Ganga Kalyana Scheme-3B ವರ್ಗದ ರೈತರಿಗೆ ಗುಡ್ ನ್ಯೂಸ್! ಜೀವಜಲ ಯೋಜನೆಯಡಿ ಕೊಳವೆಬಾವಿ ಕೊರೆಯಲು ಸಹಾಯಧನ!

October 9, 2026 | Siddesh
Ganga Kalyana Scheme-3B ವರ್ಗದ ರೈತರಿಗೆ ಗುಡ್ ನ್ಯೂಸ್! ಜೀವಜಲ ಯೋಜನೆಯಡಿ ಕೊಳವೆಬಾವಿ ಕೊರೆಯಲು ಸಹಾಯಧನ!
Share Now:

2026-2027 ನೇ ಸಾಲಿನ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ಜೀವಜಲ ಗಂಗಾ ಕಲ್ಯಾಣ ನೀರಾವರಿ) ಯೋಜನೆಯ ಅಡಿಯಲ್ಲಿ ವೀರಶೈವ ಲಿಂಗಾಯತ ಜಾತಿ ಹಾಗೂ ಉಪಜಾರಿಗೆ ಸೇರಿದ ಸಮುದಾಯದ ಜನರ(ಪ್ರವರ್ಗ-3ಬಿ) ವರ್ಗದ ಅಭಿವೃದ್ದಿಗಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯು ರೈತರಿಗೆ ನೀರಾವರಿ ಸೌಲಭವನ್ನು ಒದಗಿಸುವ ಮೂಲಕ ಕೃಷಿ ಅಭಿವೃದ್ದಿಗೆ ಹೆಚ್ಚಿನ ಸಹಾಯವನ್ನು ನೀಡುತ್ತದೆ. ವಿಶೇಷವಾಗಿ ಮಳೆಯನ್ನೇ ಅವಲಂಬಿಸಿರುವ ರೈತರಿಗೆ ಈ ಯೋಜನೆಯು ಕೃಷಿಯ ಉತ್ಪಾದನೆಯನ್ನು ಹೆಚ್ಚಿಸುಲು ಸಹಾಯಕಾರಿಯಾಗಿದ್ದು, ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಸಹಾಯಧನವನ್ನು ಪಡೆಯಲು ಯಾರೆಲ್ಲಾ ಅರ್ಹರಿರುತ್ತಾರೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಅರ್ಜಿ ಸಲ್ಲಿಸಲು ಯಾವೆಲ್ಲಾ ಹಂತಗಳನ್ನು ಅನುಸರಿಸಬೇಕು? ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಅಂಕಣದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: B Com, BA Scholorship-ಬಿಬಿಎ,ಬಿ.ಕಾಂ,ಬಿಎ ವಿದ್ಯಾರ್ಥಿಗಳಿಗೆ 5 ಲಕ್ಷದವರೆಗೆ ವಿದ್ಯಾರ್ಥಿವೇತನ! ಇಂದೇ ಅರ್ಜಿ ಸಲ್ಲಿಸಿ!

Subsidy Amount-ಈ ಯೋಜನೆಯ ಅಡಿಯಲ್ಲಿ ಎಷ್ಟು ಸಹಾಯಧನವನ್ನು ಪಡೆಯಬಹುದು?

ಗಂಗಾ ಕಲ್ಯಾಣ ನೀರಾವರಿ ಯೋಜನೆಯ ಅಡಿಯಲ್ಲಿ ಸರ್ಕಾರದ ವತಿಯಿಂದ ಅರ್ಹ ರೈತರಿಗೆ ಈ ಕೆಳಕಂಡ ಸಹಾಯಧನವನ್ನು ನೀಡಲಾಗುತ್ತದೆ:

ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಂತರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ವೈಯಕ್ತಿಕ ಕೊಳವೆ ಬಾವಿ ಯೋಜನೆಯ ಘಟಕದ ವೆಚ್ಚ ರೂ. 4.75 ಲಕ್ಷಗಳಲ್ಲಿ ರೂ. 4.25 ಲಕ್ಷಗಳ ಸಹಾಯಧನ ಇದರಲ್ಲಿ ರೂ.75,000 ವಿದ್ಯುದ್ದೀಕರಣಕ್ಕೆ ಎಸ್ಕಾಂಗಳಿಗೆ ಪಾವತಿ ಮಾಡಲಾಗುವುದು. ರೂ.50,000/- ಗಳ ಸಾಲವನ್ನು ಶೇ.4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು.

ಉಳಿದ ಜಿಲ್ಲೆಗಳಿಗೆ ಘಟಕ ವೆಚ್ಚ ರೂ.3.75 ಲಕ್ಷ ಇದರಲ್ಲಿ ಸಹಾಯಧನ ರೂ.3.25 ಲಕ್ಷ ರೂ.50,000/- ಗಳ ಸಾಲವನ್ನು ಶೇ.4 ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. ಸಹಾಯಧನದ ಮೊತ್ತದಲ್ಲಿ ಪ್ರತಿ ಕೊಳವೆ ಬಾವಿಗೆ ರೂ.75,000/-ಗಳನ್ನು ವಿದ್ಯುದ್ದೀಕರಣಕ್ಕೆ ಎಸ್ಕಾಂಗಳಿಗೆ ಪಾವತಿ ಮಾಡಲಾಗುವುದು.

Last Date To APply-ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಅಕ್ಟೋಬರ್ 2026

ಇದನ್ನೂ ಓದಿ: Kayaka Kiran Scheme-ಕಾಯಕಕಿರಣ ಯೋಜನೆಯಡಿ ₹1 ಲಕ್ಷದವರೆಗೆ ನೇರ ಸಾಲ! ಶೇ 50% ಸಹಾಯಧನ!

Eligibility Critiria-ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರಿರುತ್ತಾರೆ?

ಅರ್ಜಿದಾರ ಅಭ್ಯರ್ಥಿಯು ವೀರಶೈವ ಲಿಂಗಾಯತ ಸಮುದಾಯದ ವರ್ಗಕ್ಕೆ ಸೇರಿರಬೇಕು.

ಅರ್ಜಿದಾರರು ಸಣ್ಣ ಹಾಗೂ ಅತಿ ಸಣ್ಣ ರೈತರಾಗಿರಬೇಕು.

ಅರ್ಜಿದಾರರ ಕುಟುಂಬರ ವಾರ್ಷಿಕ ಆದಾಯದ ಮಿತಿಯು ರೂ.98,000/- ದ ಒಳಗಿರಬೇಕು.

ಈ ಯೋಜನೆಯಲ್ಲಿ ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 01 ಎಕರೆ ಜಮೀನು ಹೊಂದಿರಬೇಕು. ಇತರೆ ಜಿಲ್ಲೆಗಳಲ್ಲಿ ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಕನಿಷ್ಟ 02 ಎಕರೆ ಜಮೀನು ಇರಬೇಕು.

ತೆರೆದ ಬಾವಿ: ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ತೆರೆದ ಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: Udyogini Yojana-ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ 1.5 ಲಕ್ಷ ಸಹಾಯಧನ!

ganga kalyana scheme

ಇದನ್ನೂ ಓದಿ: Muskaan Scholarship-ಪಿಯುಸಿ ವಿದ್ಯಾರ್ಥಿಗಳಿಗೆ 12,000 ವಿದ್ಯಾರ್ಥಿವೇತನ!ಅರ್ಜಿ ಸಲ್ಲಿಸಲು ಲಿಂಕ್ ಬಿಡುಗಡೆ!

Documents Required-ಅರ್ಜಿ ಸಲ್ಲಿಸಲು ಅಗತ್ಯ ದಾಖಲಾತಿಗಳಾವುವು?

  • ಆಧಾರ್ ಕಾರ್ಡ್ ಪ್ರತಿ
  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ
  • ಇತ್ತೀಚಿನ ಆರ್‌ಟಿಸಿ ಪ್ರತಿ
  • ಸಣ್ಣ/ ಅತಿ ಸಣ್ಣ ಹಿಡುವಳಿದಾರ ಪ್ರಮಾಣಪತ್ರ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಭೂ-ಕಂದಾಯ ಪಾವತಿಸಿದ ರಸೀದಿ
  • ಸ್ವಯಂ ಘೋಷಣೆ ಪತ್ರ
  • ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ

ಇದನ್ನೂ ಓದಿ: New Rules-ನಿಮ್ಮ ಗ್ಯಾಸ್ ಸಬ್ಸಿಡಿ ಮತ್ತು ಬ್ಯಾಂಕ್ ಎಫ್‌ಡಿ ಸುರಕ್ಷಿತವಾಗಿರಬೇಕೇ? ಈ ನಿಯಮವನ್ನು ಪಾಲನೆ ಮಾಡಿ!

How To Apply-ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ:

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮ ನಿಯಮಿತದ ವತಿಯಿಂದ ಕಾಯಕಕಿರಣ ( ಸ್ವಯಂ ಉದ್ಯೋಗ ನೇರ ಸಾಲ) ಯೋಜನೆಯ ಅಡಿಯಲ್ಲಿ ಸಹಾಯಧನವನ್ನು ಪಡೆಯುವ ವೀರಶೈವ ಲಿಂಗಾಯುತ ಸಮುದಾಯದ ಅಭ್ಯರ್ಥಿಗಳು ಸೇವಾಸಿಂಧು ಪೋರ್ಟಲ್ ನಲ್ಲಿ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಅಥವಾ ಅಧಿಕೃತ ವೆಬ್ಸೈಟ್ ಗೆ ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು.

ಅಥವಾ ಗ್ರಾಮ ಒನ್/ಬೆಂಗಳೂರು ಒನ್/ ಕರ್ನಾಟಕ ಒನ್ ಗಳ ಮೂಲಕ ಅಗತ್ಯ ದಾಖಲಾತಿಗಳೊಂದಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಇದನ್ನೂ ಓದಿ: MBBS Scholorship-ಕಾನ್ಸೆಂಟ್ರಿಕ್ಸ್ ವಿದ್ಯಾರ್ಥಿವೇತನದ ಅಡಿಯಲ್ಲಿ MBBS ವಿದ್ಯಾರ್ಥಿನಿಯರಿಗೆ 65,000 ವಿದ್ಯಾರ್ಥಿವೇತನ!

More Information-ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: