Free Bus Pass-ವಿದ್ಯಾರ್ಥಿ ಸಮೂಹಕ್ಕೆ ‘ಸಿಹಿ ಸುದ್ದಿ’: ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಭಾಗ್ಯ!

June 6, 2026 | Siddesh
Free Bus Pass-ವಿದ್ಯಾರ್ಥಿ ಸಮೂಹಕ್ಕೆ ‘ಸಿಹಿ ಸುದ್ದಿ’: ರಾಜ್ಯದ ಎಲ್ಲಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಭಾಗ್ಯ!
Share Now:

ರಾಜ್ಯದ ಲಕ್ಷಾಂತರ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾರಿಗೆ ವೆಚ್ಚದ ಚಿಂತೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಭರ್ಜರಿ ಕೊಡುಗೆಯೊಂದನ್ನು ನೀಡಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನಡೆದ ಮೊದಲ ಸಚಿವ ಸಂಪುಟ ಸಭೆಯಲ್ಲಿ ಡಿ.ಕೆ. ಶಿವಕುಮಾರ್(CM Of Karnataka) ಅವರು ಘೋಷಿಸಿದ್ದ "ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್" ಯೋಜನೆಗೆ ಈಗ ಅಧಿಕೃತ ಚಾಲನೆ ಸಿಕ್ಕಿದ್ದು, ಈ ಕುರಿತು ಸಾರಿಗೆ ಇಲಾಖೆಯು ಮಹತ್ವದ ಸರ್ಕಾರಿ ಆದೇಶವನ್ನು ಹೊರಡಿಸಿದೆ.

ಈ ಯೋಜನೆಗೆ ಸರ್ಕಾರ ತಾತ್ವಿಕ ಅನುಮೋದನೆ ನೀಡಿರುವುದರಿಂದ, ರಾಜ್ಯದ ನಾಲ್ಕೂ ಪ್ರಮುಖ ಸರ್ಕಾರಿ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC ಮತ್ತು KKRTC ಬಸ್‌ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಲು ಅವಕಾಶ ಸಿಗಲಿದೆ. ಹಳ್ಳಿಗಳಿಂದ ಪಟ್ಟಣಗಳ ಶಾಲಾ-ಕಾಲೇಜುಗಳಿಗೆ ದಿನನಿತ್ಯ ಅಲೆಯುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಸುಲಭವಾಗಿ ಮುಂದುವರಿಸಲು ಇದು ಅತ್ಯಂತ ಸಹಕಾರಿಯಾಗಲಿದೆ. ಕೇವಲ ರಿಯಾಯಿತಿ ದರದಲ್ಲಿದ್ದ ಪಾಸ್ ವ್ಯವಸ್ಥೆಯನ್ನು ಈಗ ಸಂಪೂರ್ಣ ಉಚಿತವಾಗಿ ವಿಸ್ತರಿಸಿರುವುದು ವಿದ್ಯಾರ್ಥಿ ಸಮೂಹದಲ್ಲಿ ಸಕಾರಾತ್ಮಕ ಅಲೆಯನ್ನಿಬ್ಬಿಸಿದೆ.

ಇದನ್ನೂ ಓದಿ: Pension Scheme-14 ಲಕ್ಷ ಜನರ ಮಾಸಿಕ ಪಿಂಚಣಿ ಸ್ಥಗಿತ! ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ!

ಉಚಿತ ಬಸ್ ಪಾಸ್ ಸೌಲಭ್ಯವನ್ನು ವಿದ್ಯಾರ್ಥಿಗಳು(Student Bus Pass Scheme) ಹೇಗೆ ಪಡೆದುಕೊಳ್ಳಬೇಕು ಮತ್ತು ಇದಕ್ಕೆ ಯಾವೆಲ್ಲಾ ದಾಖಲೆಗಳು ಅಗತ್ಯ ಎಂಬ ಕುರಿತು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಪುಷ್ಪ ವಿ.ಎಸ್. ಅವರು ಮಾಹಿತಿ ನೀಡಿದ್ದಾರೆ. ಈ ಯೋಜನೆಗೆ ಸಂಬಂಧಿಸಿದಂತೆ ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ಸಂಪೂರ್ಣ ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

Karnataka Cabinet Meeting-ಸಚಿವ ಸಂಪುಟದ ಮಹತ್ವದ ತೀರ್ಮಾನ:

ರಾಜ್ಯದ ಮೂಲೆ ಮೂಲೆಗಳಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ಈ ಹಿಂದೆ ಇದ್ದ ರಿಯಾಯಿತಿ ದರದ ಬಸ್ ಪಾಸ್ ಸೌಲಭ್ಯವನ್ನು ಇದೀಗ ಸಂಪೂರ್ಣ ‘ಉಚಿತ’ವಾಗಿ ವಿಸ್ತರಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಈ ತಾತ್ವಿಕ ಅನುಮೋದನೆಗೆ ಪೂರಕವಾಗಿ ಸರ್ಕಾರ ಸಾರಿಗೆ ಇಲಾಖೆಯ ಮೂಲಕ ಅಧಿಕೃತ ಆದೇಶ ಪ್ರಕಟಿಸಿದೆ.

ಇದನ್ನೂ ಓದಿ: Beauty Parlour Training-ಮಹಿಳೆಯರಿಗೆ 35 ದಿನದ ಉಚಿತ ಬ್ಯೂಟಿ ಪಾರ್ಲರ್ ತರಬೇತಿಗೆ ಅರ್ಜಿ ಆಹ್ವಾನ!

Student Bus Pass-ಉಚಿತ ಪಾಸ್ ಅನ್ವಯವಾಗುವ ಸಾರಿಗೆ ಸಂಸ್ಥೆಗಳು:

ಸರ್ಕಾರದ ಈ ಹೊಸ ಆದೇಶದನ್ವಯ, ರಾಜ್ಯದ ಪ್ರಮುಖ ನಾಲ್ಕು ಸರ್ಕಾರಿ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ.

  • KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ
  • BMTC: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
  • NWKRTC: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
  • KKRTC: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ

ಇದನ್ನೂ ಓದಿ: Aadhaar History-ನಿಮ್ಮ ಗಮನಕ್ಕೆ ಬಾರದೆ ನಿಮ್ಮ ಆಧಾರ್ ಎಲ್ಲೆಲ್ಲಿ ಬಳಕೆಯಾಗಿದೆ? 2 ನಿಮಿಷದಲ್ಲಿ ಹೀಗೆ ಪತ್ತೆ ಹಚ್ಚಿ!

Student Bus Pass Guidelines-ಶೀಘ್ರದಲ್ಲೇ ಮಾರ್ಗಸೂಚಿ ಪ್ರಕಟ:

"ಈ ಮಹತ್ವಾಕಾಂಕ್ಷಿ ಯೋಜನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹೇಗೆ ಅರ್ಜಿ ಸಲ್ಲಿಸಬೇಕು, ಪಾಸ್ ವಿತರಣೆ ಪ್ರಕ್ರಿಯೆ ಹೇಗೆ ನಡೆಯಲಿದೆ ಎಂಬ ಕುರಿತು ವಿವರವಾದ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಪ್ರತ್ಯೇಕವಾಗಿ ಹೊರಡಿಸಲಾಗುವುದು," ಎಂದು ಸಾರಿಗೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ ಪುಷ್ಪ ವಿ.ಎಸ್. ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Free Bus Pass For Students In Karnataka-ವಿದ್ಯಾರ್ಥಿ ವಲಯದಲ್ಲಿ ಹರ್ಷ:

ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯಾದ್ಯಂತ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಈ ಯೋಜನೆ ಸಂಜೀವಿನಿಯಾಗಲಿದ್ದು, ಶಿಕ್ಷಣವನ್ನು ಮುಂದುವರಿಸಲು ದೊಡ್ಡ ಆಸರೆಯಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: