ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಸಂಸ್ಥೆಯಿಂದ ಮೋಟರ್ ರಿವೈಂಡಿಂಗ್(Motor rewinding training) ಮತ್ತು ಪಂಪ್ ಸೇಟ್ ರಿಪೇರಿ(Pumpset Repair), ಕಂಪ್ಯೂಟರ್ ಡಿ.ಟಿ.ಪಿ(Computer DTP course) ತರಬೇತಿಯನ್ನು ಉಚಿತವಾಗಿ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಪ್ರಸ್ತುತ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಯು ಗ್ರಾಮೀಣ ಮತ್ತು ನಗರ ಭಾಗದಲ್ಲಿ ದಿನೇ ದಿನೇ ಏರುಗತಿಯಲ್ಲಿ ಸಾಗುತ್ತಿದ್ದು ಇದಕ್ಕೆ ಸೂಕ್ತ ಪರಿಹಾರವನ್ನು ಒದಗಿಸಲು ಕೆನರಾ ಬ್ಯಾಂಕ್(Canara Bank) ದೇಶಪಾಂಡೆ ಆರ್‌ಸೆಟ್ ತರಬೇತಿ(Canara bank rudseti) ಸಂಸ್ಥೆಯಿಂದ ಕಾಲ ಕಾಲಕ್ಕೆ ಸ್ವಂತ ಉದ್ದಿಮೆಯನ್ನು ಆರಂಭಿಸಲು ಆಸಕ್ತಿಯಿರುವ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿ ವಿವಿಧ ಬಗ್ಗೆಯ ಸ್ವ-ಉದ್ಯೋಗ ತರಬೇತಿಗಳನ್ನು ನೀಡಿ ಸ್ವ-ಉದ್ಯೋಗವನ್ನು ಆರಂಭಿಸಲು ಸೂಕ್ತ ಮಾರ್ಗದರ್ಶನ ನೀಡಲಾಗುತ್ತದೆ.
ಇದನ್ನೂ ಓದಿ: Raagi Kharidi Kendra-ಕ್ವಿಂಟಾಲ್ ಗೆ ₹4,290 ರೂ ರಂತೆ ರಾಗಿ ಖರೀದಿಗೆ ಕೇಂದ್ರ ಆರಂಭ!
ಮೋಟರ್ ರಿವೈಂಡಿಂಗ್ ಮತ್ತು ಪಂಪ್ ಸೇಟ್ ರಿಪೇರಿ(Pumpset Repair) ಹಾಗೂ ಕಂಪ್ಯೂಟರ್ ಡಿ.ಟಿ.ಪಿ ತರಬೇತಿಯನ್ನು(Computer DTP Training) ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? ಇತ್ಯಾದಿ ಸಂಪೂರ್ಣ ವಿವರವನ್ನು ಈ ಕೆಳಗೆ ವಿವರಿಸಲಾಗಿದೆ.
Who Can Apply-ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು:
- ಅರ್ಜಿದಾರ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಅಭ್ಯರ್ಥಿಯ ವಯಸ್ಸು 19 ರಿಂದ 45 ವಯಸ್ಸಿನವರಾಗಿರಬೇಕು.
- ಅಭ್ಯರ್ಥಿಗೆ ತರಬೇತಿಯನ್ನು ಪಡೆದ ಬಳಿಕ ಸ್ವಂತ ಉದ್ಯೋಗವನ್ನು ಆರಂಭಿಸುವ ಇಚ್ಚೆಯನ್ನು ಹೊಂದಿರಬೇಕು.
- ಬಿಪಿಎಲ್ ಕಾರ್ಡ ಹೊಂದಿರುವ ಗ್ರಾಮೀಣ ಭಾಗದ ಅಭ್ಯರ್ಥಿಗೆ ಮೊದಲ ಅಭ್ಯತೆಯನ್ನು ನೀಡಲಾಗುತ್ತದೆ.
- ಯುವಕರಿಗೆ ಇಲೆಕ್ಟಿಕ್ ಮೋಟರ್ ರಿವೈಂಡಿಂಗ್ ಮತ್ತು ಪಂಪಸೇಟ್ ರಿಪೇರಿ ಉಚಿತ ತರಬೇತಿ ಹಾಗೂ ಯುವಕ, ಯುವತಿಯರಿಗೆ ಕಂಪ್ಯೂಟರ್ ಡಿ.ಟಿ.ಪಿ ತರಬೇತಿ ಪಡೆಯಲು ಅವಕಾಶವಿರುತ್ತದೆ.
ಇದನ್ನೂ ಓದಿ: BPL Ration Card- ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ ಪತ್ತೆಗೆ ನೂತನ ಕ್ರಮ!

Pumpset Repair-ತರಬೇತಿಯು ಸಂಪೂರ್ಣ ಉಚಿತವಾಗಿರುತ್ತದೆ:
ಈ ತರಬೇತಿಯನ್ನು ಪಡೆಯಲು ಅರ್ಜಿ ಸಲ್ಲಿಸಿ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರದಿಂದಲೇ ಉಚಿತ ಊಟ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ.
Motor rewinding training-ಯಾವೆಲ್ಲ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ?
1) ಮೋಟರ್ ರಿವೈಂಡಿಂಗ್/Motor rewinding training
2) ಪಂಪ್ ಸೇಟ್ ರಿಪೇರಿ/Pumpset Repair
3) ಕಂಪ್ಯೂಟರ್ ಡಿ.ಟಿ.ಪಿ ತರಬೇತಿ/Computer DTP course
ಇದನ್ನೂ ಓದಿ: Business loan-ಸ್ವಂತ ಉದ್ದಿಮೆಯನ್ನು ಮಾಡಲು 15 ಲಕ್ಷ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ!
Training Details-ತರಬೇತಿಯಲ್ಲಿ ಯಾವೆಲ್ಲ ವಿಷಯಗಳ ಕುರಿತು ಮಾಹಿತಿ ತಿಳಿಸಲಾಗುತ್ತದೆ?
ತರಬೇತಿಯಲ್ಲಿ ಕೌಶಲ್ಯ, ಸಾಧನ ಪ್ರೇರಣಾ ತರಬೇತಿ, ಉದ್ಯಮಶೀಲತೇಯ ದಕ್ಷ ಗುಣಗಳು, ಹೊಸ ಉದ್ಯಮದ ಸ್ಥಾಪನೆ ಬಗ್ಗೆ ಮಾಹಿತಿ, ಮಾರುಕಟ್ಟೆ ಸಮೀಕ್ಷೆ, ಮಾರಾಟ ತಂತ್ರಗಳು, ಯಶ್ವಸಿ ಉದ್ಯಮಗಳಿಂದ ಅನುಭವ ಹಂಚಿಕೆ. ಕ್ಷೇತ್ರ ಭೇಟಿ, ಸಾಫ್ಟ್ ಸ್ಕಿಲ್ಸ್, ಯೋಗ ತರಬೇತಿ, ಬ್ಯಾಂಕಿನಿಂದ ಸಾಲ ಪಡೆದು ಸ್ವಉದ್ಯೋಗ ಪ್ರಾಂಭಿಸಲು ಬೇಕಾದ ಜ್ಞಾನ, ಸರ್ಕಾರಿ ಯೋಜನೆಗಳು ಮತ್ತು ಯೋಜನಾ ವರದಿ ತಯಾರಿಕೆ ಇನ್ನಿತರ ಮಾಹಿತಿಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧಿಕೃತ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
Training center Address-ತರಬೇತಿ ನಡೆಯುವ ಸ್ಥಳ:
ಹಳಿಯಾಳದ ಕೆನರಾ ಬ್ಯಾಂಕ್ ದೇಶಪಾಂಡೆ ಆರ್‌ಸೆಟ್ ತರಬೇತಿ ಕೇಂದ್ರದಲ್ಲಿ ಈ ಮೇಲಿನ ತರಬೇತಿಗಳು ನಡೆಯಲಿವೆ.
How To Apply For Free Training-ಅರ್ಜಿಯನ್ನು ಸಲ್ಲಿಸುವುದು ಹೇಗೆ?
ಆಸ್ತಕ ಅರ್ಜಿದಾರರು Apply Now https://forms.gle/F72vCGsTHBXeYh8i8 ಇಲ್ಲಿ ಕ್ಲಿಕ್ ಮಾಡಿ ಗೂಗಲ್ ಪಾರ್ಮ್ ಅನ್ನ ತಮ್ಮ ಮೊಬೈಲ್ ಮೂಲಕ ಅಗತ್ಯ ವಿವರವನ್ನು ಭರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸಂಖ್ಯೆ 8970145354, 9483485489, 9482188780 ಈ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮುಂಚಿತವಾಗಿ ತರಬೇತಿಯಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಳ್ಳಬಹುದು.
Free Training Topics Details-ಇತರ ತರಬೇತಿಗಳ ವಿವರ ಹೀಗಿದೆ:
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ (10 ದಿನ), ಅಗರಬತ್ತಿ ತಯಾರಿಕೆ (10 ದಿನ), ಬಿದಿರು ವಸ್ತುಗಳಿಂದ ಅಲಂಕಾರಿಕ ವಸ್ತುಗಳ ತಯಾರಿಕೆ (13 ದಿನ), ಲಘು ಮೋಟಾರ ವಾಹನ ಚಾಲನೆ (LMV) (30 ದಿನ), ತರಕಾರಿಗಳ ನರ್ಸರಿ , ನಿರ್ವಹಣೆ ಹಾಗೂ ಬೆಳೆಸುವಿಕೆ (10 ದಿನ), ಟ್ರಾವೆಲ್ ಮತ್ತು ಟೂರಿಸ್ಟ್ ಗೈಡ್ (10 ದಿನ), ಜೆ.ಸಿ.ಬಿ ಚಾಲನೆ ತರಬೇತಿ (30 ದಿನ), ಕಿರಾಣಿ ವ್ಯಾಪಾರಸ್ಥರಿಗೆ ಅಭಿವೃದ್ಧಿ ಹೊಂದುವ ತರಬೇತಿ (06 ದಿನ), ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ (10 ದಿನ), ಮೊಬೈಲ ರಿಪೇರಿ ತರಬೇತಿ (30 ದಿನ), ಸಣ್ಣ ಉದ್ಯಮಿಗಳಿಗಾಗಿ ಉದ್ಯಮಶೀಲತೆ ಅಭಿವೃದ್ಧಿ ತರಬೇತಿ (13 ದಿನ)
ವಾಣಿಜ್ಯ ತೋಟಗಾರಿಕೆ ತರಬೇತಿ (10 ದಿನ), ಇಲೆಕ್ಟ್ರಿಕ ಮೋಟಾರ ರಿವೈನ್ಡಿಂಗ್ (30 ದಿನ), ದ್ವಿಚಕ್ರ ವಾಹನ ದುರಸ್ತಿ ತರಬೇತಿ (30 ದಿನ), ಹೌಸ್ ವಯರಿಂಗ್ (30 ದಿನ), ಟಿ.ವಿ ರಿಪೇರಿ (30 ದಿನ)
ರೆಫ್ರಿಜರೇಟರ್ ಮತ್ತು ಏರ್ ಕಂಡೀಷನಿಂಗ್ (30 ದಿನ), ವೆಲ್ಡಿಂಗ್ ಮತ್ತು ಫ್ಯಾಬ್ರಿಕೇಷನ್ (30 ದಿನ), ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ (30 ದಿನ), ಬ್ಯುಟಿ ಪಾರ್ಲರ ನಿರ್ವಹಣೆ (30 ದಿನ)
ಸೋಲಾರ ಟೆಕ್ನಿಷಿಯನ (30 ದಿನ), ಮಹಿಳೆಯರಿಗಾಗಿ ಹೋಲಿಗೆ ತರಬೇತಿ (30 ದಿನ), ಜೂಟ ಬ್ಯಾಗ ತಯಾರಿಕೆ (13 ದಿನ), ಸಮಗ್ರ ಕೃಷಿ ಉದ್ಯಮ (13 ದಿನ), ಕೋಳಿ ಸಾಕಾಣಿಕೆ (10 ದಿನ)
ಗ್ರಹ ಬಳಕೆಯ ವಿದ್ಯುತ್ ಉಪಕರಣಗಳ ದುರಸ್ತಿ (30 ದಿನ), ಕಂಪ್ಯೂಟರ್ ಹಾರ್ಡವೇರ್ ಮತ್ತು ನೆಟ್ವರ್ಕಿಂಗ್ (45 ದಿನ), ಕಂಪ್ಯೂಟರೈಸ್ಡ್ ಟ್ಯಾಲಿ (30 ದಿನ)
ಕಂಪ್ಯೂಟರ್ ಡಿ.ಟಿ.ಪಿ (45 ದಿನ), ಹಪ್ಪಳ, ಸಂಡಿಗೆ ಮತ್ತು ಮಸಾಲಾ ಪೌಡರ ತಯಾರಿಕೆ ತರಬೇತಿ (13 ದಿನ), ಜೇನು ಕೃಷಿ (10 ದಿನ), ವಸ್ತ್ರ ಚಿತ್ರಕಲಾ ಉದ್ಯಮ (30 ದಿನ), ಸಿಸಿಟಿವಿ ಕ್ಯಾಮೆರಾ ದುರಸ್ತಿ (13 ದಿನ), ಬಿಲ್ಡಿಂಗ್ ಪೇಂಟಿಂಗ್ (10 ದಿನ), ಕೃತಕ ಅಭರಣ ತಯಾರಿಕೆ ತರಬೇತಿ (13 ದಿನ)
For More Information-ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಲು ಅಧಿಕೃತ ವೆಬ್ಸೈಟ್ ಲಿಂಕ್- CLICK HERE