Navodaya school admission-ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!

June 5, 2025 | Siddesh
Navodaya school admission-ನವೋದಯ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ನವೋದಯ ವಿದ್ಯಾಲಯ ಸಮಿತಿ ವತಿಯಿಂದ 2026-27 ನೇ ಶೈಕ್ಷಣಿಕ ವರ್ಷಕ್ಕೆ ನವೋದಯ ಶಾಲೆಯಲ್ಲಿ(Navodaya School) 6 ನೇ ತರಗತಿ ಪ್ರವೇಶಕ್ಕೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇದರ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಹಂಚಿಕೊಳ್ಳಲಾಗಿದೆ.

ಗುಣಮಟ್ಟದ ಶಿಕ್ಷಣಕ್ಕೆ ದೇಶದಲ್ಲಿ ಹೆಸರುವಾಸಿಯಾದ ಜವಾಹರ್ ನವೋದಯ(Navodaya Vidyalaya) ವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸವನ್ನು ಮಾಡಲು ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಈ ಅವಕಾಶವನ್ನು ಬಳಕೆ ಮಾಡಿಕೊಳ್ಳಬಹುದು. ಈ ಶಾಲೆಗಳಲ್ಲಿ ಉನ್ನತ ಮಟ್ಟದ ಶಿಕ್ಷಣಕ್ಕೆ ಅವಶ್ಯವಿರುವ ಎಲ್ಲಾ ಅವಶ್ಯಕ ಕಲಿಕೆಯನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅವಕಾಶವಿರುತ್ತದೆ.

ಇದನ್ನೂ ಓದಿ: Car Subsidy-ಸ್ವಾವಲಂಬಿ ಸಾರಥಿ ಯೋಜನೆ ಟ್ಯಾಕ್ಸಿ,ಗೂಡ್ಸ್ ವಾಹನ ಖರೀದಿಗೆ ₹3.00 ಲಕ್ಷ ಸಬ್ಸಿಡಿ!

ಈ ಅಂಕಣದಲ್ಲಿ ನವೋದಯ ಶಾಲೆಯಲ್ಲಿ(Navodaya School Application) ಪ್ರವೇಶ ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸಲು ಒದಗಿಸಬೇಕಾದ ದಾಖಲಾತಿಗಳೇನು? ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಪ್ರಮುಖ ದಿನಾಂಕದ ವಿವರ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

Navodaya School-ಜವಾಹರ್ ನವೋದಯ ವಿದ್ಯಾಲಯಗಳ ವಿವರ:

1986ರ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಸಾರ, ಭಾರತ ಸರ್ಕಾರವು ಜವಾಹರ್ ನವೋದಯ ವಿದ್ಯಾಲಯಗಳನ್ನು (JNV) ಪ್ರಾರಂಭಿಸಿತು. ಪ್ರಸ್ತುತ, 27 ರಾಜ್ಯಗಳು ಮತ್ತು 08 ಕೇಂದ್ರಾಡಳಿತ ಪ್ರದೇಶಗಳಲ್ಲಿ ಜವಾಹರ್ ನವೋದಯ ವಿದ್ಯಾಲಯಗಳು(JNV) ವ್ಯಾಪಿಸಿವೆ. ಇವು ಸಹ-ಶಿಕ್ಷಣ ಆವಾಸಿಕ ಶಾಲೆಗಳಾಗಿದ್ದು, ಭಾರತ ಸರ್ಕಾರದಿಂದ ಪೂರ್ಣವಾಗಿ ಹಣಕಾಸು ಮತ್ತು ಆಡಳಿತವನ್ನು ನವೋದಯ ವಿದ್ಯಾಲಯ ಸಮಿತಿ ಎಂಬ ಸ್ವಾಯತ್ತ ಸಂಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ.

ನವೋದಯ ಶಾಲೆಗಳಲ್ಲಿ(JNV) 6 ನೇ ತರಗತಿಗೆ ಪ್ರವೇಶವು ಜವಾಹರ್ ನವೋದಯ ವಿದ್ಯಾಲಯ ಆಯ್ಕೆ ಪರೀಕ್ಷೆ (JNVST) ಮೂಲಕ ನಡೆಯುತ್ತದೆ. 8ನೇ ತರಗತಿಯವರೆಗೆ ಬೋಧನಾ ಮಾಧ್ಯಮವು ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯಾಗಿದ್ದು, JNV ವಿದ್ಯಾರ್ಥಿಗಳು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ (CBSE) ಬೋರ್ಡ್ ಶಿಕ್ಷಣ ವ್ಯವಸ್ಥೆಯನ್ನು ಹೊಂದಿವೆ.

ಇದನ್ನೂ ಓದಿ: Business subsidy loan-ಸ್ವಂತ ಉದ್ಯೋಗ ಆರಂಭಿಸಲು ಸಬ್ಸಿಡಿಯಲ್ಲಿ ₹2 ಲಕ್ಷ ಪಡೆಯಲು ಅರ್ಜಿ!

Navodaya School Facilities-ನವೋದಯ ಶಾಲೆಗಳಲ್ಲಿನ ಸೌಲಭ್ಯಗಳು:

ಪ್ರವೇಶಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನವೋದಯ ಶಾಲೆಗಳಲ್ಲಿ ನೀಡಲಾಗುತ್ತದೆ.

ಶಾಲೆಗಳಲ್ಲಿ ಶಿಕ್ಷಣ, ವಸತಿ, ಸಮವಸ್ತ್ರ ಮತ್ತು ಪಠ್ಯಪುಸ್ತಕಗಳು ಉಚಿತವಾಗಿದ್ದು, 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಂದ ಮಾತ್ರ ವಿದ್ಯಾಲಯ ವಿಕಾಸ ನಿಧಿಗೆ ತಿಂಗಳಿಗೆ 600 ರೂ. ಸಂಗ್ರಹಿಸಲಾಗುತ್ತದೆ. SC/ST ವರ್ಗ, ದಿವ್ಯಾಂಗ ವಿದ್ಯಾರ್ಥಿಗಳು, ಎಲ್ಲಾ ಬಾಲಕಿಯರು ಮತ್ತು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ(BPL Card) ವಿದ್ಯಾರ್ಥಿಗಳು ಈ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

ಗುಣಮಟ್ಟದ ಶಿಕ್ಷಣವನ್ನು ಪಡೆಯುವುದರ ಜೊತೆಗೆ ಇತರೆ ಕೌಶಲ್ಯ ಕಲಿಕೆಗೂ ಸಹ ವಿದ್ಯಾರ್ಥಿಗಳಿಗೆ ಇಲ್ಲಿ ಅವಕಾಶವಿರುತ್ತದೆ.

ನವೋದಯ ವಿದ್ಯಾಲಯದ ಕ್ಯಾಂಪಸ್ ನಲ್ಲಿ ಬಾಲಕ ಮತ್ತು ಬಾಲಕಿಯರಿಗೆ ಪ್ರತೇಕ ಹಾಸ್ಟೆಲ್ ಲಭ್ಯವಿರುತ್ತದೆ.

ಇದನ್ನೂ ಓದಿ: Ganga Kalyana 2025-ಗಂಗಾ ಕಲ್ಯಾಣ ಯೋಜನೆ ಉಚಿತ ಬೋರ್ವೆಲ್ ಕೊರೆಸಲು ಅರ್ಜಿ ಆಹ್ವಾನ!

Navodaya School Eligibility-ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಅರ್ಹ ವಿದ್ಯಾರ್ಥಿಗಳು:

ಅರ್ಜಿದಾರ ವಿದ್ಯಾರ್ಥಿಯು ಪ್ರಸ್ತುತ ವರ್ಷದಲ್ಲಿ ಸರ್ಕಾರದಿಂದ ಮಾನ್ಯತೆ ಪಡೆದ ಶಾಲೆಯಲ್ಲಿ ನೇ ತರಗತಿಯನ್ನು ವ್ಯಾಸಂಗ ಮಾಡುತ್ತಿರಬೇಕು.

ವಿದ್ಯಾರ್ಥಿಯು 01 ಮೇ 2014 ರಿಂದ 30 ಏಪ್ರಿಲ್ 2016 ರ ಮಧ್ಯೆ ಹುಟ್ಟಿದವರಾಗಿರಬೇಕು.

ಇದನ್ನೂ ಓದಿ: Oil Palm Subsidy-ತೋಟಗಾರಿಕೆ ಇಲಾಖೆಯಿಂದ ₹ 81,000 ಸಬ್ಸಿಡಿಯಲ್ಲಿ ತಾಳೆ ಬೆಳೆಯ ಅರ್ಜಿ ಆಹ್ವಾನ!

Last Date For Application-ಅರ್ಜಿ ಸಲ್ಲಿಕೆಗೆ ಪ್ರಮುಖ ದಿನಾಂಕಗಳು-

  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- 27 ಜುಲೈ 2025
  • ಪ್ರವೇಶ ಪರೀಕ್ಷೆ ನಡೆಯುವ ದಿನಾಂಕ- 13 ಡಿಸೆಂಬರ್ 2025
  • ಆಯ್ಕೆಯಾದ ವಿದ್ಯಾರ್ಥಿಗಳ ಪಟ್ಟಿ ಬಿಡುಗಡೆ- ಮಾರ್ಚ 2026 ಅಂತ್ಯದಲ್ಲಿ

Navodaya Online Application-ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ವಿಧಾನವನ್ನು ಅನುಸರಿಸಿ ಅಧಿಕೃತ ನವೋದಯ ವಿದ್ಯಾಲಯದ ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

Step-1: ಪ್ರಥಮದಲ್ಲಿ ಇಲ್ಲಿ ಕ್ಲಿಕ್ Navodaya Online Application ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Free sewing machine-ಉಚಿತ ಹೊಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ!

Navodaya school admission

ಇದನ್ನೂ ಓದಿ: Poultry farm-ಉಚಿತ ಕೋಳಿ ಸಾಕಾಣಿಕೆ ತರಬೇತಿಗೆ ಅರ್ಜಿ! ಕೋಳಿ ಸಾಕಾಣಿಕೆಗೆ ಸಬ್ಸಿಡಿ ಯೋಜನೆಗಳು!

Step-2: ಇದಾದ ಬಳಿಕ ಇಲ್ಲಿ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಎಲ್ಲಾ ಅಗತ್ಯ ವಿವರವನ್ನು ಭರ್ತಿ ಮಾಡಿ ಕೊನೆಯಲ್ಲಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

Documents For Navodaya Admission-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

  • ವಿದ್ಯಾರ್ಥಿಯ ಪೋಟೋ/Student Photo
  • ಆಧಾರ್ ಕಾರ್ಡ/Aadhar
  • ವಿದ್ಯಾರ್ಥಿಯ ಸಿಹಿ ಪ್ರತಿ/Signature
  • ಪೋಷಕರ ಸಹಿ ಪ್ರತಿ/Parent Signature
  • ನಿವಾಸಿ ದೃಡೀಕರಣ ಪ್ರಮಾಣ ಪತ್ರ/Residential certificate
  • ವ್ಯಾಸಂಗ ಪ್ರಮಾಣ ಪತ್ರ/Study certificate

ಇದನ್ನೂ ಓದಿ: Krishi Honda Subsidy-ಕೃಷಿ ಹೊಂಡ ನಿರ್ಮಾಣಕ್ಕೆ 2.28ಲಕ್ಷ ಸಬ್ಸಿಡಿ!

Navodaya Exam Details-ಪರೀಕೆಯು ಯಾವೆಲ್ಲ ಭಾಷೆಯಲ್ಲಿ ಲಭ್ಯವಿದೆ:

ರಾಜ್ಯದಲ್ಲಿ ವಿದ್ಯಾರ್ಥಿಗಳು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಮಾರಾಠಿ ಇತರೆ 3 ಭಾಷೆಯಲ್ಲಿ ಪರೀಕೆ ಬರೆಯಲು ಅವಕಾಶವಿರುತ್ತದೆ.

ಪರೀಕ್ಷೆಯಲ್ಲಿನ ವಿಷಯಗಳು:

ಪ್ರವೇಶ ಪರೀಕ್ಷೆಯು ಒಟ್ಟು 2 ಗಂಟೆ ಅವಧಿಯಾಗಿದ್ದು 11:30 ರಿಂದ 01:30 ರವರೆಗೆ ನಡೆಯಲಿದ್ದು ಒಟ್ಟು 80 ಪ್ರಶ್ನೆಗಳು 100 ಅಂಕಗಳಿಗೆ ಇರುತ್ತವೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ವಿಷಯಗಳ ವಿವರ ಈ ಕೆಳಗಿನಂತಿದೆ.

Type of TestNumber Of QuestionsMarks Duration
Mental Ability405060 Minutes
Arithmentic Test202530 Minutes
Language Tes202530 Minutes
Total801002 Hours

For More Information-ಹೆಚ್ಚಿನ ಮಾಹಿತಿಗಾಗಿ:

ಅಧಿಕೃತ ವೆಬ್ಸೈಟ್- Click Here
ಅರ್ಜಿ ಸಲ್ಲಿಸಲು ಲಿಂಕ್- Apply Now
ಅಧಿಕೃತ ಪ್ರಕಟಣೆ ಪ್ರತಿ-Download Now

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: