GKVK Bakery Training-ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

July 17, 2026 | Siddesh
GKVK Bakery Training-ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ಬೆಂಗಳೂರು: ಇಂದಿನ ಆಧುನಿಕ ದಿನಗಳಲ್ಲಿ ಬೇಕರಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ನಿರಂತರವಾದ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಯುವ ಪೀಳಿಗೆ ಹಾಗೂ ಆಸಕ್ತರಿಗೆ ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಲು ಉತ್ತಮ ಅವಕಾಶವೊಂದನ್ನು ಕಲ್ಪಿಸಿಕೊಡಲಾಗಿದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡುವ "ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ"ಯು ಆಸಕ್ತ ಅಭ್ಯರ್ಥಿಗಳಿಂದ 14 ವಾರಗಳ ಅವಧಿಯ "ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್" ಪ್ರವೇಶಾತಿಗಾಗಿ ಅಧಿಕೃತವಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

ಈ ತರಬೇತಿ ಕಾರ್ಯಕ್ರಮದ ವಿಶೇಷತೆಯೆಂದರೆ, ಇದಕ್ಕೆ ಯಾವುದೇ ಕಠಿಣ ಶೈಕ್ಷಣಿಕ ಅರ್ಹತೆಯ ನಿರ್ಬಂಧಗಳಿರುವುದಿಲ್ಲ. ಎಸ್.ಎಸ್.ಎಲ್.ಸಿ (10ನೇ ತರಗತಿ) ಉತ್ತೀರ್ಣರಾದವರು ಮಾತ್ರವಲ್ಲದೆ, ಒಂದು ವೇಳೆ ಅನುತ್ತೀರ್ಣರಾಗಿದ್ದರೂ ಸಹ ಈ ಕೋರ್ಸ್‌ಗೆ ಅರ್ಜಿಯನ್ನು ಸಲ್ಲಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ತರಬೇತಿಯನ್ನು ಪಡೆಯಲು ಇಚ್ಛಿಸುವ ಸಾಮಾನ್ಯ ಹಾಗೂ ಗ್ರಾಮೀಣ ಭಾಗದ ಆಸಕ್ತರಿಗೂ ಅನುಕೂಲವಾಗುವಂತೆ ಕೇವಲ 10 ರೂಪಾಯಿಗಳ ಅತ್ಯಲ್ಪ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಇದು ಸಮಾಜದ ಎಲ್ಲಾ ವರ್ಗದ ಜನರಿಗೂ ತಂತ್ರಜ್ಞಾನ ಆಧಾರಿತ ಶಿಕ್ಷಣ ತಲುಪಲು ಸಹಕಾರಿಯಾಗಿದೆ.

ಇದನ್ನೂ ಓದಿ: Gruhajoythi Scheme-ಆಧಾರ್ ಅಪ್ಡೇಟ್ ಮಾಡದಿದ್ದರೆ ಗೃಹಜ್ಯೋತಿ ಕ್ಯಾನ್ಸಲ್ ಆಗುತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ!

ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಬೆಂಗಳೂರಿನ ಜಿಕೆವಿಕೆ (GKVK) ಆವರಣದಲ್ಲಿರುವ ಸಂಸ್ಥೆಯ ಕಚೇರಿಗೆ ನೇರವಾಗಿ ಭೇಟಿ ನೀಡಿ ನಿಗದಿತ ಅರ್ಜಿ ಫಾರಂಗಳನ್ನು ಪಡೆದುಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ನಿಗದಿಪಡಿಸಲಾಗಿದ್ದು, ಆಸಕ್ತರು ಎಲ್ಲಾ ಅಗತ್ಯ ವಿವರಗಳೊಂದಿಗೆ ನಿಗದಿತ ಸಮಯದೊಳಗೆ ಅರ್ಜಿಯನ್ನು ಸಲ್ಲಿಸುವಂತಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

GKVK Bakery Training Details-ಕೋರ್ಸ್ ಮತ್ತು ಸಂಸ್ಥೆಯ ವಿವರ:

ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಜಿಕೆವಿಕೆ ಆವರಣದಲ್ಲಿರುವ "ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ" ವತಿಯಿಂದ ಒಟ್ಟು 14 ವಾರಗಳ ಅವಧಿಯ "ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್" ಅನ್ನು ಆಯೋಜಿಸಲಾಗಿದೆ.

ಇದನ್ನೂ ಓದಿ: Cow Mat Subsidy-ಸಬ್ಸಿಡಿಯಲ್ಲಿ ರಬ್ಬರ್ ಮ್ಯಾಟ್ ಹಾಗೂ ಸೈಲೇಜ್ ಬ್ಯಾಗ್ ಪಡೆಯಲು ಅರ್ಜಿ ಆಹ್ವಾನ!

Application fee-ಶೈಕ್ಷಣಿಕ ಅರ್ಹತೆ ಮತ್ತು ಶುಲ್ಕ:

ಈ ತರಬೇತಿ ಕೋರ್ಸ್‌ಗೆ ಎಸ್.ಎಸ್.ಎಲ್.ಸಿ (10ನೇ ತರಗತಿ) ಉತ್ತೀರ್ಣರಾದವರು ಅಥವಾ ಅನುತ್ತೀರ್ಣರಾದವರೂ ಸಹ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಶುಲ್ಕ ಕೇವಲ ರೂ. 10/- (ಹತ್ತು ರೂಪಾಯಿಗಳು ಮಾತ್ರ) ಆಗಿರುತ್ತದೆ.

Training Center Address-ಅರ್ಜಿ ಪಡೆಯುವ ವಿಳಾಸ:

ಆಸಕ್ತ ಅಭ್ಯರ್ಥಿಗಳು "ಸಂಯೋಜಕರು ಮತ್ತು ಮುಖ್ಯಸ್ಥರು, ಬೇಕಿಂಗ್ ತಂತ್ರಜ್ಞಾನ ಮತ್ತು ಮೌಲ್ಯವರ್ಧನಾ ಸಂಸ್ಥೆ, ಜಿಕೆವಿಕೆ, ಬೆಂಗಳೂರು-560 065" ಇವರಿಂದ ನಿಗದಿತ ಅರ್ಜಿ ಫಾರಂಗಳನ್ನು ಖುದ್ದಾಗಿ ಪಡೆದುಕೊಳ್ಳಬಹುದು.

Last Date For Application-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:

ಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು 25-07-2026ರ ಅಪರಾಹ್ನ 4.00 ಗಂಟೆಯೊಳಗೆ ಕೊನೆಯ ಸಮಯಾವಕಾಶ ಇರುತ್ತದೆ.

ಇದನ್ನೂ ಓದಿ: Engineering Scholarship-ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ 50,000 ವಿದ್ಯಾರ್ಥಿವೇತನ! ಇಲ್ಲಿದೆ ಸಂಪೂರ್ಣ ಮಾಹಿತಿ!

Contact Details-ಸಂಪರ್ಕ ಮಾಹಿತಿ:

ಹೆಚ್ಚಿನ ವಿವರಗಳಿಗಾಗಿ ಕಚೇರಿಗೆ ಮುದ್ದಾಗಿ ಭೇಟಿ ನೀಡಬಹುದು ಅಥವಾ ದೂರವಾಣಿ ಸಂಖ್ಯೆ: 080-29533370 ಹಾಗೂ ಮೊಬೈಲ್ ಸಂಖ್ಯೆಗಳು: 9731164357 / 9740618692 ಅನ್ನು ಸಂಪರ್ಕಿಸಬಹುದಾಗಿದೆ.

PMFME Scheme-50% ಸಬ್ಸಿಡಿಯಲ್ಲಿ ಬೇಕರಿಯನ್ನು ಆರಂಭಿಸಲು ಅವಕಾಶ:

ತರಬೇತಿಯನ್ನು ಪಡೆದ ಬಳಿಕ ತಮ್ಮದೇ ಆದ ಸ್ವಂತ ಬೇಕರಿ ಉತ್ಪನ್ನವನ್ನು ತಯಾರಿಸುವ ಘಟಕವನ್ನು ಆರಂಭಿಸುವ ಇಚ್ಚೆಯನ್ನು ಹೊಂದಿರುವ ಅಭ್ಯರ್ಥಿಗಳು ಕೇಂದ್ರ ಸರ್ಕಾರದ PMFME ಯೋಜನೆ ಅಡಿಯಲ್ಲಿ ಶೇ 50% ಸಹಾಯಧನದಲ್ಲಿ ಬೇಕರಿ ಉತ್ಪನ್ನವನ್ನು ತಯಾರಿಸುವ ಘಟಕವನ್ನು ಆರಂಭಿಸಲು ಅವಕಾಶವಿದ್ದು ಅರ್ಜಿ ಸಲ್ಲಿಕೆ ಮತ್ತು ಈ ಯೋಜನೆಯ ಬಗ್ಗೆ ಇನ್ನು ಅಧಿಕ ಮಾಹಿತಿಯನ್ನು ಪಡೆಯಲು ನಿಮ್ಮ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿ ಅಥವಾ ಈ ಯೋಜನೆಯ DRP ಅವರನ್ನು ನೇರವಾಗಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಿರಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: