Fruits ID-ರೈತರ ಗಮನಕ್ಕೆ: ‘ಫ್ರೂಟ್ಸ್’ ತಂತ್ರಾಂಶದಲ್ಲಿ ಇ-ಕೆವೈಸಿ ಮತ್ತು ಡಿಜಿಟಲ್ ಸಹಮತಿ ಈಗ ಕಡ್ಡಾಯ!

April 22, 2026 | Siddesh
Fruits ID-ರೈತರ ಗಮನಕ್ಕೆ: ‘ಫ್ರೂಟ್ಸ್’ ತಂತ್ರಾಂಶದಲ್ಲಿ ಇ-ಕೆವೈಸಿ ಮತ್ತು ಡಿಜಿಟಲ್ ಸಹಮತಿ ಈಗ ಕಡ್ಡಾಯ!
Share Now:

ಬೆಂಗಳೂರು: ರಾಜ್ಯದ ಅನ್ನದಾತರ ಸಮಗ್ರ ಮಾಹಿತಿಯನ್ನು ಒಂದೇ ಸೂರಿನಡಿ ತರುವ ಉದ್ದೇಶ ಹೊಂದಿರುವ ‘ಫ್ರೂಟ್ಸ್’ (FRUITS - Farmer Registration and Unified Beneficiary Information System) ತಂತ್ರಾಂಶದಲ್ಲಿ ಈಗ ಮಹತ್ವದ ಬದಲಾವಣೆ ತರಲಾಗಿದೆ. ಕೇಂದ್ರ ಸರ್ಕಾರದ ‘ಡಿಜಿಟಲ್ ಅಗ್ರಿ ಮಿಷನ್’ ಅಡಿಯಲ್ಲಿ ರಾಜ್ಯ ರೈತ ನೋಂದಣಿ (State Farmer Registry) ಪ್ರಕ್ರಿಯೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದ್ದು, ನೋಂದಾಯಿತ ಪ್ರತಿಯೊಬ್ಬ ರೈತರು ಇ-ಕೆವೈಸಿ (e-KYC) ಮಾಡಿಸುವುದು ಮತ್ತು ಡಿಜಿಟಲ್ ಸಹಮತಿ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಈ ಮಹತ್ವಾಕಾಂಕ್ಷಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಈಗಾಗಲೇ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕರ್ನಾಟಕವು ಈ ಯೋಜನೆಯಡಿ ಸುಮಾರು 759.872 ಕೋಟಿ ರೂ.ಗಳ ವಿಶೇಷ ಕೇಂದ್ರ ನೆರವನ್ನು (SCA) ನಿರೀಕ್ಷಿಸುತ್ತಿದ್ದು, ಭೂ ಹಿಡುವಳಿದಾರ ರೈತರ ನಿಖರ ವಿವರಗಳನ್ನು ಡಿಜಿಟಲೀಕರಣಗೊಳಿಸುವುದು ಇದರ ಮುಖ್ಯ ಗುರಿಯಾಗಿದೆ. ಈಗಾಗಲೇ ಫ್ರೂಟ್ಸ್ ಪೋರ್ಟಲ್‌ನಲ್ಲಿ ಒಂದು ಕೋಟಿಗೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದು, ಅದರಲ್ಲಿ 71 ಲಕ್ಷಕ್ಕೂ ಅಧಿಕ ರೈತರು ಭೂಮಿ ಹೊಂದಿದ್ದಾರೆ. ಈಗ ಇವರೆಲ್ಲರೂ ತಮ್ಮ ದಾಖಲೆಗಳನ್ನು ದೃಢೀಕರಿಸುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: AO and AAO Recruitment-ಕೃಷಿ ಇಲಾಖೆಯಲ್ಲಿ ಬೃಹತ್ ನೇಮಕಾತಿ: 600ಕ್ಕೂ ಹೆಚ್ಚು ಹುದ್ದೆಗಳಿಗೆ ಕೆಇಎಯಿಂದ ಅರ್ಜಿ ಆಹ್ವಾನ!

ವಿಶೇಷವಾಗಿ ಪಿಎಂ-ಕಿಸಾನ್ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವ ಸುಮಾರು 4 ಲಕ್ಷ ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆ ಇನ್ನೂ ಬಾಕಿ ಉಳಿದಿದ್ದು, ಇದನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ. ರೈತರು ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಕೆ  ಇಲಾಖೆಗಳ ಕಚೇರಿಗಳಿಗೆ ಭೇಟಿ ನೀಡಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ನಿಗದಿತ ಸಮಯದೊಳಗೆ ಈ ಗುರಿಯನ್ನು ತಲುಪಲು ಜಿಲ್ಲಾ ಮತ್ತು ಇಲಾಖಾ ಮಟ್ಟದ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದ್ದು, ರೈತರಲ್ಲಿ ಈ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: MY LIC App-ಎಲ್ಐಸಿಯಿಂದ 'ಮೈ ಎಲ್ಐಸಿ' ಹೊಸ ಆಪ್ ಬಿಡುಗಡೆ!ಬೆರಳ ತುದಿಯಲ್ಲಿ ಪಾಲಸಿ ಮಾಹಿತಿ!

fruits Website

How To Apply-ರೈತರು ಎಲ್ಲಿ ಅರ್ಜಿ ಸಲ್ಲಿಸಬೇಕು?

ರೈತರು ಕೃಷಿ ಇಲಾಖೆಯ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರವನ್ನು ನೇರವಾಗಿ ಅಗತ್ಯ ದಾಖಲಾತಿಗಳ ಸಮೇತ ಭೇಟಿ ಮಾಡಿ ಕೆವೈಸಿಯನ್ನು ಮಾಡಿಸಬವುದು.

ಇದನ್ನೂ ಓದಿ: Electricity Bill-ಮನೆಯಲ್ಲಿ ಬಳಸುವ ವಿದ್ಯುತ್ ದರ ಪರಿಷ್ಕರಣೆ! ಇಲ್ಲಿದೆ ಮಹತ್ವದ ಮಾಹಿತಿ!

Required Documents-ಅವಶ್ಯಕ ದಾಖಲೆಗಳು:

ರೈತರು ಫ್ರೂಟ್ಸ್ ಜಾಲತಾಣದಲ್ಲಿ ತಮ್ಮ ವಿವರವನ್ನು ದೃಡೀಕರಣ ಮಾಡಿ ಕೆವೈಸಿ ಮತ್ತು ಭೂ ದಾಖಲೆಗಳ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

ರೈತರ ಆಧಾರ್ ಕಾರ್ಡ್

ಬ್ಯಾಂಕ್ ಪದೇ ಬುಕ್

ಜಮೀನಿನ ಪಹಣಿ

ಮೊಬೈಲ್ ನಂಬರ್

ಇದನ್ನೂ ಓದಿ: Adhar Update-ಮಕ್ಕಳ ಆಧಾರ್ ಬಯೋಮೆಟ್ರಿಕ್ ಅಪ್ಡೇಟ್ ಕಡ್ಡಾಯ!ಇಲ್ಲಿದೆ ಸಂಪೂರ್ಣ ಮಾಹಿತಿ!

ಈ ಬಗ್ಗೆ ಇನ್ನು ಹೆಚ್ಚಿನ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿ.

Fruits Website-ಅಧಿಕೃತ ಫ್ರೂಟ್ಸ್ ವೆಬ್ಸೈಟ್- Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: