Diesel Pumpset Subsidy-ಕೃಷಿ ಇಲಾಖೆಯಿಂದ ಡಿಸೇಲ್ ಪಂಪ್ ಪಡೆಯಲು ಅರ್ಜಿ ಆಹ್ವಾನ!

March 2, 2026 | Siddesh
Diesel Pumpset Subsidy-ಕೃಷಿ ಇಲಾಖೆಯಿಂದ ಡಿಸೇಲ್ ಪಂಪ್ ಪಡೆಯಲು ಅರ್ಜಿ ಆಹ್ವಾನ!
Share Now:

ರಾಜ್ಯದ ಕೃಷಿ ವಲಯದಲ್ಲಿ ನೀರಾವರಿ ಸೌಲಭ್ಯವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆಯಿಂದ(Karnataka Agriculture Department) ಸಹಾಯಧನದಲ್ಲಿ ಪ್ರತಿ ವರ್ಷ ಡಿಸೇಲ್ ಪಂಪ್ ಸೆಟ್(Diesel Pumpset Subsidy Application) ಅನ್ನು ವಿತರಣೆ ಮಾಡಲಾಗುತ್ತಿದ್ದು, ವಿದ್ಯುತ್ ಸಂಪರ್ಕದ ಕೊರತೆ ಇರುವ ಪ್ರದೇಶಗಳಲ್ಲಿ ಬೆಳೆಗಳಿಗೆ ಸಕಾಲದಲ್ಲಿ ನೀರುಣಿಸಲು ಅನುಕೂಲವಾಗುವಂತೆ ಡೀಸೆಲ್ ಪಂಪ್‌ಸೆಟ್‌ಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲು ಇಲಾಖೆಯಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನೀರಾವರಿ ಮೂಲವಿದ್ದರೂ ವಿದ್ಯುತ್ ಸಮಸ್ಯೆ ಅಥವಾ ಟ್ರಾನ್ಸ್‌ಫಾರ್ಮರ್ ವೈಫಲ್ಯದಿಂದಾಗಿ ಬೆಳೆಗಳು ಒಣಗುತ್ತಿರುವ ಸಂದರ್ಭದಲ್ಲಿ ಡೀಸೆಲ್ ಪಂಪ್‌ಸೆಟ್‌ಗಳು(Diesel Pumpset Subsidy Yojane) ರೈತರ ಪಾಲಿಗೆ ವರದಾನವಾಗಲಿವೆ. ಸರ್ಕಾರವು ಈ ಬಾರಿ ವಿವಿಧ ಯೋಜನೆಗಳಡಿ ಅರ್ಹ ಫಲಾನುಭವಿಗಳನ್ನು ಗುರುತಿಸಿ, ಸಬ್ಸಿಡಿಯಲ್ಲಿ ಕೃಷಿ ಯಾಂತ್ರೀಕರಣ ವಿತರಣೆ ಮಾಡಲು ಹೆಚ್ಚಿನ ಒತ್ತನ್ನು ನೀಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಪ್ರಸ್ತುತ ಡಿಸೇಲ್ ಪಂಪ್ ಸೆಟ್ ಅನ್ನು ಸಹಾಯಧನದಲ್ಲಿ ಜಿಲ್ಲಾವಾರು ಗುರಿಗಳಿಗೆ ಅನುಗುಣವಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು, ಆಸಕ್ತರು ತಡಮಾಡದೆ ಇದರ ಸದುಪಯೋಗ ಪಡೆದುಕೊಳ್ಳಬಹುದು.

ಇದನ್ನೂ ಓದಿ: Sheep And Goat Farming-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 10+1 ಕುರಿ ಸಾಕಾಣಿಕೆ ಸಬ್ಸಿಡಿ!

Sheep And Goat Farming-ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 10+1 ಕುರಿ ಸಾಕಾಣಿಕೆ ಸಬ್ಸಿಡಿ!

ಪ್ರಸ್ತುತ ಕೃಷಿ ಇಲಾಖೆಯು ಪಾರದರ್ಶಕವಾಗಿ ಈ ಸೌಲಭ್ಯವನ್ನು ವಿತರಿಸಲು 'ಫ್ರೂಟ್ಸ್' (FRUITS) ಪೋರ್ಟಲ್ ಮೂಲಕ ನೋಂದಾಯಿತರಾದ ರೈತರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು ಇಂದಿನ ಲೇಖನದಲ್ಲಿ ಸಬ್ಸಿಡಿಯಲ್ಲಿ ಡಿಸೇಲ್ ಪಂಪ್(Diesel Pumpset Subsidy) ಅನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಸಬ್ಸಿಡಿ ಪ್ರಮಾಣ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಬಗ್ಗೆ ಸಂಪೂರ್ಣ ವಿವರವಾದ ಮಾಹಿತಿಯನ್ನು ಪ್ರಕಟಿಸಲಾಗಿದೆ.

Diesel Pumpset Subsidy Scheme Eligibility-ಯಾರೆಲ್ಲ ಅರ್ಜಿ ಸಲ್ಲಿಸಬಹುದು?

ಅರ್ಜಿದಾರ ರೈತರು ರಾಜ್ಯದ ಖಾಯಂ ನಿವಾಸಿಯಾಗಿರಬೇಕು.

ರಾಜ್ಯದ ಸಣ್ಣ ಮತ್ತು ಅತಿ ಸಣ್ಣ ರೈತರು ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರು.

ಅರ್ಜಿದಾರರು ಕಡ್ಡಾಯವಾಗಿ ರೈತ ಗುರುತಿನ ಚೀಟಿ (FRUITS ID) ಹೊಂದಿರಬೇಕು.

ಜಮೀನು ತನ್ನ ಹೆಸರಿನಲ್ಲಿ ಹೊಂದಿರಬೇಕು ಅಥವಾ ಜಂಟಿ ಖಾತೆದಾರರಾಗಿದ್ದರೆ ಇತರರ ಒಪ್ಪಿಗೆ ಪ್ರಮಾಣ ಪತ್ರವನ್ನು ಹೊಂದಿರಬೇಕು.

ನೀರಾವರಿ ಸೌಲಭ್ಯಕ್ಕಾಗಿ ನೀರಿನ ಮೂಲ ಬಾವಿ, ಕೊಳವೆಬಾವಿ ಅಥವಾ ಕೃಷಿ ಹೊಂಡ ಲಭ್ಯವಿರಬೇಕು.

ಇದನ್ನೂ ಓದಿ: FID Update-ಪಿಎಂ ಕಿಸಾನ್ ಮತ್ತು ಬೆಳೆ ಪರಿಹಾರ ಹಣ ಪಡೆಯಲು FID ಅಪ್ಡೇಟ್ ಕಡ್ಡಾಯ!

Diesel Pumpset Subsidy Amount-ಎಷ್ಟು ಸಬ್ಸಿಡಿ ನೀಡಲಾಗುತ್ತದೆ?

ಸಾಮಾನ್ಯ ವರ್ಗದ ರೈತರಿಗೆ: ಪಂಪ್‌ಸೆಟ್‌ನ ಒಟ್ಟು ವೆಚ್ಚದ ಮೇಲೆ ಶೇಕಡಾ 50%-90% ವರೆಗೆ ಸಬ್ಸಿಡಿ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ: ಈ ವರ್ಗದ ರೈತರಿಗೆ ಶೇಕಡಾ 75% ರಿಂದ 90% ಸಬ್ಸಿಡಿ ನೀಡಲಾಗುತ್ತದೆ.(ಇಲಾಖೆಯ ಪ್ರಸ್ತುತ ನಿಯಮಗಳ ಅನ್ವಯ).

ಇದನ್ನೂ ಓದಿ: Gruhalakshmi Amount-ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಜೀವಿತ ಪ್ರಮಾಣಪತ್ರ ಕಡ್ಡಾಯ!

Diesel Pumpset Subsidy Scheme List-ಯಾವೆಲ್ಲ ಯೋಜನೆಯಡಿ ಸಬ್ಸಿಡಿ ಪಡೆಯಬಹುದು?

ಕೃಷಿ ಇಲಾಖೆಯಿಂದ ರೈತರಿಗೆ ವಿವಿಧ ಯೋಜನೆಯಡಿ ಸಹಾಯಧನದಲ್ಲಿ ಡಿಸೇಲ್ ಪಂಪ್ ಸೆಟ್ ಅನ್ನು ವಿತರಣೆ ಮಾಡಲಾಗಿತ್ತದೆ ಈ ಯೋಜನೆಗಳ ಪಟ್ಟಿ ಕೆಳಗಿನಂತಿವೆ:

ಕೃಷಿ ಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗುತ್ತದೆ(Krishi Bhagya).
ಕೃಷಿ ಯಾಂತ್ರೀಕರಣ ಉಪ-ಅಭಿಯಾನ (SMAM)
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (RKVY)

ಇದನ್ನೂ ಓದಿ: Passport Verification-ಪಾಸ್‌ಪೋರ್ಟ್ ವೆರಿಫಿಕೇಶನ್‌ಗೆ ನೂತನ ನಿಯಮ ಜಾರಿ!

Diesel Pumpset Subsidy

ಇದನ್ನೂ ಓದಿ: Sugarcane Incentive-ಕಬ್ಬು ಬೆಳೆಗಾರರಿಗೆ 300 ಕೋಟಿ ಆರ್ಥಿಕ ನೆರವು ಬಿಡುಗಡೆ: ಸಚಿವ ಶಿವಾನಂದ ಪಾಟೀಲ್!

How To Apply For Diesel Pumpset Subsidy -ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಹ ರೈತರು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (RSK) ಅಥವಾ ಆಯಾ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು ಅಥವಾ ಕೃಷಿ ಇಲಾಖೆಯ ಅಧಿಕೃತ K-Kisan ಜಾಲತಾಣವನ್ನು ಪ್ರವೇಶ ಮಾಡಿ ಆನ್ಲೈನ್ ಮೂಲಕವು ಸಹ ಅರ್ಜಿ ಸಲ್ಲಿಸಬಹುದು.

K-kisan Website-ಅರ್ಜಿ ಸಲ್ಲಿಸಲು ಕೆ-ಕಿಸಾನ್ ವೆಬ್ಸೈಟ್-Apply Now

Required Documents-ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು:

ರೈತರು ಕೃಷಿ ಇಲಾಖೆಯಿಂದ ರೈತ ಸಂಪರ್ಕ ಕೇಂದ್ರದ ಮೂಲಕ ಸಹಾಯಧನದಲ್ಲಿ ಡಿಸೇಲ್ ಪಂಪ್ ಸೆಟ್ ಅನ್ನು ಪಡೆಯಲು ಅರ್ಜಿಯನ್ನು ಸಲ್ಲಿಸಲು ಅವಶ್ಯವಿರುವ ದಾಖಲೆಗಳ ಪಟ್ಟಿ ಈ ಕೆಳಗಿನಂತಿವೆ:

  • ಆಧಾರ್ ಕಾರ್ಡ್ ಪ್ರತಿ.
  • ಆರ್.ಟಿ.ಸಿ (RTC/Pahani) ಪ್ರತಿ.
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ರೈತ ನೋಂದಣಿ ಸಂಖ್ಯೆ (FRUITS ID/FID).
  • ಪರಿಶಿಷ್ಟ ಜಾತಿ/ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ.
  • ಪಾಸ್‌ಪೋರ್ಟ್ ಅಳತೆಯ ಫೋಟೋ.
  • ಬಾಂಡ್/ಛಾಪಾ ಕಾಗದ.
  • ನೀರಿನ ಮೂಲದ ಪ್ರಮಾಣ ಪತ್ರ(VA ಅವರ ಬಳಿ ಪಡೆಯಬೇಕು).

ಇದನ್ನೂ ಓದಿ: SSP Scholarship-ಎಸ್‌ಎಸ್‌ಪಿ ವಿದ್ಯಾರ್ಥಿವೇತನ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

Diesel Pumpset Benefits-ಡಿಸೇಲ್ ಪಂಪ್ ಸೆಟ್ ಪ್ರಯೋಜನಗಳು:

ಡೀಸೆಲ್ ಪಂಪ್‌ಸೆಟ್ ಪ್ರಯೋಜನಗಳು: ವಿದ್ಯುತ್ ಸ್ವತಂತ್ರ: ಲೋಡ್ ಶೆಡ್ಡಿಂಗ್ ಅಥವಾ ವಿದ್ಯುತ್ ಇಲ್ಲದ ಸಮಯದಲ್ಲೂ ಬೆಳೆಗಳಿಗೆ ನೀರು ಹಾಯಿಸಬಹುದು.

ಸ್ಥಳಾಂತರದ ಸೌಲಭ್ಯ: ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸುಲಭವಾಗಿ ಸಾಗಿಸಬಹುದು.

ಅಪತ್ಕಾಲೀನ ಬಳಕೆ: ಮಳೆ ಕೈಕೊಟ್ಟಾಗ ಕೆರೆ ಅಥವಾ ಕುಂಟೆಗಳಿಂದ ತಕ್ಷಣ ನೀರು ಎತ್ತಲು ಉಪಯುಕ್ತ.

ಹೆಚ್ಚಿನ ಬಾಳಿಕೆ: ಡೀಸೆಲ್ ಇಂಜಿನ್‌ಗಳು ಸಾಮಾನ್ಯವಾಗಿ ಹೆಚ್ಚು ಕಾಲ ಬಾಳಿಕೆ ಬರುತ್ತವೆ ಮತ್ತು ನಿರ್ವಹಣೆ ಸುಲಭ.

ಕೃಷಿ ಇಲಾಕೆ ಯೋಜನೆಗಳ ಕುರಿತು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್-Click Here

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: