HomeNew postsRation card application: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಜಿಲ್ಲೆಯವರಿಗೆ ಇನ್ನು 2...

Ration card application: ರೇಷನ್ ಕಾರ್ಡ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಈ ಜಿಲ್ಲೆಯವರಿಗೆ ಇನ್ನು 2 ದಿನ ಮಾತ್ರ ಅವಕಾಶ!

ration card correction last date: ರಾಜ್ಯ ಸರಕಾರದಿಂದ ಪಡಿತರ ಚೀಟಿ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಲು 2ನೇ ಹಂತದಲ್ಲಿ ಒಟ್ಟು 9 ದಿನ ಅವಕಾಶ ಮಾಡಿಕೊಡಲಾಗಿದ್ದು.

ಇದರನ್ವಯ ಅಕ್ಟೋಬರ್ 5 ರಿಂದ ಅಕ್ಟೋಬರ್ 13 ರವರೆಗೆ ವಿಭಾಗವಾರು ದಿನಾಂಕ ನಿಗದಿಪಡಿಸಲಾಗಿತ್ತು ಒಂದೊಂದು ವಿಭಾಗಕ್ಕೆ 3 ದಿನ ನಿಗದಿಪಡಿಸಲಾಗಿದೆ.

ಮೊದಲ 3 ದಿನ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿನ ರ‍ೇಷನ್ ಕಾರ್ಡ್ ತಿದ್ದುಪಡಿ ಮತ್ತು ಹೊಸ ಸದಸ್ಯರ ಸೇರ್ಪಡೆಗೆ ಅಕ್ಟೋಬರ್ 5 ಇಂದಿನಿಂದ 7ರವರೆಗೆ ಅವಕಾಶ ನೀಡಲಾಗಿತ್ತು ಈ ಅವಧಿ ಮುಕ್ತಾಯವಾಗಿದ್ದು.

ಎರಡನೇಯ ಸರದಿಯಂತೆ ಅಕ್ಟೋಬರ್ 8 ಇಂದಿನಿಂದ 10ರವರೆಗೆ ಒಟ್ಟು 3 ದಿನ ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಹಾವೇರಿ, ಹಾಸನ, ಗದಗ, ಮೈಸೂರು, ವಿಜಯಪುರ, ಉತ್ತರ ಕನ್ನಡ, ಉಡುಪಿ ಸೇರಿದಂತೆ 15 ಜಿಲ್ಲೆಗಳ ರೇಷನ್ ಕಾರ್ಡ್ ದಾರರಿಗೆ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ ಇದರಂತೆ ಈ ಜಿಲ್ಲೆಯ ಅರ್ಜಿದಾರರುಇನ್ನು 2 ದಿನದ ಒಳಗಾಗಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: ನಿಮಗೆ ಇನ್ನೂ ಗೃಹಲಕ್ಷ್ಮಿ ಮೊದಲನೇ ಕಂತಿನ ಹಣ ಬಂದಿಲ್ವಾ? ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದಿಯಾ ಚೆಕ್ ಮಾಡಿ!

ಉಳಿದಂತೆ ಇತರೆ ಮೂರನೇಯ ಸರದಿಯನ್ವಯ ಬೀದರ್, ಚಿಕ್ಕಬಳ್ಳಾಪುರ, ಬಳ್ಳಾರಿ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಕೊಪ್ಪಳ, ಶಿವಮೊಗ್ಗ, ರಾಮನಗರ, ಯಾದಗಿರಿ, ತುಮಕೂರು, ವಿಜಯನಗರ ಸೇರಿದಂತೆ ಒಟ್ಟು 14 ಜಿಲ್ಲೆಗಳ ರೇಷನ್ ಕಾರ್ಡ್ ದಾರರಿಗೆ ಅಕ್ಟೋಬರ್ 11ರಿಂದ 13ರವರೆಗೆ ತಿದ್ದುಪಡಿ ಮತ್ತು ಹೊಸ ಸದಸ್ಯರ ಹೆಸರು ಸೇರ‍ಿಸುವುದಕ್ಕೆ ಅರ್ಜಿ ಹಾಕಲು ಅವಕಾಶ ನೀಡಲಾಗಿದೆ.

ಈ ಮಾಹಿತಿ ಉಪಯುಕ್ತ ಅನಿಸಿದಲ್ಲಿ ತಪ್ಪದೇ ನಿಮ್ಮ ಬಳಿಯಿರುವ 3-4 ವಾಟ್ಸಾಪ್ ಗುಂಪುಗಳಿಗೆ ಶೇರ್ ಮಾಡಿ ಏಕೆಂದರೆ ರೇಷನ್ ಕಾರ್ಡ ತಿದ್ದುಪಡಿ ಮಾಡಿಕೊಳ್ಳದ ನಾಗರಿಕರಿಗೆ ಈ ಮಾಹಿತಿ ಸಹಕಾರಿ ಅಗಿದೆ.

ಇದನ್ನೂ ಓದಿ: LPG subsidy: ಅಡುಗೆ ಸಿಲಿಂಡರ್ ಸಬ್ಸಿಡಿ ಬಿಡುಗಡೆ! ಎಲ್‌ಪಿಜಿ ಸಬ್ಸಿಡಿ ಹೆಚ್ಚಿಸಿದ ಕೇಂದ್ರ ಸರಕಾರ.

Ration card application status check- ತಿದ್ದುಪಡಿ ಅರ್ಜಿ ಸ್ಥಿತಿ ಚೆಕ್ ಮಾಡುವ ವಿಧಾನ:

ಈಗಾಗಲೇ ರೇಷನ್ ಕಾರ್ಡ ತಿದ್ದುಪಡಿ ಮಾಡಿಕೊಳ್ಳಲುವ ಸಲುವಾಗಿ ಅರ್ಜಿ ಸಲ್ಲಿಸಿದರೆ  ಇಲ್ಲಿ ಕ್ಲಿಕ್ ಮಾಡಿ> ration card correction application status check ಈ ಅಂಕಣದಲ್ಲಿ ತಿಳಿಸಿರುವ ಮಾಹಿತಿಯ ಅನುಸರ ವಿಧಾನಗಳನ್ನು ಅನುಸರಿಸಿ ನಿಮ್ಮ ಅರ್ಜಿಯ ಸಂಖ್ಯೆಯನ್ನು ನಮೂದಿಸಿ ಅರ್ಜಿ ಯಾವ ಹಂತದಲ್ಲಿದೆ ಎಂದು ನಿಮ್ಮ ಮೊಬೈಲಲ್ಲೇ ಸ್ಥಿತಿ ಚೆಕ್ ಮಾಡಿಕೊಳ್ಳಬವುದು.

Ration card ekyc: ತಪ್ಪದೇ ಮಾಡಿಸಿ ರೇಷನ್ ಇ-ಕೆವೈಸಿ:

APL ಮತ್ತು BPL ಕಾರ್ಡದಾರರು ನಿಮ್ಮ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಕಡ್ಡಾಯವಾಗಿ ಮಾಡಿಕೊಳ್ಳಬೇಕು ಇಲ್ಲವಾದಲ್ಲಿ ಆಹಾರ ಧಾನ್ಯ ಪಡೆಯಲು ಮತ್ತು ಗೃಹಲಕ್ಷ್ಮಿ ಯೋಜನೆಯಡಿ ಹಣ ಪಡೆಯಲು ಸಾಧ್ಯವಾಗುವುದಿಲ್ಲ ಅದ್ದರಿಂದ ರೇಷನ್ ಕಾರ್ಡ್ ನಲ್ಲಿರುವ ಎಲ್ಲಾ ಸದಸ್ಯರ ಇ-ಕೆವೈಸಿ ಮಾಡಿಸದವರು ತಪ್ಪದೇ ನಿಮ್ಮ ಹತ್ತಿರ ನ್ಯಾಯ ಬೆಲೆ ಅಂಗಡಿಯನ್ನು ಭೇಟಿ ಮಾಡಿ eKYC ಮಾಡಿಕೊಳ್ಳುವಂತೆ ಇಲಾಖೆಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: Old age Pension: ಈ ಯೋಜನೆಯಡಿ ಪ್ರತಿ ತಿಂಗಳು 1200 ರೂ ವರೆಗೆ ಪಿಂಚಣಿ ಪಡೆಯಬವುದು!

Most Popular

Latest Articles

Related Articles