e-Swathu 2.0-ನಿಮ್ಮ ಆಸ್ತಿ, ನಿಮ್ಮ ಹಕ್ಕು: ಇ-ಸ್ವತ್ತು ಪಡೆಯಲು ಈಗ ಹೊಸ ಸರಳ ವ್ಯವಸ್ಥೆ ಜಾರಿ!

April 29, 2026 | Siddesh
e-Swathu 2.0-ನಿಮ್ಮ ಆಸ್ತಿ, ನಿಮ್ಮ ಹಕ್ಕು: ಇ-ಸ್ವತ್ತು ಪಡೆಯಲು ಈಗ ಹೊಸ ಸರಳ ವ್ಯವಸ್ಥೆ ಜಾರಿ!
Share Now:

ಬೆಂಗಳೂರು: ರಾಜ್ಯದ ನಾಗರಿಕರು ತಮ್ಮ ಆಸ್ತಿಗಳ ದಾಖಲಾತಿಯನ್ನು ಪಡೆಯಲು ಇನ್ನು ಮುಂದೆ ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ-ಸ್ವತ್ತು (e-Swathu 2.0) ತಂತ್ರಾಂಶದ ಮೂಲಕ ಆಸ್ತಿ ದಾಖಲೆಗಳನ್ನು ಸುಲಭವಾಗಿ ಪಡೆಯಲು ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸಾರ್ವಜನಿಕರು ಮನೆಯಲ್ಲೇ ಕುಳಿತು ಅಥವಾ ತಮ್ಮ ಹತ್ತಿರದ ಸೇವಾ ಕೇಂದ್ರಗಳ ಮೂಲಕ ಆಸ್ತಿಯ ನಮೂನೆ 11ಎ ಮತ್ತು 11ಬಿ ಗಾಗಿ ಅರ್ಜಿ ಸಲ್ಲಿಸಲು ಈ ಮೂಲಕ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಈ ನೂತನ ವ್ಯವಸ್ಥೆಯ ಅಡಿಯಲ್ಲಿ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ(e-Swathu Online Application) ನೀಡಲಾಗಿದ್ದು, ನಾಗರಿಕರು ಅಧಿಕೃತ ವೆಬ್‌ಸೈಟ್ https://eswathu.karnataka.gov.in ಗೆ ಭೇಟಿ ನೀಡುವ ಮೂಲಕ ಸ್ವತಃ ಅರ್ಜಿ ಸಲ್ಲಿಸಬಹುದಾಗಿದೆ. ಆನ್‌ಲೈನ್ ವ್ಯವಸ್ಥೆಯು ಕೇವಲ ಸಮಯ ಉಳಿತಾಯ ಮಾಡುವುದಲ್ಲದೆ, ಮಧ್ಯವರ್ತಿಗಳ ಹಾವಳಿಗೂ ಬ್ರೇಕ್ ಹಾಕಲಿದೆ. ಡಿಜಿಟಲ್ ತಂತ್ರಜ್ಞಾನದ ಬಳಕೆಯಿಂದ ಆಸ್ತಿ ಮಾಲೀಕರು ತಮ್ಮ ಹಕ್ಕುಗಳನ್ನು ಹೆಚ್ಚು ಸುರಕ್ಷಿತವಾಗಿ ಮತ್ತು ಅಧಿಕೃತವಾಗಿ ನಿರ್ವಹಿಸಲು ಇದು ಸಹಕಾರಿಯಾಗಲಿದೆ.

ಇದನ್ನೂ ಓದಿ: RTE ಕರ್ನಾಟಕ ಪ್ರವೇಶಾತಿ 2026-27: ಖಾಸಗಿ ಶಾಲೆಯಲ್ಲಿ ಉಚಿತ ಸೀಟ್ ಪಡೆಯಲು ಅರ್ಜಿ ಆಹ್ವಾನ!

ತಂತ್ರಜ್ಞಾನದ ಅರಿವಿಲ್ಲದ ಅಥವಾ ಆನ್‌ಲೈನ್ ವ್ಯವಸ್ಥೆ ಲಭ್ಯವಿಲ್ಲದ ನಾಗರಿಕರಿಗಾಗಿ ಪರ್ಯಾಯ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. ರಾಜ್ಯದಾದ್ಯಂತ ಇರುವ ಗ್ರಾಮ ಪಂಚಾಯಿತಿ(Grama Panchayat) ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್, ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಕೇಂದ್ರಗಳಲ್ಲಿ ನಿಗದಿತ ಶುಲ್ಕ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ನೂತನ ಕ್ರಮವು ಆಡಳಿತ ವ್ಯವಸ್ಥೆಯನ್ನು ಜನರ ಮನೆಬಾಗಿಲಿಗೇ ತರುವ ನಿಟ್ಟಿನಲ್ಲಿ ಸರ್ಕಾರದ ಮಹತ್ತರ ಹೆಜ್ಜೆಯಾಗಿದೆ.

e-Swathu 2.0 Details-ಪ್ರಮುಖ ಮಾಹಿತಿ ಮತ್ತು ದರ ವಿವರಗಳು:

ಸೇವಾ ವಿವರಗಳುದರಗಳು
ಅರ್ಜಿ ಸಲ್ಲಿಸುವ ಸ್ಥಳಗಳುಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್
ಗ್ರಾಮ ಒನ್ ಅರ್ಜಿ ಶುಲ್ಕ₹45/-
ಬೆಂಗಳೂರು ಒನ್ ಅರ್ಜಿ ಶುಲ್ಕ₹45/-
ಸ್ಕ್ಯಾನಿಂಗ್ ಮತ್ತು ಪ್ರಿಂಟಿಂಗ್ಪ್ರತಿ ಪುಟಕ್ಕೆ ₹5/-
ಇ-ಸ್ವತ್ತು ಸಹಾಯವಾಣಿ ಸಂಖ್ಯೆ9483476000

ಇದನ್ನೂ ಓದಿ: Agriculturist Quota-ಕೃಷಿ ಕೋಟಾ ವಿದ್ಯಾರ್ಥಿಗಳ ಗಮನಕ್ಕೆ: ಕೃಷಿ ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ!

e-Swathu 2.0 Online Application-ಮೊಬೈಲ್ ನಲ್ಲೇ ಅರ್ಜಿ ಸಲ್ಲಿಸುವುದು ಹೇಗೆ?

ನಾಗರಿಕರು ಈ ಕೆಳಗಿನ ವಿಧಾನವನ್ನು ಅನುಸರಿಸಿ ತಮ್ಮ ಮೊಬೈಲ್ ಮೂಲಕವೇ ಇ-ಸ್ವತ್ತು ದಾಖಲೆಯನ್ನು ಪಡೆಯಲು ಅರ್ಜಿ ಸಲ್ಲಿಸಬಹುದು.

Step-1: ನಾಗರಿಕರು ಮೊದಲಿಗೆ ಈ ಲಿಂಕ್ Apply Now ಮೇಲೆ ಕ್ಲಿಕ್ ಮಾಡಿ ಅಧಿಕೃತ ತಂತ್ರಾಂಶವನ್ನು ಪ್ರವೇಶ ಮಾಡಿ.

ಇದನ್ನೂ ಓದಿ: Vasati Shale Admission-ವಸತಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪ್ರವೇಶಾತಿ ಆರಂಭ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!

e-Swathu 2.0 website

ಇದನ್ನೂ ಓದಿ: Scholarship Application-ಪದವಿಪೂರ್ವ ತರಗತಿ ವಿದ್ಯಾರ್ಥಿಗಳಿಗೆ ₹60,000 ವಿದ್ಯಾರ್ಥಿ ವೇತನ ಪಡೆಯಲು ಇಲ್ಲಿದೆ ಅವಕಾಶ!

Step-2: ಇದಾದ ನಂತರ ಈ ಪೇಜ್ ನಲ್ಲಿ ಮುಖಪುಟದಲ್ಲಿ ಎಡಬದಿಯಲ್ಲಿ ಕಾಣಿಸುವ ನಾಗರಿಕ ಲಾಗಿನ್ ಬಟನ್ ಮೇಲೆ ಕ್ಲಿಕ್ ಮಾಡಿ Citizen ಆಯ್ಕೆಯನ್ನು ಇರಿಸಿಕೊಂಡು ನಿಮ್ಮ ಹತ್ತು ಅಂಕಿಯ ಮೊಬೈಲ್ ನಂಬರ್ ಮತ್ತು ಕ್ಯಾಪ್ಚ್ ಕೋಡ್ ಅನ್ನು ನಮೂದಿಸಿ Send OTP ಬಟನ್ ಮೇಲೆ ಕ್ಲಿಕ್ ಮಾಡಿ.

Step-3: ಬಳಿಕ OTP ಅನ್ನು ನಮೂದಿಸಿ ಲಾಗಿನ್ ಅಗಬೇಕು ಲಾಗಿನ್ ಅದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Fertilizer Shop-ನಾಳೆ ದೇಶದಾದ್ಯಂತ ರಸಗೊಬ್ಬರ ಅಂಗಡಿಗಳ ಬಂದ್! ಇಲ್ಲಿದೆ ಸಂಪೂರ್ಣ ಮಾಹಿತಿ!

ಹೆಚ್ಚಿನ ಮಾಹಿತಿಗಾಗಿ:

ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ಯಾವುದೇ ಗೊಂದಲ ಅಥವಾ ತಾಂತ್ರಿಕ ನೆರವಿಗಾಗಿ ಅಧಿಕೃತ ಇ-ಸ್ವತ್ತು ಸಹಾಯವಾಣಿ ಸಂಖ್ಯೆ 9483476000 ಗೆ ಕರೆ ಮಾಡಬಹುದಾಗಿದೆ. ನಿಮ್ಮ ಆಸ್ತಿಯ ಭದ್ರತೆಗಾಗಿ ಮತ್ತು ಕಾನೂನಾತ್ಮಕ ಹಕ್ಕುಗಳಿಗಾಗಿ ಇಂದೇ ಈ ಸುಲಭ ವ್ಯವಸ್ಥೆಯ ಲಾಭ ಪಡೆಯಿರಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: