Village Administrative Officer Recruitment-ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸದರೆ ಉತ್ತಮ?

ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ(Village Administrative Officer Recruitment)ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಬಹುತೇಕ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಾಗ ಗೊಂದಲ ಉಂಟಾಗುವುದು ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕು ಎಂಬುದು. ಈ ಗೊಂದಲಕ್ಕೆ ಸಹಾಯವಾಗುವಂತೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

Village Administrative Officer Recruitment-ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸದರೆ ಉತ್ತಮ?
Village Administrative Officer Recruitment-2024

ಗ್ರಾಮ ಲೆಕ್ಕಾಧಿಕಾರಿ ಅಥವಾ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ(Village Administrative Officer Recruitment)ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಬಹುತೇಕ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸುವಾಗ ಗೊಂದಲ ಉಂಟಾಗುವುದು ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಬೇಕು ಎಂಬುದು. ಈ ಗೊಂದಲಕ್ಕೆ ಸಹಾಯವಾಗುವಂತೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. 

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದ್ದು, ಅರ್ಹ ಅಭ್ಯರ್ಥಿಗಳು ಇಲ್ಲಿಯ ತನಕ ಯಾರು ಅರ್ಜಿ ಸಲ್ಲಿಸಿಲ್ಲವೋ ಈಗಲೇ ಈ ಮಾಹಿತಿಯನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿ. 

ಇದನ್ನೂ ಓದಿ: Annabhagya amount-2024: ಈ ಪಟ್ಟಿಯಲ್ಲಿರುವವರಿಗೆ ಅನ್ನಭಾಗ್ಯ ಹಣ ಬಿಡುಗಡೆ! ಇಲ್ಲಿದೆ ಅಧಿಕೃತ ವೆಬ್ಸೈಟ್ ಲಿಂಕ್.

Village Administrative Officer Recruitment-2024: ಯಾವ ಜಿಲ್ಲೆಗೆ ಅರ್ಜಿ ಸಲ್ಲಿಸಿದರೆ ಉತ್ತಮ? 

ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಹಲವಾರು ಅಭ್ಯರ್ಥಿಗಳು, ಯಾವ ಜಿಲ್ಲೆಯಲ್ಲಿ ಹೆಚ್ಚು ಪೋಸ್ಟ್ ಗಳಿವೆಯೋ ಆ ಜಿಲ್ಲೆಗೆ ಅರ್ಜಿ ಸಲ್ಲಿಸಿ ಬಿಡುತ್ತಾರೆ. ಆದರೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಪ್ರಮುಖವಾಗಿ ಗಮನಿಸಬೇಕಾದ ವಿಷಯವೇನೆಂದರೆ, ನೀವು ಅರ್ಜಿ ಸಲ್ಲಿಸುತ್ತಿರುವ ಜಿಲ್ಲೆಯಲ್ಲಿ ನಿಮ್ಮ ವರ್ಗಕ್ಕೆ (Category) ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ತಿಳಿದುಕೊಳ್ಳಬೇಕು. 

ಪ್ರತಿಯೊಂದು ಜಿಲ್ಲೆಯಲ್ಲಿ ವರ್ಗಗಳ ಪ್ರಕಾರ (Category Wise) ಖಾಲಿ ಇರುವ ಹುದ್ದೆಗಳ ಪಿಡಿಎಫ್ ಫೈಲ್ (PDF File) ಅನ್ನು ಕೆಳಗೆ ನೀಡಿದ್ದು, ಅಭ್ಯರ್ಥಿಗಳು ಡೌನ್ಲೋಡ್ ಮಾಡಿಕೊಂಡು ನಿಮಗೆ ಸಂಬಂಧಿಸಿದ ಕೆಟಗರಿಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಮತ್ತು ಯಾವ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ಪರಿಶೀಲಿಸಿಕೊಂಡು ಉತ್ತಮವಾಗಿರುವ ಜಿಲ್ಲೆಗೆ ಅರ್ಜಿ ಸಲ್ಲಿಸಿ.

ಉದಾಹರಣೆಗೆ: ನೀವು 3ಬಿ ಕೆಟಗರಿಗೆ ಸೇರಿದ್ದೀರಿ ಹಾಗೂ ಚಿತ್ರದುರ್ಗ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರಿ, ಆದರೆ ಆ ಜಿಲ್ಲೆಯಲ್ಲಿ 3ಬಿ ವರ್ಗಕ್ಕೆ ಯಾವುದೇ ಹುದ್ದೆಗಳು ಖಾಲಿ ಇರದೇ ಇದ್ದಲ್ಲಿ ನೀವು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾಗುವುದು ಕಠಿಣವಾಗುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮುನ್ನ ನೀವು ಅರ್ಜಿ ಸಲ್ಲಿಸುವ ಜಿಲ್ಲೆಯಲ್ಲಿ ನಿಮ್ಮ ಮೀಸಲಾತಿ ವರ್ಗಕ್ಕೆ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ತಿಳಿದುಕೊಳ್ಳಿ.

ಇದನ್ನೂ ಓದಿ: Parihara amount-2024: ಕೇಂದ್ರದಿಂದ 3498 ಕೋಟಿ ಬರ ಪರಿಹಾರ ಬಿಡುಗಡೆ! ಈ ಪಟ್ಟಿಯಲ್ಲಿರುವ ರೈತರಿಗೆ ಸಿಗಲಿದೆ ಪರಿಹಾರದ ಹಣ!

 Important Dates- ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು: 

• ಅರ್ಜಿ ಸಲ್ಲಿಸಲು ಆರಂಭವಾದ ದಿನಾಂಕ : 05 ಏಪ್ರಿಲ್ 2024
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 04 ಮೇ 2024

 Usefull website links-ಪ್ರಮುಖ ಲಿಂಕ್ ಗಳು : 

• ವರ್ಗಾವರು ಹುದ್ದೆಗಳ ವಿಂಗಡಣೆ ಪಟ್ಟಿ : Download 
• ಅಧಿಕೃತ ಅಧಿಸೂಚನೆ : Download 
• ಅರ್ಜಿ ಸಲ್ಲಿಕೆ ಲಿಂಕ್ : Click here