FID Update-ಪಿಎಂ ಕಿಸಾನ್ ಮತ್ತು ಬೆಳೆ ಪರಿಹಾರ ಹಣ ಪಡೆಯಲು FID ಅಪ್ಡೇಟ್ ಕಡ್ಡಾಯ!

March 1, 2026 | Siddesh
FID Update-ಪಿಎಂ ಕಿಸಾನ್ ಮತ್ತು ಬೆಳೆ ಪರಿಹಾರ ಹಣ ಪಡೆಯಲು FID ಅಪ್ಡೇಟ್ ಕಡ್ಡಾಯ!
Share Now:

ಕೃಷಿ ಇಲಾಖೆಯಿಂದ ಜಮೀನು ಹೊಂದಿರುವ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಎಲ್ಲಾ ಯೋಜನೆಯ(Karnataka Agriculture Department) ಪ್ರಯೋಜನವನ್ನು ಪಡೆಯಲು ಅದರಲು ಪ್ರಮುಖವಾಗಿ ಸಹಾಯಧನ ಆಧಾರಿತ ಯೋಜನೆಗಳಾದ ಬೆಳೆ ವಿಮೆ(Bele Vime),ಬೆಳೆ ಪರಿಹಾರ(Bele Parihara),ಕಿಸಾನ್ ಸಮ್ಮಾನ್ ನಿಧಿ(PM KIsan) ಯೋಜನೆಯ ಪ್ರಯೋಜನವನ್ನು ಪಡೆಯಲು ಕಡ್ಡಾಯವಾಗಿ FID ಅಪ್ಡೇಟ್ ಮಾಡಿಸಿಕೊಳ್ಳಲು ನೂತನ ಪ್ರಕಟಣೆ ಹೊರಡಿಸಲಾಗಿದೆ.

ಕೃಷಿ ಇಲಾಖೆಯಿಂದ ಈಗಾಗಲೇ ರಾಜ್ಯದ ಬಹುತೇಕ 90% ಕ್ಕಿಂತ ಹೆಚ್ಚಿನ ರೈತರ ಜಮೀನಿನ ವಿವರ ಮತ್ತು ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು FID/Fruits ತಂತ್ರಾಂಶದಲ್ಲಿ ದಾಖಲಿಸಲಾಗಿದ್ದು ಅದರೆ ಈಗ ಇಲಾಖೆಯಿಂದ ಈ ತಂತ್ರಾಂಶದಲ್ಲಿ ಫಲಾನುಭವಿಯ ನೈಜತೆಯನ್ನು ನಿಖರವಾಗಿ ದಾಖಲಿಸಲು ಮೊಬೈಲ್ ನಂಬರ್,e-KYC,ಜಮೀನಿನ ಸರ್ವೆ ನಂಬರ್ ವಿವರದ ಮಾಹಿತಿಯನ್ನು ಅಪ್ಡೇಟ್ ಮಾಡಲು ಪ್ರಕಟಣೆಯನ್ನು ಹೊರಡಿಸಲಾಗಿದೆ.

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ!

ಇಂದಿನ ಲೇಖನದಲ್ಲಿ ಕೃಷಿಕರಿಗೆ FID ಅಪ್ಡೇಟ್ ಎಂದರೇನು? ಇದನ್ನು ಏಕೆ ಮಾಡಿಸಬೇಕು? FID ಅಪ್ಡೇಟ್ ಮಾಡಿಸುವುದರಿಂದ ರೈತರಿಗೆ(Farmers) ಅಗುವ ಪ್ರಯೋಜನಗಳೇನು? FID ಅಪ್ಡೇಟ್ ಮಾಡಿಸಲು ಅವಶ್ಯವಿರುವ ದಾಖಲೆಗಳು ಯಾವುವು? ಎಲ್ಲಿ FID ಅಪ್ಡೇಟ್ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು? ಎನ್ನುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಹಂಚಿಕೊಳ್ಳಲಾಗಿದೆ.

What Is FID Update-ಏನಿದು FID ನಂಬರ್ ಅಪ್ಡೇಟ್?

ಕೃಷಿ ಇಲಾಖೆಯಿಂದ ರೈತರ ಜಮೀನಿನ ಸರ್ವೆ ನಂಬರ್,ವಿಸ್ತೀರ್ಣ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು Fruits ತಂತ್ರಾಂಶದಲ್ಲಿ ದಾಖಲಿಸಿ ಪ್ರತಿಯೊಬ್ಬ ರೈತರಿಗೆ ವಿಭಿನ್ನವಾದ ನಂಬರ್ ಅನ್ನು ನೀಡಲಾಗುತ್ತದೆ ಇದಕ್ಕೆ FID ನಂಬರ್ ಎಂದು ಕರೆಯಲಾಗುತ್ತದೆ, ಅದರೆ ಬಹು ದಿನಗಳಿಂದ ರೈತರ ವಿವರವನ್ನು ಕಾಲ ಕಾಲಕ್ಕೆ ಈ ತಂತ್ರಾಂಶದಲ್ಲಿ ನವೀಕರಿಸದ ಹಿನ್ನೆಲೆಯಲ್ಲಿ ಪ್ರಸ್ತುತ ನಮ್ಮ ರಾಜ್ಯದ್ಯಂತ ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರ ಜಮೀನಿನ ಸರ್ವೆ ನಂಬರ್ ವಿವರ ಮತ್ತು ವೈಯಕ್ತಿಕ ಹಾಗೂ ಬ್ಯಾಂಕ್ ಖಾತೆಯ ವಿವರವನ್ನು ನವೀಕರಿಸಲಾಗುತ್ತಿದ್ದು ಇದಕ್ಕಾಗಿ ರೈತರು ಕೂಡಲೇ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: SSP Scholarship-ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

Why FID Number Update Necessary-FID ವಿವರವನ್ನು ಏಕೆ ಅಪ್ಡೇಟ್ ಮಾಡಿಸಬೇಕು?

ಅನೇಕ ರೈತರು ಈ ಹಿಂದೆ FID ಮಾಡಿಸಿದ್ದರೂ, ಕಾಲಕಾಲಕ್ಕೆ ಜಮೀನಿನ ಮಾರಾಟ, ಖರೀದಿ ಅಥವಾ ವಾರಸುದಾರರ ಬದಲಾವಣೆಯಿಂದಾಗಿ ದತ್ತಾಂಶದಲ್ಲಿ ವ್ಯತ್ಯಯ ಉಂಟಾಗಿರುತ್ತದೆ.

ತಪ್ಪು ಪಾವತಿ ತಡೆಗಟ್ಟಲು: ಮೃತಪಟ್ಟ ಅಥವಾ ಜಮೀನು ಹೊಂದಿಲ್ಲದ ವ್ಯಕ್ತಿಗಳ ಖಾತೆಗೆ ಹಣ ಹೋಗುವುದನ್ನು ತಪ್ಪಿಸಲು.

ನಿಖರ ಮಾಹಿತಿ: ಆಧಾರ್ ಕಾರ್ಡ್‌ನಲ್ಲಿರುವಂತೆ ರೈತರ ಹೆಸರು ಮತ್ತು ಬ್ಯಾಂಕ್ ಖಾತೆ ವಿವರಗಳು ತಾಳೆಯಾಗುವುದನ್ನು ಖಚಿತಪಡಿಸಿಕೊಳ್ಳಲು.

ಸರ್ಕಾರದ ಹೊಸ ನಿಯಮ: ಇತ್ತೀಚಿನ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಬ್ಬ ಫಲಾನುಭವಿಯ ಇ-ಕೆವೈಸಿ ಕಡ್ಡಾಯವಾಗಿದೆ.

ಇದನ್ನೂ ಓದಿ: Sugarcane Incentive-ಕಬ್ಬು ಬೆಳೆಗಾರರಿಗೆ 300 ಕೋಟಿ ಆರ್ಥಿಕ ನೆರವು ಬಿಡುಗಡೆ: ಸಚಿವ ಶಿವಾನಂದ ಪಾಟೀಲ್!

FID Update Benefits-FID ಅಪ್ಡೇಟ್ ಮಾಡಿಸುವುದರಿಂದ ರೈತರಿಗೆ ಅಗುವ ಪ್ರಯೋಜನಗಳೇನು?

FID ಅಪ್ಡೇಟ್ ಮಾಡುವುದರಿಂದ ರೈತರಿಗೆ ಕೇವಲ ಒಂದು ಯೋಜನೆಯಲ್ಲದೆ, ಕೃಷಿ ಇಲಾಖೆಯ ಎಲ್ಲಾ ಸೌಲಭ್ಯಗಳು ಸುಲಭವಾಗಿ ದೊರೆಯುತ್ತವೆ:

ನೇರ ನಗದು ವರ್ಗಾವಣೆ (DBT): ಪಿಎಂ ಕಿಸಾನ್ ಮತ್ತು ರಾಜ್ಯ ಸರ್ಕಾರದ ಪರಿಹಾರದ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಯಾವುದೇ ವಿಳಂಬವಿಲ್ಲದೆ ಜಮೆಯಾಗುತ್ತದೆ.

ಬೆಳೆ ವಿಮೆ ಸೌಲಭ್ಯ: ಬೆಳೆ ಹಾನಿಯಾದ ಸಂದರ್ಭದಲ್ಲಿ ಬೆಳೆ ಪರಿಹಾರ,ವಿಮಾ ಮೊತ್ತವನ್ನು ಪಡೆಯಲು FID ಸಂಖ್ಯೆ ಅತ್ಯಗತ್ಯ.

ಸಹಾಯಧನದಲ್ಲಿ ಕೃಷಿ ಉಪಕರಣ: ಟ್ರ್ಯಾಕ್ಟರ್, ಸ್ಪ್ರೇಯರ್ ಅಥವಾ ಇತರ ಕೃಷಿ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಪಡೆಯಲು FID ಬೇಕೇಬೇಕು.

ಬೆಂಬಲ ಬೆಲೆಗೆ ನೋಂದಣಿ: ರೈತರು ತಮ್ಮ ಬೆಳೆಗಳನ್ನು ಸರ್ಕಾರಿ ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆಗೆ ಮಾರಾಟ ಮಾಡಲು ಈ ಐಡಿ ಸಂಖ್ಯೆ ಕಡ್ಡಾಯ.

ಇದನ್ನೂ ಓದಿ: Marriage Registration-ಮದುವೆ ನೋಂದಣಿ ಈಗ ಮತ್ತಷ್ಟು ಸುಲಭ! ಮೊಬೈಲ್ ಮೂಲಕ ಅರ್ಜಿ ಸಲ್ಲಿಸಿ!

FID Update In karnataka

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

Required Documents-FID ಅಪ್ಡೇಟ್ ಮಾಡಿಸಲು ಅವಶ್ಯವಿರುವ ದಾಖಲೆಗಳು ಯಾವುವು?

ರೈತರು ಅಪ್ಡೇಟ್ ಮಾಡಲು ರೈತ ಸಂಪರ್ಕ ಕೇಂದ್ರವನ್ನು ಭೇಟಿ ಮಾಡಲು ಹೋಗುವಾಗ ಈ ಕೆಳಗಿನ ಮೂಲ ದಾಖಲೆಗಳನ್ನು ಮತ್ತು ಅವುಗಳ ನಕಲನ್ನು (Zerox) ತೆಗೆದುಕೊಂಡು ತಪ್ಪದೇ ಹೋಗಿ.

  • ಆಧಾರ್ ಕಾರ್ಡ್: ರೈತರ ಹೆಸರಿನಲ್ಲಿರುವ ಆಧಾರ್ ಕಾರ್ಡ್.
  • ಜಮೀನಿನ ಪಹಣಿ (RTC): ಪ್ರಸಕ್ತ ಸಾಲಿನ ಅಪ್‌ಡೇಟ್ ಆದ ಪಹಣಿ ಪತ್ರ.
  • ಬ್ಯಾಂಕ್ ಪಾಸ್ ಬುಕ್: ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಸಕ್ರಿಯ ಬ್ಯಾಂಕ್ ಖಾತೆಯ ವಿವರ.
  • ಮೊಬೈಲ್ ಸಂಖ್ಯೆ: ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ (OTP ಗಾಗಿ ಅವಶ್ಯಕ).
  • ಜಾತಿ ಪ್ರಮಾಣಪತ್ರ: (ಅನ್ವಯಿಸುವಂತಿದ್ದಲ್ಲಿ, ಮೀಸಲಾತಿ ಸೌಲಭ್ಯಕ್ಕಾಗಿ).

ಇದನ್ನೂ ಓದಿ: Online Land Documents-'ಇ-ಚಾವಡಿ' ಮೂಲಕ ನಿಮ್ಮ ಗ್ರಾಮದ ಕಂದಾಯ ದಾಖಲೆಗಳು ನಿಮ್ಮ ಬೆರಳ ತುದಿಯಲ್ಲಿ!

FID Update Application-FID ಅಪ್ಡೇಟ್ ಮಾಡಿಸಲು ಎಲ್ಲಿ ಅರ್ಜಿ ಸಲ್ಲಿಸಬೇಕು?

ಕೃಷಿಕರು ತಮ್ಮ ಹೋಬಳಿ ಮಟ್ಟದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಕ್ಕೆ(RSK) ನೇರವಾಗಿ ಭೇಟಿ ನೀಡಿ ಕೃಷಿ ಅಧಿಕಾರಿಗಳ ಮೂಲಕ ಅಪ್ಡೇಟ್ ಮಾಡಿಸಬಹುದು.

ಸಕಾಲದಲ್ಲಿ FID ಅಪ್ಡೇಟ್ ಮಾಡದಿದ್ದರೆ ಪಿಎಂ ಕಿಸಾನ್‌ನ ಮುಂದಿನ ಕಂತುಗಳು ಹಾಗೂ ಬೆಳೆ ಹಾನಿ ಪರಿಹಾರ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ, ಕೂಡಲೇ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನಿಮ್ಮ ವಿವರಗಳನ್ನು ನವೀಕರಿಸಿಕೊಳ್ಳಿ.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: