Navodaya Admission-2027: ನವೋದಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!

July 24, 2026 | Siddesh
Navodaya Admission-2027: ನವೋದಯ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ!
Share Now:

ದೇಶಾದ್ಯಂತ ಗುಣಮಟ್ಟದ ಉಚಿತ ವಸತಿ ಶಿಕ್ಷಣವನ್ನು ಒದಗಿಸುವ ಪ್ರತಿಷ್ಠಿತ 'ಜವಾಹರ್ ನವೋದಯ ವಿದ್ಯಾಲಯ' (JNV) ಸಂಸ್ಥೆಯು 2027-28ನೇ ಶೈಕ್ಷಣಿಕ ಸಾಲಿನ 6ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ(Navodaya Application). ಗ್ರಾಮೀಣ ಹಾಗೂ ನಗರ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ನೆರವು ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ವೇದಿಕೆ ಕಲ್ಪಿಸುವ ನವೋದಯ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅಪೇಕ್ಷಿಸುವ ವಿದ್ಯಾರ್ಥಿಗಳು 06 ಜುಲೈ 2026 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ವಿದ್ಯಾರ್ಥಿಗಳ ಜನ್ಮ ದಿನಾಂಕವು 01-05-2015 ರಿಂದ 31-07-2017 ರ ನಡುವೆ ಇರಬೇಕೆಂಬ ನಿಯಮವಿದೆ. ಅರ್ಜಿ ಸಲ್ಲಿಸಲು ಜುಲೈ 31, 2026 ಕೊನೆಯ ದಿನಾಂಕವಾಗಿದ್ದು, ಆಸಕ್ತ ಪೋಷಕರು ಮತ್ತು ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಶೀಘ್ರದಲ್ಲೇ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ಆಯ್ಕೆ ಪರೀಕ್ಷೆಯು ನವೆಂಬರ್ 28, 2026 ರಂದು ನಡೆಯಲಿದ್ದು, ಪರೀಕ್ಷೆಯ ಫಲಿತಾಂಶವನ್ನು ಮಾರ್ಚ್ ಅಥವಾ ಏಪ್ರಿಲ್ 2027 ರಲ್ಲಿ ಪ್ರಕಟಿಸಲಾಗುವುದು.

ಇದನ್ನೂ ಓದಿ: Manipal Health Card-ಮಣಿಪಾಲ ಆರೋಗ್ಯ ಕಾರ್ಡ್-2026 ನೋಂದಣಿ ಆರಂಭ ಆಗಸ್ಟ್ 31ರವರೆಗೆ ಅವಕಾಶ!

ನವೋದಯ ಪ್ರವೇಶ ಪರೀಕ್ಷೆಯು ಒಟ್ಟು 100 ಅಂಕಗಳ 80 ಬಹುಆಯ್ಕೆ (MCQ) ಪ್ರಶ್ನೆಗಳನ್ನು ಒಳಗೊಂಡಿರಲಿದ್ದು, ಪರೀಕ್ಷೆ ಬರೆಯಲು 2 ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ಪರೀಕ್ಷೆಯಲ್ಲಿ ಮಾನಸಿಕ ಸಾಮರ್ಥ್ಯ, ಗಣಿತ ಹಾಗೂ ಭಾಷಾ ವಿಷಯಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಈ ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ (Negative Marking) ಇರುವುದಿಲ್ಲ ಎಂಬುದು ವಿದ್ಯಾರ್ಥಿಗಳಿಗೆ ದೊರೆಯುವ ಮುಖ್ಯ ಅನುಕೂಲವಾಗಿದೆ.

Navodaya Admission Eligibility Criteria-ಅರ್ಹತೆ ಮತ್ತು ವಯೋಮಿತಿ:

ವಿದ್ಯಾರ್ಥಿಯು ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅಭ್ಯರ್ಥಿಯ ಜನ್ಮ ದಿನಾಂಕವು 01-05-2015 ರಿಂದ 31-07-2017 ರ ಒಳಗಿರಬೇಕು.

ಜಿಲ್ಲಾವಾರು ಪ್ರವೇಶಾವಕಾಶ:

ವಿದ್ಯಾರ್ಥಿಯು ಪ್ರಸ್ತುತ ಯಾವ ಜಿಲ್ಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೋ, ಆ ನಿರ್ದಿಷ್ಟ ಜಿಲ್ಲೆಯಲ್ಲಿರುವ ನವೋದಯ ವಿದ್ಯಾಲಯಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: FID Update-ರೈತ ಬಾಂಧವರ ಗಮನಕ್ಕೆ: FID ಅನ್ನು ಕೇಂದ್ರ ಸರ್ಕಾರದ ಐಡಿಗೆ ಅಪ್ಡೇಟ್ ಮಾಡಲು ಸೂಚನೆ!

Exam Pattern-ಪರೀಕ್ಷೆಯ ಮಾದರಿ:

ಪರೀಕ್ಷೆಯು ಒಟ್ಟು 80 ಪ್ರಶ್ನೆಗಳು (100 ಅಂಕಗಳು) ಹಾಗೂ 2 ಗಂಟೆಗಳ ಅವಧಿಯನ್ನು ಹೊಂದಿರುತ್ತದೆ.

  • ಮಾನಸಿಕ ಸಾಮರ್ಥ್ಯ: 40 ಪ್ರಶ್ನೆಗಳು (50 ಅಂಕ)
  • ಗಣಿತ: 20 ಪ್ರಶ್ನೆಗಳು (25 ಅಂಕ)
  • ಭಾಷೆ: 20 ಪ್ರಶ್ನೆಗಳು (25 ಅಂಕ) (ವಿಶೇಷ ಸೂಚನೆ: ಪರೀಕ್ಷೆಯಲ್ಲಿ ಯಾವುದೇ ನೆಗೆಟಿವ್ ಮಾರ್ಕಿಂಗ್ ಇರುವುದಿಲ್ಲ)

Navodaya Admission Important Date-ಪ್ರಮುಖ ದಿನಾಂಕಗಳು:

  • ಅರ್ಜಿ ಸಲ್ಲಿಕೆ ಪ್ರಾರಂಭ: 06-07-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-07-2026
  • ಪ್ರವೇಶ ಪರೀಕ್ಷೆ ದಿನಾಂಕ: 28-11-2026
  • ಫಲಿತಾಂಶ ಪ್ರಕಟಣೆ: ಮಾರ್ಚ್ / ಏಪ್ರಿಲ್ 2027

ಇದನ್ನೂ ಓದಿ: Harvester Hub Scheme-ಕೃಷಿ ಇಲಾಖೆಯಿಂದ ಹಾರ್ವೆಸ್ಟರ್ ಖರೀದಿಗೆ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!

Navodaya Admission Online Application- ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:

ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿರುವ ಹಿರಿಯರಿಂದ ತಮ್ಮ ಮೊಬೈಲ್ ಅಥವಾ ಲ್ಯಾಪ್ ಟಾಪ್ ಮೂಲಕ ಕೆಳಗಿನ ವಿಧಾನವನ್ನು ಅನುಸರಿಸಿ ಸ್ವಂತ ತಾವೇ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

Step-1: ಮೊದಲಿಗೆ ಈ "Apply Now" ವೆಬ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ.

Step-2: ಇದಾದ ಬಳಿಕ ಇಲ್ಲಿ ಅಧಿಕೃತ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ ಇಲ್ಲಿ ಕೇಳುವ ಎಲ್ಲಾ ವಿವರವನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ Submit ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಿ.

ಇದನ್ನೂ ಓದಿ: GKVK Bakery Training-ಬೇಕರಿ ಟೆಕ್ನಾಲಜಿ ಸರ್ಟಿಫಿಕೇಟ್ ಕೋರ್ಸ್ ಪ್ರವೇಶಕ್ಕೆ ಅರ್ಜಿ ಆಹ್ವಾನ!

Required Documents-ಅರ್ಜಿ ಸಲ್ಲಿಸಲು ದಾಖಲೆಗಳು:

ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಕಡ್ಡಾಯವಾಗಿ ಹೊಂದಿರಬೇಕಾದ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಗಿನಂತಿದೆ:

  • ವಿದ್ಯಾರ್ಥಿಯ ಪೋಟೋ/Student Photo
  • ವಿದ್ಯಾರ್ಥಿಯ ಆಧಾರ್ ಕಾರ್ಡ/Aadhar
  • ವಿದ್ಯಾರ್ಥಿಯ ಸಿಹಿ ಪ್ರತಿ/Signature
  • ಪೋಷಕರ ಸಹಿ ಪ್ರತಿ/Parent Signature
  • ನಿವಾಸಿ ದೃಡೀಕರಣ ಪ್ರಮಾಣ ಪತ್ರ/Residential certificate
  • ವ್ಯಾಸಂಗ ಪ್ರಮಾಣ ಪತ್ರ/Study certificate

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: