮೇಲೆ ಕ್ಲಿಕ್ ಮಾಡಿದರೆ ನೀವು ಯಾವೆಲ್ಲ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಬಹುದು? ಎನ್ನುವ ವಿವರ ಗೋಚರಿಸುತ್ತದೆ.

Premium calculator-ಈ ವರ್ಷ ಯಾವ ಬೆಳೆಗೆ ಎಷ್ಟು ಬೆಳೆ ವಿಮೆ ಕಟ್ಟಬೇಕು? ಎಂದು ತಿಳಿಯುವ ವಿಧಾನ:

ನಿಮ್ಮ ಜಮೀನಿನ ಒಟ್ಟು ವಿಸ್ತೀರ್ಣವನ್ನು ಹಾಕಿ ಎಷ್ಟು ವಿಮೆ ಪ್ರಿಮೀಯಂ ಅನ್ನು ನೀವು ಕಟ್ಟಿ ಬೆಳೆ ವಿಮೆ ಮಾಡಿಸಬೇಕು ಎಂದು ತಿಳಿಯುವ ವಿಧಾನದ ವಿವರ ಹೀಗಿದೆ.

Step-1: ಪ್ರಥಮದಲ್ಲಿ ಈ Insurance Premium calculator ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆ,ತಾಲ್ಲೂಕು,ಹೋಬಳಿ,ಗ್ರಾಮ/ಹಳ್ಳಿ ಮತ್ತು ಬೆಳೆಯನ್ನು ಆಯ್ಕೆ ಮಾಡಿಕೊಂಡು ಬೆಳೆ ವಿಸ್ತೀರ್ಣ ಕಾಲಂ ನಲ್ಲಿ ಎಷ್ಟು ಎಕರೆ ಎಂದು ಹಾಕಿ ಪಕ್ಕದಲ್ಲಿ ಗುಂಟ/ಸೆಂಟ್ ಅನ್ನು ನಮೂದಿಸಿ “ಪ್ರಿಮಿಯಂ ವಿವರ” ಬಟನ್ ಮೇಲೆ ಕ್ಲಿಕ್ ಮಾಡಿದರೆ “ರೈತರ ಪಾಲು” ಕಾಲಂ ನಲ್ಲಿ ಎಷ್ಟು ಬೆಳೆ ವಿಮೆ ಕಟ್ಟಬೇಕು? ಎನ್ನುವ ವಿವರ ಗೋಚರಿಸುತ್ತದೆ.

ಇದನ್ನೂ ಓದಿ: Skill India Apprenticeship Recruitment-2024: ಸ್ಕಿಲ್ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ 680 ಹುದ್ದೆಗಳ ನೇಮಕಾತಿ ಅರ್ಜಿ ಅಹ್ವಾನ!

Kharif crop insurance last date-ಬೆಳೆ ವಿಮೆ ಕಟ್ಟಲು ಕೊನೆಯ ದಿನಾಂಕ ಚೆಕ್ ಮಾಡುವುದು ಹೇಗೆ?

Step-1: ರೈತರು ತಮ್ಮ ಮೊಬೈಲ್ ನಲ್ಲಿ ಪ್ರಥಮದಲ್ಲಿ ಈ Kharif crop insurance last date ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಬೆಳೆ ವಿಮೆಯ ಸಂರಕ್ಷಣೆ ಜಾಲತಾಣವನ್ನು ಪ್ರವೇಶ ಮಾಡಬೇಕು. ಬಳಿಕ ಮುಖಪುಟದಲ್ಲಿ ಮೊದಲಿಗೆ ನೀವು “ವರ್ಷ/Year: 2024-25” ಹಾಗೂ “ಋತು: Kharif/ಮುಂಗಾರು” ಎಂದು ಸೆಲೆಕ್ಟ್ ಮಾಡಿಕೊಂಡು “ಮುಂದೆ/Go” ಎಂದು ಕೆಳಗೆ ಕಾಣುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮುಂದುವರೆಯಬೇಕು.

Step-2: ಇದಾದ ಬಳಿಕ ಈ ಪೇಜ್ ನಲ್ಲಿ “Farmers’ ವಿಭಾಗದಲ್ಲಿ ಕಾಣುವ “View Cut Off Dates” ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ: KEA Recruitment -2024: ಗ್ರಾಮ ಲೆಕ್ಕಾಧಿಕಾರಿ ಸೇರಿದಂತೆ ವಿವಿಧ 4002 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಅಪ್ ಡೇಟ್ ಬಿಡುಗಡೆ!

Step-3: ತದನಂತರ ಈ ಪುಟದಲ್ಲಿ ನಿಮ್ಮ “District/ಜಿಲ್ಲೆ” ಅನ್ನು ಆಯ್ಕೆ ಮಾಡಿಕೊಳ್ಳಲು ಬಲಬದಿಯಲ್ಲಿ ಕಾಣುವ “District/ಜಿಲ್ಲೆ” ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಿಲ್ಲೆಯನ್ನು ಸೆಲೆಕ್ಟ್ ಮಾಡಿದರೆ ನಿಮ್ಮ ಜಿಲ್ಲೆಯಲ್ಲಿ ಬೆಳೆಯುವ ಬೆಳೆವಾರು ಬೆಳೆ ವಿಮೆ ಪ್ರಿಮಿಯಂ ಪಾವತಿ ಮಾಡಲು ಅಥವಾ ಕಟ್ಟಲು ಕೊನೆಯ ದಿನಾಂಕದ ಪಟ್ಟಿ ತೋರಿಸುತ್ತದೆ.

Most Popular

Latest Articles

Related Articles