Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!

January 3, 2026 | Siddesh
Online Mutation-ಉಚಿತವಾಗಿ ಮ್ಯುಟೇಷನ್ ಪಡೆಯಲು ಇಲ್ಲಿದೆ ವೆಬ್ಸೈಟ್ ಲಿಂಕ್!
Share Now:

ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಮ್ಯುಟೇಷನ್(Mutation) ಮತ್ತು ಜಮೀನಿನ ಮಾಲೀಕರ ವಿವರವನ್ನು ಉಚಿತವಾಗಿ ಒಂದೆರಡು ಕ್ಲಿಕ್ ನಲ್ಲಿ ತಮ್ಮ ಮೊಬೈಲ್ ನಲ್ಲೇ ನೋಡಲು ಅವಕಾಶವಿದ್ದು, ಈ ಕುರಿತು ಒಂದಿಷ್ಟು ಅಗತ್ಯ ಮಾಹಿತಿಯನ್ನು ಇಂದಿನ ಅಂಕಣದಲ್ಲಿ ಪ್ರಕಟಿಸಲಾಗಿದೆ.

ಕೃಷಿ ಜಮೀನಿಗೆ ಸಂಬಂಧಪಟ್ಟ ಪ್ರಮುಖ ದಾಖಲೆಗಳಲ್ಲಿ ಮ್ಯುಟೇಷನ್ ವಿವರ/ದಾಖಲೆಯು(Land Records) ಅತೀ ಮುಖ್ಯವಾಗಿದ್ದು ಬ್ಯಾಂಕ್ ನಲ್ಲಿ ಸಾಲವನ್ನು ಪಡೆಯಲು ಮತ್ತು ಜಮೀನಿ ಖರೀದಿ/ಮಾರಾಟ ಸಮಯದಲ್ಲಿ ಈ ದಾಖಲೆಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ, ಈ ದಾಖಲೆಯಲ್ಲಿ ಜಮೀನಿನ ಮೇಲೆ ಸಾಲವನ್ನು ಪಡೆದಿರುವ ವಿವರವನ್ನು ನಮೂದಿಸಲಾಗಿರುತ್ತದೆ.

ಇದನ್ನೂ ಓದಿ: LPG Cylinder Price Hike-ಗ್ಯಾಸ್ ಸಿಲಿಂಡರ್ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ದರ ವಿವರ!

ಇಂದಿನ ಲೇಖನದಲ್ಲಿ ರೈತರು ತಮ್ಮ ಮೊಬೈಲ್ ನಲ್ಲಿ ಉಚಿತವಾಗಿ ಮ್ಯುಟೇಷನ್(Free Mutation) ಮತ್ತು ಜಮೀನಿನ ಮಾಲೀಕರ ವಿವರವನ್ನು ಹೇಗೆ ಪಡೆಯಬಹುದು? ಇದಕ್ಕಾಗಿ ಅನುಸರಿಸಬೇಕಾದ ವಿಧಾನಗಳು ಯಾವುವು? ಈ ಕುರಿತು ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ಪ್ರಕಟಿಸಲಾಗಿದೆ.

Free RTC Details-ಉಚಿತವಾಗಿ ಜಮೀನಿನ ಪಹಣಿ ವಿವರವನ್ನು ಪಡೆಯಬಹುದು:

ರೈತರು ತಮ್ಮ ಜಮೀನಿನ ಪಹಣಿ ವಿವರವನ್ನು ಪಡೆಯಲು ಸರ್ವೆ ನಂಬರ್ ಮರೆತುಹೋಗಿದ್ದರೆ ಈ ಕೆಳಗಿನ ವಿಧಾನವನ್ನು ಅನುಸರಿಸಿ ನಿಮ್ಮ ಜಮೀನಿನ ಸರ್ವೆ ನಂಬರ್ ವಿವರವನ್ನು ಪಡೆದು ಪಹಣಿಯಲ್ಲಿರುವ ಮಾಹಿತಿಯನ್ನು ಒಂದೆರಡು ಕ್ಲಿಕ್ ನಲ್ಲಿ ಸುಲಭವಾಗಿ ನೋಡಬಹುದು.

Step-1: ಕೃಷಿಕರು ಮೊದಲಿಗೆ ಈ RTC Details Check ಲಿಂಕ್ ಮೇಲೆ ಒತ್ತಿ ಕಂದಾಯ ಇಲಾಖೆಯ ಅಧಿಕೃತ Landrecords.karnataka.in ವೆಬ್ಸೈಟ್ ಅನ್ನು ಭೇಟಿ ಮಾಡಿ.

Step-2: ಇದಾದ ಬಳಿಕ ಈ ಪೇಜ್ ನಲ್ಲಿ "Invalid User. Please verify captcha" ಎನ್ನುವ ಸಂದೇಶ ತೋರಿಸುತ್ತದೆ ಇಲ್ಲಿ "Ok" ಎಂದು ಕ್ಲಿಕ್ ಮಾಡಿ "Im not a robot" ಬಟನ್ ಮೇಲೆ ಕ್ಲಿಕ್ ಮಾಡಿ ಮುಂದಿನ ಪೇಜ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Kuvempu Felloship-ಕುವೆಂಪು ಫೆಲೋಷಿಪ್‍ ಪಡೆಯಲು ಅರ್ಜಿ ಆಹ್ವಾನ! ಫೆಲೋಷಿಪ್ ಮೊತ್ತ ರೂ 3 ಲಕ್ಷ!

Online Mutation

Step-3: ನಂತರ ಈ ಪುಟದಲ್ಲಿ ಒಟ್ಟು 3 ಆಯ್ಕೆಗಳು ಗೋಚರಿಸುತ್ತವೆ "ಸರ್ವೆ ನಂಬರಿನ ಪ್ರಕಾರ ಭೂ ದಾಖಲೆಗಳನ್ನು ಹುಡುಕಿ" "ನಿಮ್ಮ ಸ್ವಾಧೀನದಾರರ ಭೂ ದಾಖಲೆಗಳನ್ನು ಹುಡುಕಿ" "ನಿಮ್ಮ ನೋಂದಣಿ ಸಂಖ್ಯೆ ಪ್ರಕಾರ ಭೂ ದಾಖಲೆಗಳನ್ನು ಹುಡುಕಿ" ಈ ಆಯ್ಕೆಯಲ್ಲಿ ಒಂದನ್ನು ಕ್ಲಿಕ್ ಮಾಡಿಕೊಂಡು ನಿಮ್ಮ ಜಿಲ್ಲೆ,ತಾಲೂಕು,ಹೋಬಳಿ,ಹಳ್ಳಿಯ ಹೆಸರನ್ನು ಆಯ್ಕೆ ಮಾಡಿ "ನಿಮ್ಮ ವಿವರಗಳನ್ನು ನೋಡಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ಜಮೀನಿನ ಮಾಲೀಕರ ಹೆಸರು, ವಿಸ್ತೀರ್ಣ ಸೇರಿದಂತೆ ಇತ್ಯಾದಿ ಸಂಪೂರ್ಣ ಪಹಣಿ ಮಾಹಿತಿಯನ್ನು ನೋಡಬಹುದು.

ಗಮನಿಸಿ: ನಿಮಗೆ ಸರ್ವೆ ನಂಬರ್ ಗೊತ್ತಿಲ್ಲದಿದ್ದಲ್ಲಿ "ನಿಮ್ಮ ಸ್ವಾಧೀನದಾರರ ಭೂ ದಾಖಲೆಗಳನ್ನು ಹುಡುಕಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಿಮ್ಮ ಜಮೀನಿನ ಪಹಣಿ ವಿವರವನ್ನು ಚೆಕ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: Forgot UAN Number-ನಿಮ್ಮ UAN ಸಂಖ್ಯೆ ಮರೆತಿದ್ದೀರಾ? ಇಲ್ಲಿದೆ ನೋಡಿ ಮರುಪಡೆಯಲು ಸಿಂಪಲ್ ಸ್ಟೆಪ್ಸ್!

Online Mutation-ಉಚಿತವಾಗಿ ಮ್ಯುಟೇಷನ್ ಚೆಕ್ ಮಾಡುವ ವಿಧಾನ ಹೇಗೆ?

ರೈತರು ಈ ಕೆಳಗೆ ವಿವರಿಸಿರುವ ಹಂತಗಳನ್ನು ಅನುಸರಿಸಿ ಕಂದಾಯ ಇಲಾಖೆಯ ಅಧಿಕೃತ ಜಾಲತಾಣವನ್ನು ಪ್ರವೇಶ ಮಾಡಿ ಜಮೀನಿನ ಮ್ಯುಟೇಷನ್ ಮಾಹಿತಿಯನ್ನು ಉಚಿತವಾಗಿ ಚೆಕ್ ಮಾಡಿಕೊಳ್ಳಬಹುದು.

Step-1: ಮೊದಲ ಹಂತದಲ್ಲಿ ಈ Online Mutation ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ landrecords.karnataka.gov.in ವೆಬ್ಸೈಟ್ ಅನ್ನು ಪ್ರವೇಶ ಮಾಡಬೇಕು.

ಇದನ್ನೂ ಓದಿ: Grama One-ಗ್ರಾಮ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ!

Mutation

Step-2: ನಂತರ ಈ ಪೇಜ್ ನಲ್ಲಿ ನಿಮ್ಮ ಜಿಲ್ಲೆ/ತಾಲ್ಲೂಕು/ಹೋಬಳಿ/ಗ್ರಾಮ ಮತ್ತು ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್ ಅನ್ನು ನಮೂದಿಸಿ ಬಳಿಕ ಈ ಪೇಜ್ ನ ಮಧ್ಯದಲ್ಲಿ ಕಾಣಿಸುವ "ನಿಮ್ಮ ಭೂಮಿ ಮ್ಯುಟೇಷನ್ ವಿವರಗಳನ್ನು ನೋಡಿ" ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ನಮೂದಿಸಿರುವ ಸರ್ವೆ ನಂಬರಿನ ಮ್ಯುಟೇಷನ್ ವಿವರ ತೆರೆದುಕೊಳ್ಳುತ್ತದೆ.

ಇದನ್ನೂ ಓದಿ: Milk Payment Status-ನಿಮ್ಮ ಹಾಲಿನ ಲೆಕ್ಕ ಈಗ ನಿಮ್ಮ ಬೆರಳ ತುದಿಯಲ್ಲಿ! ಇಲ್ಲಿದೆ ಮೊಬೈಲ್ ಅಪ್ಲಿಕೇಶನ್!

Karnataka Landrecords-ಒಂದೆರಡು ಕ್ಲಿಕ್ ನಲ್ಲಿ ಜಮೀನಿನ ಮಾಲೀಕರ ವಿವರ ಪಡೆಯಿರಿ:

ಕೃಷಿ ಜಮೀನಿನ ಮಾಲೀಕರ ವಿವರ ಮತ್ತು ಜಮೀನಿನ ಸರ್ವೆ ನಂಬರ್ ಹಿಸ್ಸಾ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ಸೇರಿದಂತೆ ಇನ್ನಿತರೆ ಎಲ್ಲಾ ಮಾಹಿತಿಯನ್ನು ಇದೇ ವೆಬ್ಸೈಟ್ ನಲ್ಲಿ "ಸರ್ವೆ ನಂಬರಿನ ಪ್ರಕಾರ ಭೂ ದಾಖಲೆಗಳನ್ನು ಹುಡುಕಿ" ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಜಮೀನಿನ ಸರ್ವೆ ನಂಬರ್ ನಮೂದಿಸಿ ಈ ಮಾಹಿತಿಯನ್ನು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: