Free tailoring training- 30 ದಿನದ ಉಚಿತ ಟೇಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಬ್ಯಾಂಕ್ ಮೂಲಕ ಸಾಲ ಸೌಲಭ್ಯ!

ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ವಿಜಯಪುರ ಕೇಂದ್ರದಿಂದ ಉಚಿತವಾಗಿ ಹೊಲಿಗೆ ತರಬೇತಿ(Free tailoring training) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Free tailoring training- 30 ದಿನದ ಉಚಿತ ಟೇಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ! ಬ್ಯಾಂಕ್ ಮೂಲಕ ಸಾಲ ಸೌಲಭ್ಯ!

ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ವಿಜಯಪುರ ಕೇಂದ್ರದಿಂದ ಉಚಿತವಾಗಿ ಹೊಲಿಗೆ ತರಬೇತಿ(Free tailoring training) ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು? ತರಬೇತಿ ನಡೆಯುವ ಕೇಂದ್ರದ ವಿವರ ಇತ್ಯಾದಿ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Village administrative officer- 1000 ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಅರ್ಜಿ! ಅರ್ಜಿ ಸಲ್ಲಿಸಲು ಯಾವೆಲ್ಲ ದಾಖಲಾತಿಗಳು ಬೇಕಾಗುತ್ತದೆ?

Free tailoring training- ಈ ತರಬೇತಿಯನ್ನು ಪಡೆಯಲು ಯಾರೆಲ್ಲ ಅರ್ಜಿ ಸಲ್ಲಿಸಬಹುದು?

1) ಅರ್ಜಿದಾರರ ವಯಸ್ಸು 18 ರಿಂದ 45 ವರ್ಷದ ಒಳಗಿರಬೇಕು. 

2) ಕನ್ನಡ ಬಾಷೆಯನು ಓದಲು ಮತ್ತು ಬರೆಯಲು ಬರಬೇಕು. 

3) ಅರ್ಜಿದಾರ ಅಭ್ಯರ್ಥಿಯು ಸಂಸ್ಥೆಯಿಂದ ತರಬೇತಿ ಪಡೆದ ಬಳಿಕ ಸ್ವ-ಉದ್ಯೋಗ ಆರಂಭಿಸಲು ಆಸಕ್ತಿಯನ್ನು ಹೊಂದಿರಬೇಕು.

4) ಗ್ರಾಮೀಣ ಭಾಗದಲ್ಲಿ ವಾಸಿರುವ ಬಿ.ಪಿ.ಎಲ್ ಕಾರ್ಡ ಹೊಂದಿರುವ ಅಭ್ಯರ್ಥಿಗಳಿಗೆ ಈ ತರಬೇತಿಯಲ್ಲಿ ಭಾಗವಹಿಸಲು ಮೊದಲ ಅದ್ಯತೆ ನೀಡಲಾಗುತ್ತದೆ ಎಂದು ತರಬೇತಿ ನೀಡುವ ಸಂಸ್ಥೆಯ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

5) ಈ ತರಬೇತಿಯು ಪುರುಷರಿಗೆ ಆಯೋಜನೆ ಮಾಡಲಾಗಿದ್ದು ಮಹಿಳೆ ಅಭ್ಯರ್ಥಿಗಳು ಒಮ್ಮೆ ಈ ಲೇಖನದಲ್ಲಿ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ನಿಮಗೆ ಯಾವ ದಿನ ತರಬೇತಿ ಆಯೋಜನೆ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ: Why Link Aadhaar to RTC-2024: ಪಹಣಿಗೆ ಆಧಾರ್ ಲಿಂಕ್ ಏಕೆ ಮಾಡಬೇಕು? ಆಧಾರ್ ಲಿಂಕ್ ಅಗಿರುವುದನ್ನು ಚೆಕ್ ಮಾಡುವುದು ಹೇಗೆ?

ಈ ತರಬೇತಿಯು ಊಟ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿದೆ:

ಈ ತರಬೇತಿಯು ಒಟ್ಟು 30 ದಿನ ಆಯೋಜನೆ ಮಾಡಲಾಗಿದ್ದು ತರಬೇತಿ ಕೇಂದ್ರದಿಂದ ತರಬೇತಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳಿಗೆ  ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇರುತ್ತದೆ ಮತ್ತು ತರಬೇತಿಯು ಸಂಪೂರ್ಣ ಉಚಿತವಾಗಿದ್ದು ಯಾವುದೇ ಶುಲ್ಕ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ತಿಳಿಸಲಾಗಿದೆ.

Bank loan for business- ಬ್ಯಾಂಕ್ ಮೂಲಕ ಸಾಲ ಸೌಲಭ್ಯ:

ಈ ತರಬೇತಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ 30 ದಿನದ ತರಬೇತಿಯಲ್ಲಿ ಟೇಲರಿಂಗ್ ಕಳಿಸುವುದರ ಜೊತೆ ಜೊತೆಗೆ ಈ ಸ್ವ-ಉದ್ಯೋಗವನ್ನು ಆರಂಭಿಸಲು ಬ್ಯಾಂಕ್ ಮೂಲಕ ಯಾವೆಲ್ಲ ಯೋಜನೆಯಡಿ ಸಹಾಯಧನದಲ್ಲಿ ಸಾಲ ಸೌಲಭ್ಯವನ್ನು ಪಡೆಯಬಹುದು ಎನ್ನುವ ಮಾಹಿತಿಯನ್ನು ಸಹ ನೀಡಲಾಗುತ್ತದೆ.

ಇದನ್ನೂ ಓದಿ: PDO job Application: PDO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವೆಬ್ಸೈಟ್ ಲಿಂಕ್ ಬಿಡುಗಡೆ!

Training Application-ತರಬೇತಿ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ:

ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಜಯಪುರ ಕೇಂದ್ರ ಈ 9739511914, 9731065632, 7483987824, 9480078829 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಂಡು ತರಬೇತಿಯಲ್ಲಿ ಭಾಗವಹಿಸಬಹುದು.

Training date- ತರಬೇತಿ ನಡೆಯುವ ದಿನಾಂಕ:

30 ದಿನದ ಉಚಿತ ಟೇಲರಿಂಗ್ ತರಬೇತಿಯು ದಿನಾಂಕ: 26-04-2024 ರಿಂದ ಆರಂಭವಾಗಿ 25-05-2024 ಕ್ಕೆ ಮುಕ್ತಾಯವಾಗುತ್ತದೆ.

ಇದನ್ನೂ ಓದಿ: Co-operative Bank Recruitment-2024: ಸಹಕಾರಿ ಬ್ಯಾಂಕ್ ನಲ್ಲಿ ಉದ್ಯೋಗವಕಾಶ! 19 ಏಪ್ರಿಲ್ 2024 ಅರ್ಜಿ ಸಲ್ಲಿಸಲು ಕೊನೆಯ ದಿನ!

Training Centres Address- ತರಬೇತಿ ಕೇಂದ್ರದ ವಿಳಾಸ:

ರುಡ್ ಸೆಟ್ ಸ್ವ ಉದ್ಯೋಗ ತರಬೇತಿ ಸಂಸ್ಥೆ,ರಾಘವೇಂದ್ರ ಕಾಲೋನಿ, ವಿಜಯಪುರ.