- Advertisment -
HomeNewsHero Bike Offers-ಯುಗಾದಿ ಹಬ್ಬಕ್ಕೆ ಹೀರೊ ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್!

Hero Bike Offers-ಯುಗಾದಿ ಹಬ್ಬಕ್ಕೆ ಹೀರೊ ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್!

ಹೀರೊ ಬೈಕ್ ತಯಾರಕ ಮತ್ತು ಮಾರಾಟ ಕಂಪನಿಯು ಕೆಲವು ಬೈಕ್ ಮೇಲೆ ಯುಗಾದಿ ಹಬ್ಬಕ್ಕೆ ರಿಯಾಯಿತಿಯನ್ನು(Hero Two-Wheeler Festive Offers) ಘೋಷಣೆ ಮಾಡಿದ್ದು, ಇದರ ಕುರಿತು ಒಂದಿಷ್ಟು ಉಪಯುಕ್ತ ಮಾಹಿತಿಯನ್ನು ಇಲ್ಲಿ ಪ್ರಕಟಿಸಲಾಗಿದೆ.

ಬಹುತೇಕ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಹೀರೊ ಕಂಪನಿಯ(Hero Bike Discount Offers) ಬೈಕ್ ಗಳು ಉತ್ತಮ ಮೈಲೇಜ್ ಕೋಡುತ್ತವೆ ಎನ್ನುವ ಕಾರಣಕ್ಕೆ ಈ ಬೈಕ್ ಗಳನ್ನು ಖರೀದಿ ಮಾಡಲು ಮುಂದಾಗುತ್ತಾರೆ.

ಇದನ್ನೂ ಓದಿ: Voter ID-ವೋಟರ್ ಐಡಿ ಕುರಿತು ಮಹತ್ವದ ಮಾಹಿತಿ ಪ್ರಕಟ!

ಅನೇಕ ಜನರು ದೀಪಾವಳಿ ಮತ್ತು ಯುಗಾದಿ ಹಬ್ಬಕ್ಕೆ ಹೊಸ ವಾಹನ ಖರೀದಿ ಮಾಡುವ ಯೋಜನೆಯನ್ನು ಹಾಕಿಕೊಳ್ಳುತ್ತಾರೆ ಏಕೆಂದರೆ ಈ ಸಮಯದಲ್ಲಿ ಬೈಕ್ ತಯಾರಕ ಕಂಪನಿಯವರು ಆಫರ್(Hero Showroom Discounts)ನಲ್ಲಿ ಬೈಕ್ ಮಾರಾಟ ಮಾಡಲು ಅವಕಾಶ ನೀಡುತ್ತಾರೆ ಅದ ಕಾರಣ ಪ್ರಸ್ತುತ ಯುಗಾದಿ ಹಬ್ಬಕ್ಕೆ ಹೀರೋ ಕಂಪನಿ ಬೈಕ್ ಗಳ ಬೆಲೆಯ ಮೇಲೆ ಡಿಸ್ಕೌಂಟ್ ಅನ್ನು ಘೋಷಣೆ ಮಾಡಲಾಗಿದ್ದು ಇದರ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.

Two-Wheeler Festive Offers-ಹೀರೊ ಬೈಕ್ ಡಿಸ್ಕೌಂಟ್ ವಿವರ ಹೀಗಿದೆ:

1) Hero Passion Plus- 79,901/-
2) Hero HF100- 49,999/-

ಈ ಮೇಲಿನ ಎರಡು ಮಾಡೆಲ್ ಬೈಕ್ ಖರೀದಿ ಮಾಡುವ ಗ್ರಾಹಕರಿಗೆ ನಗದು ಡಿಸ್ಕೌಂಟ್ 3,000/- ಹಾಗೂ ರೈತರಿಗಾಗಿ 2,000/- ಆಫರ್ ನೀಡಲಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದಲ್ಲದೇ ಕ್ರೆಡಿಟ್ ಕಾರ್ಡ(Hero Bike EMI Plans) ಬಳಕೆ ಮಾಡಿಕೊಂಡು ಬೈಕ್ ಖರೀದಿ ಮಾಡುವ ಗ್ರಾಹಕರಿಗೆ 5% ಕ್ಯಾಶ್ ಬ್ಯಾಕ್ ಸಹ ನೀಡಲಾಗಿದೆ.

ಇದನ್ನೂ ಓದಿ: Yashaswini Card-2025: ಯಶಸ್ವಿನಿ ಕಾರ್ಡ ಪಡೆಯಲು ಇನ್ನು 10 ದಿನ ಮಾತ್ರ ಅವಕಾಶ!

Hero Bike EMI Plans-ಕೆಲವ ಪ್ರತಿ ದಿನ ₹60/- ಪಾವತಿ ಮಾಡಿ ಬೈಕ್ ಖರೀದಿ ಮಾಡಿ:

ಬೈಕ್ ಅನ್ನು ಖರೀದಿ ಮಾಡುವ ಯೋಜನೆಯನ್ನು ಹಾಕಿಕೊಂಡಿರುವವರು ಆಧಾರ್ ಕಾರ್ಡ ಮತ್ತು ಪಾನ್ ಕಾರ್ಡ ಅನ್ನು ಸಲ್ಲಿಸಿ EMI ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡು ಪ್ರತಿ ನಿತ್ಯ ₹60/- ರೂ ಪಾವತಿ ಮಾಡಿ ಬೈಕ್ ಅನ್ನು ಖರೀದಿ ಮಾಡಬಹುದಾಗಿದೆ.

Hero Bike Offers in Bangalore-ಡಿಸ್ಕೌಂಟ್ ನಲ್ಲಿ ಮಾರಾಟ ಮಾಡುತ್ತಿರುವ ಹೀರೊ ಬೈಕ್ ಗಳ ವಿವರ:

ಹೀರೊ ಕಂಪನಿಯ ಈ ಕೆಳಗೆ ವಿವರಿಸಿರುವ ಬೈಕ್ ಗಳ ಮೇಲೆ ಡಿಸ್ಕೌಂಟ್ ಅನ್ನು ಯುಗಾದಿ ಹಬ್ಬಕ್ಕೆ ನೀಡಲಾಗುತ್ತಿದ್ದು ಈ ಬೈಕ್ ಗಳ ವಿಶೇಷತೆಗಳ ಕುರಿತು ಒಂದಿಷ್ಟು ವಿವರವಾದ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

ಇದನ್ನೂ ಓದಿ: Land Conversion-ಗ್ರಾಮೀಣ ಭಾಗದಲ್ಲಿ ಮನೆ ಕಟ್ಟುವವರಿಗೆ ಸಿಹಿ ಸುದ್ದಿ: ಸಚಿವ ಕೃಷ್ಣಬೈರೇಗೌಡ

hero

1) Hero Passion Plus:

​ಹೀರೊ(Hero Passion Plus) ಪ್ಯಾಶನ್ ಪ್ಲಸ್ ಬೈಕ್‌ನ ಕಂಪನಿಯ ನವೀಕೃತ ಮಾದರಿಯಲ್ಲಿ ಒಂದಾಗಿದ್ದು, ಈ ನವೀನ ಮಾದರಿಯ ಬೈಕ್ 97.2 ಸಿಸಿ ಸಾಮರ್ಥ್ಯದ ಎಂಜಿನ್ ಹೊಂದಿದ್ದು, 7.91 ಬಿಎಚ್‌ಪಿ ಶಕ್ತಿ ಮತ್ತು 8.05 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕ್ ನಲ್ಲಿ 4-ಸ್ಪೀಡ್ ಗೇರ್ ಬಾಕ್ಸ್ ಮತ್ತು ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದ್ದು ಉತ್ತಮ ಮೈಲೇಜ್ ಅನ್ನು ಈ ಬೈಕ್ ಹೊಂದಿರುತ್ತದೆ. ಈ ಬೈಕ್‌ನ ತೂಕ 115 ಕೆಜಿ ಆಗಿದ್ದು, 11 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿರುತ್ತದೆ.

2) Hero HF100:

ಹೀರೊ(Hero HF100) ಬೈಕ್ ದಿನನಿತ್ಯ ಹೆಚ್ಚು ಕಿಲೋ ಮೀಟರ್ ವರೆಗೆ ಬೈಕ್ ನಲ್ಲಿ ಪ್ರಯಾಣಿಸುವವರಿಗೆ ಉತ್ತಮ ಆಯ್ಕೆಯಾಗಿದ್ದು ಈ ಬೈಕ್ ಅತೀ ಹೆಚ್ಚು ಮೈಲೇಜ್ ನೀಡುವ ಬೈಕ್ ಮಾಡೆಲ್ ಗಳಲ್ಲಿ ಒಂದಾಗಿದೆ. 97.2 ಸಿಸಿ ಸಾಮರ್ಥ್ಯದ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 8.02 ಪಿಎಸ್ ಶಕ್ತಿ ಮತ್ತು 8.05 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 4-ಸ್ಪೀಡ್ ಗೇರ್ ಬಾಕ್ಸ್ ಮತ್ತು 130 ಮಿಮೀ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. HF 100 ಬೈಕ್‌ನ ತೂಕ 109 ಕೆಜಿ ಇದ್ದು, 9.1 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿರುತ್ತದೆ.

ಇದನ್ನೂ ಓದಿ: Diploma Certificate Courses-ಕೃಷಿ ವಿದ್ಯಾಲಯದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡುವ ಅರ್ಜಿ ಆಹ್ವಾನ!

How to Choose the Right Bike Before Purchase-ಬೈಕ್ ಖರೀದಿಸುವ ಮುನ್ನ ತಪ್ಪದೇ ಈ ಕ್ರಮಗಳನ್ನು ಅನುಸರಿಸಿ:

ಸಾರ್ವಜನಿಕರು ಬೈಕ್ ಖರೀದಿ ಮಾಡಬೇಕೆಂದು ನಿರ್ಧಾರ ಮಾಡಿದ ಬಳಿಕ ನೇರವಾಗಿ ಬೈಕ್ ಖರೀದಿ ಮಾಡುವ ಬದಲು ಈ ಕೆಳಗೆ ತಿಳಿಸಿರುವ ಕ್ರಮಗಳನ್ನು ಅನುಸರಿಸಿ ನಂತರ ಬೈಕ್ ಖರೀದಿಯನ್ನು ಮಾಡುವುದು ಉತ್ತಮ ಆಯ್ಕೆಯಾಗಿದೆ.

1) Bike brands in india-ನಿಮಗೆ ಬೇಕಾದ ಬೈಕ್ ಆಯ್ಕೆ ಮಾಡಿ:

ಸಾರ್ವಜನಿಕರು ತಮ್ಮ ದೈನಂದಿನ ಪ್ರಯಾಣ, ಲಾಂಗ್ ರೈಡ್ ಇತ್ಯಾದಿ ಅಂಕಿ-ಅಂಶದ ಪ್ರಕಾರ ಸೂಕ್ತವಾದ ಕಂಪನಿಯ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಬೈಕ್ ಆಯ್ಕೆ ಸಮಯದಲ್ಲಿ ಮೈಲೇಜ್, ಪವರ್, ಮೌಲ್ಯ ಮತ್ತು ನಿರ್ವಹಣಾ ವೆಚ್ಚಗಳನ್ನು ಪರಿಗಣಿಸಬೇಕು.

ಇದನ್ನೂ ಓದಿ: Subsidy Scheme-ಈ ಕಾರ್ಡ ಇದ್ದವರಿಗೆ ಹೆರಿಗೆ ವೆಚ್ಚ ಭರಿಸಲು ₹50 ಸಾವಿರ ಸಹಾಯಧನ!

2) Budget Planning-ಬಜೆಟ್ ನಿಗದಿ ಮಾಡಿ:

ಎಕ್ಸ್‌ಶೋರೂಂ ಬೆಲೆ ಮತ್ತು ಆನ್-ರೋಡ್ ಬೆಲೆಯನ್ನು ತಿಳಿದುಕೊಳ್ಳಿ ಮತ್ತು ಲೋನ್ ಅಥವಾ ಇಎಂಐ ಆಯ್ಕೆಗಳಿದ್ದರೆ ಅವುಗಳ ಮಾಹಿತಿಯನ್ನು ಪಡೆಯಿರಿ. ಬಜಾರ್ ಸಂಶೋಧನೆ ಮಾಡಿ ವಿವಿಧ ಬ್ರಾಂಡ್‌ಗಳು ಮತ್ತು ಮಾದರಿಗಳನ್ನು ಹೋಲಿಕೆ ಮಾಡುವುದು ಅತ್ಯಗತ್ಯ ಜೊತೆಗೆ ಆನ್‌ಲೈನ್ ಹಾಗೂ ಶೋರೂಂಗಳಲ್ಲಿ ಬೆಲೆ, ಆಫರ್‌ಗಳು ಮತ್ತು ರಿವ್ಯೂಗಳ ಪರಿಶೀಲನೆ ಮಾಡಿಕೊಳ್ಳಬೇಕು.

3) Test Drive-ಟೆಸ್ಟ್ ರೈಡ್ ಮಾಡಿಕೊಳ್ಳಿ:

ಒಮ್ಮೆ ಬೈಕ್ ಖರೀದಿ ಮಾಡುವುದರ ಕುರಿತು ನಿರ್ಧಾರ ಮಾಡಿದ ಬಳಿಕ ನೀವು ಆಯ್ಕೆ ಮಾಡಿರುವ ಬೈಕ್ ಶೋ ರೂಮ್ ಅನ್ನು ನೇರವಾಗಿ ಭೇಟಿ ಮಾಡಿ ಕುಷಲತೆಯಿಂದ ಸವಾರಿ ಮಾಡಲು ಅನುಕೂಲವಾಗುತ್ತದೆಯೇ ಎಂಬುದನ್ನು ಪರಿಶೀಲಿಸಿ ಮತ್ತು ಬ್ರೇಕಿಂಗ್, ಹ್ಯಾಂಡ್ಲಿಂಗ್ ಮತ್ತು ಸೌಕರ್ಯಗಳನ್ನು ಖುದ್ದು ಚೆಕ್ ಮಾಡಿಕೊಳ್ಳಿ.

4) Bike EMI Offer-ಲೋನ್ ಮತ್ತು ಇಎಂಐ ಆಯ್ಕೆಗಳನ್ನು ಪರಿಶೀಲಿಸಿ:

ಬೈಕ್ ಖರೀದಿಗೆ ಲೋನ್ ಮತ್ತು ಇಎಂಐ ಆಯ್ಕೆಗಳನ್ನು ಪರಿಗಣಿಸಿ ಬ್ಯಾಂಕ್ ಅಥವಾ ಫೈನಾನ್ಸ್ ಕಂಪನಿಗಳ ಸಾಲದ ಬಡ್ಡಿದರ ಮತ್ತು ಪರಿಷೋಧನಾ ಷರತ್ತುಗಳನ್ನು ತಿಳಿದುಕೊಳ್ಳಿ ಕಡಿಮೆ ಬಡ್ಡಿದರದ ಮತ್ತು ಅನುಕೂಲಕರ ಇಎಂಐ ಯೋಜನೆ ಆಯ್ಕೆಮಾಡಿ.

5) Bike On Road Price-ಆನ್-ರೋಡ್ ಬೆಲೆ ಪರಿಶೀಲಿಸಿ:

ಆರ್‌ಟಿ‌ಒ ಚಾರ್ಜ್, ವಿಮೆ, ರಸ್ತೆ ತೆರಿಗೆ, ಮತ್ತು ಇತರ ಶುಲ್ಕಗಳನ್ನು ಸೇರಿಸಿ ಒಟ್ಟು ವೆಚ್ಚ ಎಷ್ಟು ಬರುತ್ತದೆ ಎಂಬುದನ್ನು ಗಮನಿಸಿ.

- Advertisment -
LATEST ARTICLES

Related Articles

- Advertisment -

Most Popular

- Advertisment -