Gruhalakshmi-ಗೃಹಲಕ್ಷ್ಮಿ ಯೋಜನೆಯಡಿ ಒಂದು ತಿಂಗಳ ಹಣ ಬಿಡುಗಡೆ!

May 23, 2025 | Siddesh
Gruhalakshmi-ಗೃಹಲಕ್ಷ್ಮಿ ಯೋಜನೆಯಡಿ ಒಂದು ತಿಂಗಳ ಹಣ ಬಿಡುಗಡೆ!
Share Now:

ಕರ್ನಾಟಕ ರಾಜ್ಯ ಸರ್ಕಾರವು ತನ್ನ ಎರಡನೇ ವರ್ಷದ(Karnataka Gruhalakshmi Yojana) ಆಡಳಿತದ ಸಾಧನಾ ಸಮಾವೇಶವನ್ನು ಮೇ 20, 2025ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜನೆ ಮಾಡಲಾಗಿದ್ದು. ಈ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಒಂದು ತಿಂಗಳ ಹಣವನ್ನು ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ.

ದಿನಾಂಕ ಮೇ 19, 2025ರಂದು ಫಲಾನುಭವಿಗಳ ಖಾತೆಗೆ ಒಂದು ತಿಂಗಳು ರೂ 2,000 ಹಣವನ್ನು(Gruhalakshmi Status) ಜಮಾ ಮಾಡಲಾಗಿದೆ. ಆದರೆ, ಸರ್ಕಾರವು ಕಳೆದ ಮೂರು ತಿಂಗಳಿನಿಂದ ಈ ಹಣವನ್ನು ಬಾಕಿ ಉಳಿಸಿಕೊಂಡಿತ್ತು. ಈಗ ಕೇವಲ ಒಂದು ಕಂತಿನ ಹಣವನ್ನು ಮಾತ್ರ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Agriculture Department-ಕೃಷಿ ಇಲಾಖೆಯಿಂದ ರೈತರಿಗೆ ಮಹತ್ವದ ಮಾಹಿತಿ ಪ್ರಕಟ!

ಈ ಅಂಕಣದಲ್ಲಿ ಗೃಹಲಕ್ಷ್ಮಿ ಯೋಜನೆಯ ಕುರಿತು ಕೆಲವು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳುವುದರ ಜೊತೆಗೆ ಫಲಾನುಭವಿಗಳು ತಮ್ಮ ಮೊಬೈಲ್ ನಲ್ಲೇ ಗೃಹಲಕ್ಷ್ಮಿ ಯೋಜನೆಯಡಿ ವರ್ಗಾವಣೆ ಅಗಿರುವ ಹಣದ(Gruhalakshmi Amount) ಜಮಾ ವಿವರವನ್ನು ಹೇಗೆ ಚೆಕ್ ಮಾಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ಸಹ ಹಂಚಿಕೊಳ್ಳಲಾಗಿದೆ.

Karnataka Gruhalakshmi Yojana 2025-ಯೋಜನೆಯ ಪ್ರಮುಖ ಉದ್ದೇಶ:

ಗೃಹಲಕ್ಷ್ಮೀ ಯೋಜನೆಯ ಮುಖ್ಯ ಗುರಿಯು ಮಹಿಳೆಯರ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸುವುದು ಮತ್ತು ಅವರ ಜೀವನ ಮಟ್ಟವನ್ನು ಉನ್ನತಿಗೊಳಿಸುವುದು. ಈ ಯೋಜನೆಯು ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳ ಮಹಿಳೆಯರಿಗೆ, ವಿಶೇಷವಾಗಿ ದಿನನಿತ್ಯದ ಖರ್ಚುಗಳಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: Subsidy Seeds Rate list-ಕೃಷಿ ಇಲಾಖೆಯಿಂದ ಬಿತ್ತನೆ ಬೀಜದ ದರ ಪಟ್ಟಿ ಬಿಡುಗಡೆ!

Gruhalakshmi Scheme Total Beneficiary -1.28 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ:

ಕರ್ನಾಟಕ ರಾಜ್ಯ ಸರ್ಕಾರವು 2023ರಲ್ಲಿ ಜಾರಿಗೊಳಿಸಿದ ಗೃಹಲಕ್ಷ್ಮೀ ಯೋಜನೆಯು ಮಹಿಳೆಯರ ಸಬಲೀಕರಣಕ್ಕೆ ಮತ್ತು ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ಯೋಜನೆಯ ಮೂಲಕ, ಕರ್ನಾಟಕದ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ₹2,000 ಆರ್ಥಿಕ ಸಹಾಯವನ್ನು ನೇರ ಬ್ಯಾಂಕ್ ವರ್ಗಾವಣೆ (DBT) ಮೂಲಕ ಒದಗಿಸಲಾಗುತ್ತದೆ.

2025ರ ವೇಳೆಗೆ, ಈ ಯೋಜನೆಯು ರಾಜ್ಯದ ಸುಮಾರು 1.28 ಕೋಟಿ ಮಹಿಳೆಯರಿಗೆ ಲಾಭವನ್ನು ಒದಗಿಸಿದೆ, ಇದು ದೇಶದ ಅತಿದೊಡ್ಡ ಮಹಿಳಾ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Bele Vime- 81.36 ಕೋಟಿ ಬೆಳೆ ವಿಮೆ ಪರಿಹಾರ ರೈತರ ಖಾತೆಗೆ ಬಿಡುಗಡೆ!

Gruhalakshmi Grants-50,000 ಕೋಟಿ ರೂಪಾಯಿ ಧನಸಹಾಯ:

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ಅವರು ಈ ಹಿಂದೆ, “ಮುಖ್ಯಮಂತ್ರಿಗಳ ಸಮ್ಮತಿಯೊಂದಿಗೆ ಮೂರು ತಿಂಗಳ ಬಾಕಿ ಹಣವನ್ನು ಒಂದೇ ತಿಂಗಳಲ್ಲಿ ಜಮಾ ಮಾಡಲಾಗುವುದು” ಎಂದು ಭರವಸೆ ನೀಡಿದ್ದರು. ಆದರೆ, ಪ್ರಸ್ತುತ ಕೇವಲ ಒಂದು ಕಂತಿನ ಹಣವನ್ನು ಮಾತ್ರ ವರ್ಗಾಯಿಸಲಾಗಿದೆ.

2023ರ ಆಗಸ್ಟ್‌ನಿಂದ ರಾಜ್ಯ ಸರ್ಕಾರವು ಕರ್ನಾಟಕದಾದ್ಯಂತ ಸುಮಾರು 1.28 ಕೋಟಿ ಮಹಿಳೆಯರಿಗೆ ತಿಂಗಳಿಗೆ ₹2,000 ಒದಗಿಸುತ್ತಿದೆ. ಈವರೆಗೆ ಒಟ್ಟು ₹50,000 ಕೋಟಿ ಧನಸಹಾಯವನ್ನು ವಿತರಿಸಲಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ. ಆದಾಗ್ಯೂ, ಈ ಹಣದ ವಿತರಣೆಯಲ್ಲಿ ನಿರಂತರತೆ ಕೊರತೆಯೇ ಪ್ರಮುಖ ಸಮಸ್ಯೆಯಾಗಿದೆ.

ಇದನ್ನೂ ಓದಿ: Tarpaulin Subsidy-ಕೃಷಿ ಇಲಾಖೆಯಿಂದ ಶೇ 50% ಸಬ್ಸಿಡಿಯಲ್ಲಿ ಟಾರ್ಪಾಲಿನ್ ಪಡೆಯಲು ಅವಕಾಶ!

Gruhalakshmi Yojane-ಮಹಿಳೆಯರಲ್ಲಿ ಗೊಂದಲ:

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇತ್ತೀಚೆಗೆ, “ನಾವು ತಿಂಗಳಿಗೊಮ್ಮೆ ಹಣ ಕೊಡುತ್ತೇವೆ ಎಂದು ಭರವಸೆ ನೀಡಿಲ್ಲ. ಹಣ ಲಭ್ಯವಾದಾಗ ಕೊಡುತ್ತೇವೆ” ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ಫಲಾನುಭವಿಗಳಲ್ಲಿ ಗೊಂದಲವು ಮತ್ತಷ್ಟು ಹೆಚ್ಚಾಗಿದೆ.

ಬಹುತೇಕ ಮಹಿಳೆಯರು ಇನ್ನೂ ಎರಡು ಕಂತುಗಳ ಬಾಕಿ ಹಣಕ್ಕಾಗಿ ಕಾಯುತ್ತಿದ್ದಾರೆ. ಸಾಧನಾ ಸಮಾವೇಶದ ಸಂದರ್ಭದಲ್ಲಿ ಕೇವಲ ಒಂದು ಕಂತಿನ ಹಣ ಜಮೆಯಾಗಿದ್ದು, ಇನ್ನೆರಡು ಕಂತುಗಳ ಜೊತೆಗೆ ಮೇ-2025 ತಿಂಗಳ ಕಂತು ಕೂಡ ಬಾಕಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Pumpset Repair Training-ಉಚಿತ ಪಂಪ್ ಸೆಟ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ!

Gruhalakshmi amount release Details-ಬಾಕಿ ಹಣದ ಜಮೆ ಯಾವಾಗ?

ಗೃಹಲಕ್ಷ್ಮೀ ಯೋಜನೆ ಜಾರಿಯಾದಾಗಿನಿಂದ ಹಣದ ವಿತರಣೆಯಲ್ಲಿ ಹಲವು ತೊಂದರೆಗಳು ಕಾಣಿಸಿಕೊಂಡಿವೆ. ತಾಂತ್ರಿಕ ದೋಷಗಳು, ಬ್ಯಾಂಕ್ ಖಾತೆಯ ಎಬಿಎ ಸಮಸ್ಯೆಗಳು, ಮತ್ತು ಆರ್ಥಿಕ ಅಸಮತೋಲನದಂತಹ ಕಾರಣಗಳಿಂದ ಹಣದ ಬಿಡುಗಡೆಯಲ್ಲಿ ವಿಳಂಬವಾಗುತ್ತಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಬಾಕಿ ಹಣವನ್ನು ಒಮ್ಮೆಗೇ ಜಮಾ ಮಾಡಲಾಗುವುದು ಎಂದು ಪದೇ ಪದೇ ಭರವಸೆ ನೀಡಿದ್ದಾರೆ. ಆದರೆ, ಭರವಸೆಯಂತೆ ಒಟ್ಟಿಗೆ ಹಣ ಜಮೆಯಾಗಿಲ್ಲ. ಸಾಧನಾ ಸಮಾವೇಶದ ನಂತರ ಉಳಿದ ಕಂತುಗಳ ಹಣ ಶೀಘ್ರದಲ್ಲಿ ಜಮೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Best Pension Scheme-ತಿಂಗಳಿಗೆ ರೂ 5,000/- ಪಿಂಚಣಿ ಸೌಲಭ್ಯ! ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ!

Gruhalakshmi Status -2025: ಗೃಹಲಕ್ಷ್ಮಿ ಯೋಜನೆಯ ಜಮಾ ವಿವರ ತಿಳಿಯುವುದು ಬಾರಿ ಸುಲಭ:

ಗೃಹಲಕ್ಷ್ಮೀ ಯೋಜನೆಯಡಿ ಹಣ ಜಮೆಯಾಗಿರುವ ವಿವರವನ್ನು ಫಲಾನುಭವಿಗಳು ಎರಡು ವಿಧಾನಗಳ ಮೂಲಕ ಪರಿಶೀಲಿಸಿಕೊಳ್ಳಬಹುದು. ಈ ವಿಧಾನಗಳ ವಿವರವನ್ನು ಕೆಳಗೆ ನೀಡಲಾಗಿದೆ:

ವಿಧಾನ-1: ಬ್ಯಾಂಕ್ ಸಹಾಯವಾಣಿಗೆ ಮಿಸ್ಡ್ ಕಾಲ್ ಮೂಲಕ ತಿಳಿಯಿರಿ:

ಅರ್ಜಿದಾರರು ತಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಸಹಾಯವಾಣಿ ಸಂಖ್ಯೆಗೆ ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುವ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಬಹುದು. ಇದರಿಂದ ಗೃಹಲಕ್ಷ್ಮೀ ಯೋಜನೆಯ ಹಣ ಜಮೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಮನೆಯಲ್ಲೇ ಕುಳಿತು ತಮ್ಮ ಮೊಬೈಲ್‌ನಲ್ಲಿ ತಿಳಿಯಬಹುದು.

ಎಲ್ಲಾ ಬ್ಯಾಂಕ್‌ಗಳ ಸಹಾಯವಾಣಿ ಸಂಖ್ಯೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: Click here

ವಿಧಾನ-2: DBT ಕರ್ನಾಟಕ ಮೊಬೈಲ್ ಆಪ್ ಮೂಲಕ ಚೆಕ್ ಮಾಡಿಕೊಳ್ಳಬಹುದು:

ಹಂತ-1: ಮೊದಲಿಗೆ ಗೃಹಲಕ್ಷ್ಮೀ ಸ್ಥಿತಿ ಪರಿಶೀಲನೆಗಾಗಿ ಇಲ್ಲಿ ಕ್ಲಿಕ್ ಮಾಡಿ Gruhalakshmi Status Check ಅಧಿಕೃತ DBT ಕರ್ನಾಟಕ ಮೊಬೈಲ್ ಆಪ್‌ನನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.

gruhalakshmi status

ಹಂತ-2: ತದನಂತರ, ಫಲಾನುಭವಿಯ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, OTP ಪಡೆದುಕೊಂಡು DBT ಕರ್ನಾಟಕ ಆಪ್‌ಗೆ ಲಾಗಿನ್ ಆಗಲು ಬಳಕೆದಾರ ಐಡಿ ಮತ್ತು ಪಾಸ್‌ವರ್ಡ್ ರಚಿಸಿಕೊಳ್ಳಿ.

ಹಂತ-3: ರಚಿಸಿದ ಪಾಸ್‌ವರ್ಡ್ ಬಳಸಿ ಲಾಗಿನ್ ಆದ ಬಳಿಕ, "ಪಾವತಿ ಸ್ಥಿತಿ/Payment Status" ಬಟನ್ ಮೇಲೆ ಕ್ಲಿಕ್ ಮಾಡಿ. ಇದರಿಂದ ಗೃಹಲಕ್ಷ್ಮೀ ಯೋಜನೆಯಡಿ ಜಮೆಯಾಗಿರುವ ಕಂತುಗಳ ಅಥವಾ ಹಣದ ಸಂಪೂರ್ಣ ವಿವರವನ್ನು ಪಡೆಯಬಹುದು.

WhatsApp Group Join Now
Telegram Group Join Now
Share Now: