Bara Parihara-2026: ಬರ ಪರಿಹಾರ ಡಿಸೆಂಬರ್ ಅಂತ್ಯದೊಳಗೆ ರೈತರ ಖಾತೆಗೆ ₹5000!

November 21, 2026 | Siddesh
Bara Parihara-2026: ಬರ ಪರಿಹಾರ ಡಿಸೆಂಬರ್ ಅಂತ್ಯದೊಳಗೆ ರೈತರ ಖಾತೆಗೆ ₹5000!
Share Now:

ರಾಜ್ಯದಲ್ಲಿ ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದಾಗಿ ಬೆಳೆ ನಷ್ಟ(Bele Hani) ಅನುಭವಿಸಿರುವ ರೈತರಿಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಮಹತ್ವದ ಸುದ್ದಿ ಹೊರಬಿದ್ದಿದೆ. ಬರದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ತಲಾ ₹5,000 ಬರ ಪರಿಹಾರ ವಿತರಿಸಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಮೊದಲ ಕಂತಿನ ಹಣ ಕೆಲವು ಜಿಲ್ಲೆಗಳಲ್ಲಿ ಬಿಡುಗಡೆಯಾಗಿದ್ದು , ಬಾಕಿ ಇರುವ ಪರಿಹಾರದ ಮೊತ್ತವನ್ನು ಕೂಡ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಕುರಿತು ಸರ್ಕಾರ ಮಹತ್ವದ ಮಾಹಿತಿ ನೀಡಿದೆ.

ನವೆಂಬರ್ 20ರಂದು ಕಂದಾಯ ಇಲಾಖೆಯ(Karnataka Drought Relief) ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿರುವ ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು, ಅರ್ಹ ರೈತರಿಗೆ ಎರಡು ಕಂತುಗಳ ಒಟ್ಟು ₹5,000 ಬರ ಪರಿಹಾರದ ಹಣವನ್ನು ಡಿಸೆಂಬರ್ 1ರೊಳಗೆ ಜಮಾ ಮಾಡಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Dairy Farming-ಉಚಿತ ಕುರಿ-ಆಡು ಸಾಕಾಣಿಕೆ ಜೊತೆ ಹೈನುಗಾರಿಕೆಗೆ ತರಬೇತಿ!ಇಂದೇ ಅರ್ಜಿ ಸಲ್ಲಿಸಿ!

ಹೀಗಾಗಿ ಬರ ಪರಿಹಾರದ ಹಣಕ್ಕಾಗಿ ಕಾಯುತ್ತಿರುವ ರೈತರು ತಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದೆಯೇ? ಈಗಾಗಲೇ ಮೊದಲ ಕಂತಿನ ಹಣ ಜಮೆಯಾಗಿದೆಯೇ? ಎರಡನೇ ಕಂತಿನ ಹಣ(Bara Parihara Release Date) ಯಾವಾಗ ಬರಲಿದೆ? ಎನ್ನುವ ಕುರಿತು ಲಭ್ಯವಿರುವ ಮಾಹಿತಿಯನ್ನು ಹಾಗೂ ಈ ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದ ಪ್ರಸ್ತುತ ವಿದ್ಯಮಾನಗಳು, ರಾಜ್ಯ ಸರ್ಕಾರದ ಮಾರ್ಗಸೂಚಿ ಹಾಗೂ ಪರಿಹಾರದ ಹಣದ ಸ್ಥಿತಿಯನ್ನು ಪರಿಶೀಲಿಸುವ ವಿಧಾನದ ಕುರಿತು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

Bara parihara Release Meeting Highlights-ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಪ್ರಸ್ತುತ ವಿದ್ಯಮಾನಗಳು:

ನವೆಂಬರ್ 20ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ಸಭೆಯಲ್ಲಿ ರಾಜ್ಯದ ಬರ ಪರಿಸ್ಥಿತಿ, ಬೆಳೆ ನಷ್ಟ, ರೈತರಿಗೆ ಪರಿಹಾರ ವಿತರಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕುರಿತು ಚರ್ಚಿಸಲಾಯಿತು.

ಇದನ್ನೂ ಓದಿ: Beat Forester Job-ಅರಣ್ಯ ಇಲಾಖೆಯಲ್ಲಿ ಬಂಪರ್ ಉದ್ಯೋಗಾವಕಾಶ! 355 ಅರಣ್ಯ ರಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ!

ಸಭೆಯ ನಂತರ ನೀಡಿದ ಪ್ರಮುಖ ಮಾಹಿತಿಗಳು ಹೀಗಿವೆ:

  • ರಾಜ್ಯದಾದ್ಯಂತ ಸುಮಾರು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
  • ಬರದಿಂದಾಗಿ ರಾಜ್ಯಕ್ಕೆ ಸುಮಾರು ₹62,481.88 ಕೋಟಿ ಆರ್ಥಿಕ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
  • ಕೇಂದ್ರ ಸರ್ಕಾರದಿಂದ ಬರ ಪರಿಹಾರಕ್ಕಾಗಿ ₹22,400.58 ಕೋಟಿ ನೆರವು ಕೋರಲಾಗಿದೆ.
  • ಕೇಂದ್ರದಿಂದ ನೆರವು ಬಾರದಿದ್ದರೂ ರಾಜ್ಯ ಸರ್ಕಾರ ಅರ್ಹ ರೈತರಿಗೆ ತಲಾ ₹5,000 ಪರಿಹಾರ ನೀಡಲು ನಿರ್ಧರಿಸಿದೆ.
  • ಎರಡು ಕಂತುಗಳ ಒಟ್ಟು ₹5,000 ಹಣವನ್ನು ಡಿಸೆಂಬರ್ 1ರೊಳಗೆ ಅರ್ಹ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುವುದಾಗಿ ತಿಳಿಸಲಾಗಿದೆ.
    ಈ ಹಿಂದೆ ₹2,500 ಮೊದಲ ಕಂತಿನ ಹಣ ಬಿಡುಗಡೆ ಮಾಡಲಾಗಿದ್ದು, ಹೆಚ್ಚುವರಿಯಾಗಿ ₹2,500 ನೀಡುವ ನಿರ್ಧಾರವನ್ನು ಸರ್ಕಾರ ಪ್ರಕಟಿಸಿತ್ತು. ಇದೀಗ ಎರಡೂ ಕಂತುಗಳ ಹಣವನ್ನು ನಿಗದಿತ ಗಡುವಿನೊಳಗೆ ತಲುಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: e-Swathu Document-ಕೃಷಿ ಜಮೀನಿನ ಕಟ್ಟಡಕ್ಕೆ ಇ-ಸ್ವತ್ತು ಪಡೆಯಲು ಈ ದಾಖಲೆ ಕಡ್ಡಾಯ!

Bara Parihara Release Guidelines-ರೈತರಿಗೆ ಬರ ಪರಿಹಾರ ವಿತರಣೆಗೆ ರಾಜ್ಯ ಸರ್ಕಾರದ ಮಾರ್ಗಸೂಚಿ:

ರಾಜ್ಯ ಸರ್ಕಾರದ ಬರ ಪರಿಹಾರ ವಿತರಣೆಯು ಪರಿಹಾರ (Parihara) ತಂತ್ರಾಂಶದ ಮೂಲಕ ನಡೆಯುತ್ತದೆ. ರೈತರ ಜಮೀನಿನ ವಿವರ, ಬೆಳೆ ಹಾನಿ ಹಾಗೂ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಹ ಫಲಾನುಭವಿಗಳಿಗೆ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ಪಾವತಿಸಲಾಗುತ್ತದೆ. ಬರ ಪರಿಹಾರ ಪಡೆಯಲು ರೈತರು ಪ್ರತೇಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.

  1. ರೈತರ ಜಮೀನು ಬರಪೀಡಿತ ಎಂದು ಘೋಷಿಸಲಾದ ತಾಲೂಕು ವ್ಯಾಪ್ತಿಯಲ್ಲಿರಬೇಕು.
  2. ಬೆಳೆ ಹಾನಿ ಮತ್ತು ಜಮೀನಿನ ವಿಸ್ತೀರ್ಣದ ವಿವರಗಳು ಸಂಬಂಧಪಟ್ಟ ಇಲಾಖೆಯ ದಾಖಲೆಗಳಲ್ಲಿ ನಮೂದಾಗಿರಬೇಕು.
  3. ರೈತರ ಪಹಣಿ (RTC) ಹಾಗೂ ಆಧಾರ್‌ನಲ್ಲಿರುವ ಹೆಸರು ಮತ್ತು ವಿವರಗಳನ್ನು ಪರಿಶೀಲಿಸಲಾಗುತ್ತದೆ.
  4. ರೈತರ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಯ ವಿವರಗಳು ಸರಿಯಾಗಿರಬೇಕು.
  5. ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಸರಿಯಾಗಿರುವುದು ಹಣ ವರ್ಗಾವಣೆಗೆ ಮುಖ್ಯವಾಗಿದೆ.
  6. ಗ್ರಾಮ ಆಡಳಿತಾಧಿಕಾರಿ ಹಾಗೂ ಸಂಬಂಧಪಟ್ಟ ಕಂದಾಯ ಅಧಿಕಾರಿಗಳ ಪರಿಶೀಲನೆ ಮತ್ತು ಅನುಮೋದನೆಯ ನಂತರ ಪಾವತಿ ಪ್ರಕ್ರಿಯೆ ನಡೆಯುತ್ತದೆ.
    ಪರಿಹಾರ ತಂತ್ರಾಂಶದಲ್ಲಿ ಭೂಮಿ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ಅನುಮೋದನೆಗಳನ್ನು ಪೂರ್ಣಗೊಳಿಸಿದ ನಂತರ ಜಿಲ್ಲಾಧಿಕಾರಿಗಳ ಕಚೇರಿಯಿಂದ ಪರಿಹಾರದ ಹಣ ಪಾವತಿ ಪ್ರಕ್ರಿಯೆ ಮಾಡಲಾಗುತ್ತದೆ.

ಇದನ್ನೂ ಓದಿ: Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!

Bara Parihara 1st Installment-ಮೊದಲ ಕಂತಿನಲ್ಲಿ ₹2,500 ಬಂದಿದ್ದರೆ ಉಳಿದ ಹಣ ಯಾವಾಗ ಬರುತ್ತದೆ?

ಈ ಹಿಂದೆ ರಾಜ್ಯ ಸರ್ಕಾರ ಮೊದಲ ಕಂತಿನಲ್ಲಿ ಅರ್ಹ ರೈತರಿಗೆ ₹2,500 ಪರಿಹಾರ ನೀಡುವ ಪ್ರಕ್ರಿಯೆ ಆರಂಭಿಸಿತ್ತು. ಕೆಲವು ರೈತರ ಖಾತೆಗೆ ₹2,500 ಜಮೆಯಾಗಿದ್ದರೆ, ಇನ್ನೂ ಕೆಲವು ರೈತರಿಗೆ ಕಡಿಮೆ ಮೊತ್ತ ಜಮೆಯಾಗಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಕುರಿತು ಸ್ಪಷ್ಟನೆ ನೀಡಿರುವ ಉಪಮುಖ್ಯಮಂತ್ರಿಗಳು, ಕೆಲವು ರೈತರಿಗೆ ಮೊದಲ ಕಂತಿನಲ್ಲಿ ₹2,000 ಅಥವಾ ₹2,500 ಬಂದಿದ್ದರೂ ಅದು ಅಂತಿಮ ಪರಿಹಾರವಲ್ಲ. ಅರ್ಹ ರೈತರಿಗೆ ಕನಿಷ್ಠ ₹5,000 ತಲುಪಿಸುವ ಉದ್ದೇಶ ಸರ್ಕಾರಕ್ಕಿದೆ ಎಂದು ಈ ಹಿಂದೆ ತಿಳಿಸಿದ್ದರು.

Bara Parihara Status Check-ಬರ ಪರಿಹಾರದ ಹಣ ಜಮಾ ವಿವರವನ್ನು ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಮೊಬೈಲ್ ಮೂಲಕವೇ ಬರ ಪರಿಹಾರದ ಹಣದ ಸ್ಥಿತಿಯನ್ನು ಪರಿಶೀಲಿಸಬಹುದು. ಇದಕ್ಕಾಗಿ ಕರ್ನಾಟಕ ಸರ್ಕಾರದ ಅಧಿಕೃತ ಪರಿಹಾರ ವೆಬ್‌ಸೈಟ್‌ಗೆ ಭೇಟಿ ನೀಡಿ ಕೆಳಗಿನ ವಿಧಾನವನ್ನು ಅನುಸರಿಸಿ ಸ್ಟೇಟಸ್ ಚೆಕ್ ಮಾಡಬಹುದು.

Step-1: ರೈತರು ಮೊದಲು ಈ Bara Parihara Status ಲಿಂಕ್ ಮೇಲೆ ಕ್ಲಿಕ್ ಮಾಡಿ ಪರಿಹಾರ ಪೋರ್ಟಲ್ ಅನ್ನು ಭೇಟಿ ಮಾಡಿ.

Step-2: ಇದಾದ ಬಳಿಕ ಈ ಪೇಜ್ ನಲ್ಲಿ ವರ್ಷ (Year) ಆಯ್ಕೆಯಲ್ಲಿ 2026-27 ಅಥವಾ ಸಂಬಂಧಪಟ್ಟ ಪರಿಹಾರ ವರ್ಷವನ್ನು ಆಯ್ಕೆಮಾಡಿ. ಹಂಗಾಮು (Season) ಆಯ್ಕೆಯಲ್ಲಿ ಮುಂಗಾರು (Kharif) ಆಯ್ಕೆ ಮಾಡಿ. ನಂತರ ವಿಪತ್ತಿನ ವಿಧ (Calamity Type) ಆಯ್ಕೆಯಲ್ಲಿ Drought ಅಂದರೆ ಬರಗಾಲ ಆಯ್ಕೆ ಮಾಡಿ.

Step-3: ತದನಂತರ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ರೈತರ ಗುರುತಿನ ಸಂಖ್ಯೆ (Farmer ID/FID) ಅಥವಾ ಸರ್ವೆ ನಂಬರ್ ಮೂಲಕ ಹುಡುಕುವ ಆಯ್ಕೆಯನ್ನು ಆರಿಸಿ.

ಇದನ್ನೂ ಓದಿ: Ration Card KYC-ರೇಶನ್ ಕಾರ್ಡದಾರರಿಗೆ ಮಹತ್ವದ ಸುದ್ದಿ! ಇ-ಕೆವೈಸಿಯಲ್ಲಿ ನೂತನ ಬದಲಾವಣೆ ಜಾರಿ!

Step-4: ಸಂಬಂಧಪಟ್ಟ ವಿವರಗಳನ್ನು ನಮೂದಿಸಿ Fetch ಅಥವಾ Get Data ಬಟನ್ ಕ್ಲಿಕ್ ಮಾಡಿ ನಿಮ್ಮ ಪರಿಹಾರದ ಪಾವತಿ ವಿವರಗಳನ್ನು ಈ ಪೇಜ್ ನಲ್ಲಿ ಪರಿಶೀಲಿಸಬಹುದು.

Bara Parihara Amount-ಬರ ಪರಿಹಾರದ ಹಣ ಜಮೆಯಾಗದಿದ್ದರೆ ರೈತರು ಏನು ಮಾಡಬೇಕು?

ಕೆಲವು ರೈತರಿಗೆ ಪರಿಹಾರದ ಹಣ ಬಿಡುಗಡೆಯಾಗಿದ್ದರೂ ಬ್ಯಾಂಕ್ ಖಾತೆಗೆ ಜಮೆಯಾಗದಿರುವ ಸಾಧ್ಯತೆಯಿದೆ. ಅಂತಹ ಸಂದರ್ಭದಲ್ಲಿ ಈ ಕೆಳಗಿನ ಅಂಶಗಳನ್ನು ಪರಿಶೀಲಿಸಿಕೊಳ್ಳಿ.

  • ನಿಮ್ಮ ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ.
  • ಬ್ಯಾಂಕ್ ಖಾತೆಯ NPCI ಮ್ಯಾಪಿಂಗ್ ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
  • ಪಹಣಿ ಹಾಗೂ ಆಧಾರ್‌ನಲ್ಲಿರುವ ಹೆಸರುಗಳಲ್ಲಿ ವ್ಯತ್ಯಾಸವಿದೆಯೇ ಪರಿಶೀಲಿಸಿ.
  • ಪರಿಹಾರ ಪೋರ್ಟಲ್‌ನಲ್ಲಿ ನಿಮ್ಮ ಬೆಳೆ ಹಾನಿಯ ವಿವರಗಳು ಸರಿಯಾಗಿ ನಮೂದಾಗಿವೆಯೇ ನೋಡಿ.
  • ಪಾವತಿ ವಿಫಲವಾಗಿದ್ದರೆ ಅಥವಾ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ಗ್ರಾಮ ಆಡಳಿತಾಧಿಕಾರಿ ಅಥವಾ ತಾಲೂಕು ಕಚೇರಿಯನ್ನು ಸಂಪರ್ಕಿಸಿ.

ಯಾವುದೇ ಮಧ್ಯವರ್ತಿಗಳಿಗೆ ಹಣ ನೀಡಬೇಡಿ. ಬರ ಪರಿಹಾರದ ಹಣ ಜಮೆ ಮಾಡಿಸಿಕೊಡುತ್ತೇವೆ ಎಂದು ಕರೆ ಮಾಡಿ OTP ಅಥವಾ ಬ್ಯಾಂಕ್ ಮಾಹಿತಿಯನ್ನು ಕೇಳುವವರ ಬಗ್ಗೆ ಎಚ್ಚರಿಕೆ ವಹಿಸಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: