Gruhalakshmi Biometric-ಗೃಹಲಕ್ಷ್ಮಿಯರೇ ಗಮನಿಸಿ: ಇನ್ನು ಮುಂದೆ ಬಯೋಮೆಟ್ರಿಕ್ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್!

May 28, 2026 | Siddesh
Gruhalakshmi Biometric-ಗೃಹಲಕ್ಷ್ಮಿಯರೇ ಗಮನಿಸಿ: ಇನ್ನು ಮುಂದೆ ಬಯೋಮೆಟ್ರಿಕ್ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್!
Share Now:

ಬೆಂಗಳೂರು: ರಾಜ್ಯ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾದ 'ಗೃಹಲಕ್ಷ್ಮಿ' ಯೋಜನೆಯಲ್ಲಿ ತಂತ್ರಜ್ಞಾನ ಆಧಾರಿತ ಪ್ರಮುಖ ಬದಲಾವಣೆಯೊಂದನ್ನು ತರಲು ಸರ್ಕಾರ ಮುಂದಾಗಿದೆ. ಯೋಜನೆಯ ದುರುಪಯೋಗವನ್ನು ತಡೆಗಟ್ಟಲು ಹಾಗೂ ಅನರ್ಹರಿಗೆ ಹಣ ಸಂದಾಯವಾಗುವುದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಇನ್ನು ಮುಂದೆ 'ಒನ್-ಟೈಮ್ ಬಯೋಮೆಟ್ರಿಕ್' (Gruhalakshmi One-time Biometric) ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಪ್ರಸ್ತುತ ಯೋಜನೆಯ ಲಾಭ ಪಡೆಯುತ್ತಿರುವ ಎಲ್ಲಾ ಫಲಾನುಭವಿಗಳು ತಮ್ಮ ಖಾತೆಯನ್ನು ಬಯೋಮೆಟ್ರಿಕ್ ಹಾಗೂ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆಯೊಂದಿಗೆ ಮರು-ನೋಂದಣಿ (ನವೀಕರಣ) ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನವೀಕರಿಸದಿದ್ದರೆ ಬ್ಯಾಂಕ್ ಖಾತೆಗೆ ಮಾಸಿಕ ಧನಸಹಾಯ ಜಮೆಯಾಗುವುದಿಲ್ಲ. ಈ ಕುರಿತು ರಾಜ್ಯ ಸರ್ಕಾರವು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಿದೆ.

ಈ ಕಠಿಣ ಕ್ರಮಕ್ಕೆ ಮುಖ್ಯ ಕಾರಣ ಗೃಹಲಕ್ಷ್ಮಿ ಯೋಜನೆಯ(Gruhalakshmi Yojana)ಲಕ್ಷಾಂತರ ಫಲಾನುಭವಿಗಳಲ್ಲಿ ಕೆಲವರು ನಿಧನರಾಗಿದ್ದರೂ ಅವರ ಖಾತೆಗಳಿಗೆ ಹಣ ಜಮೆಯಾಗುತ್ತಿರುವುದು ಮತ್ತು ಸುಮಾರು 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿದಾರರು ಯೋಜನೆಯ ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅಷ್ಟೇ ಅಲ್ಲದೆ, ಕೆಲವು ಫಲಾನುಭವಿಗಳ ಖಾತೆಗೆ ಸಂದಾಯವಾಗುವ ಗೃಹಲಕ್ಷ್ಮಿ ಹಣವು ಅವರು ಈ ಹಿಂದೆ ಮಾಡಿರುವ ಸಾಲದ ಖಾತೆಗಳಿಗೆ ಜಮೆಯಾಗುತ್ತಿತ್ತು. ಇನ್ನು ಕೆಲವರ ಮೊಬೈಲ್ ಸಂಖ್ಯೆಗಳೂ ಸಹ ಬದಲಾಗಿವೆ. ಹೀಗಾಗಿ, ಕೇವಲ ಅರ್ಹ ಫಲಾನುಭವಿಗಳಿಗೆ ಮಾತ್ರ ಯೋಜನೆಯ ಲಾಭ ಸಿಗಲಿ ಎಂಬ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯ ಖಾತೆಗಳನ್ನು ಮತ್ತೊಮ್ಮೆ ನವೀಕರಣ ಮಾಡಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ಇದನ್ನೂ ಓದಿ: Free Photography Training-ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಯಿಂದ ಉಚಿತ ಫೋಟೋಗ್ರಫಿ ತರಬೇತಿ! ಜೂನ್ 3 ರೊಳಗೆ ಅರ್ಜಿ ಸಲ್ಲಿಸಿ!

ಆರಂಭದಲ್ಲಿ, ನಿಧನರಾದವರ ಖಾತೆಗಳಿಗೆ ಹಣ ಹೋಗುವುದನ್ನು ತಡೆಯಲು ಗೃಹಲಕ್ಷ್ಮಿ ಫಲಾನುಭವಿಗಳು ಬದುಕಿರುವ ಬಗ್ಗೆ 'ಜೀವಿತ ಪ್ರಮಾಣ ಪತ್ರ' (Life Certificate) ಸಲ್ಲಿಸುವಂತೆ ನಿಯಮ ರೂಪಿಸಲು ನಿರ್ಧರಿಸಲಾಗಿತ್ತು. ಆದರೆ, ಇದಕ್ಕೆ ಸಾರ್ವಜನಿಕ ವಲಯದಿಂದ ತೀವ್ರ ವಿರೋಧ ಮತ್ತು ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ, ಸರ್ಕಾರವು ಆ ನಿರ್ಧಾರದಿಂದ ಹಿಂದೆ ಸರಿದಿದೆ. ಅದಕ್ಕೆ ಪರ್ಯಾಯವಾಗಿ ಮಹಿಳೆಯರಿಗೆ ಯಾವುದೇ ತೊಂದರೆಯಾಗದಂತೆ ಅತ್ಯಂತ ಸರಳವಾದ 'ಒನ್-ಟೈಮ್ ಬಯೋಮೆಟ್ರಿಕ್' ವ್ಯವಸ್ಥೆಯನ್ನು ಜಾರಿಗೆ ತರಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Laxmi Hebbalkar) ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.

Gruhalakshmi Beneficiary Biometric-ಒನ್-ಟೈಮ್ ಬಯೋಮೆಟ್ರಿಕ್ ಕಡ್ಡಾಯ:

ಯೋಜನೆಯ ಲಾಭ ಪಡೆಯುತ್ತಿರುವ ಪ್ರತಿಯೊಬ್ಬ ಗೃಹಲಕ್ಷ್ಮಿಯೂ ಕಡ್ಡಾಯವಾಗಿ ಒಂದು ಬಾರಿ ತಮ್ಮ ಬಯೋಮೆಟ್ರಿಕ್ ನೀಡಿ ಮರು-ನೋಂದಣಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಹಣ ಬಿಡುಗಡೆ ತಾನಾಗಿಯೇ ನಿಲ್ಲುತ್ತದೆ.

ಇದನ್ನೂ ಓದಿ: Ration Distribution-ರಾಜ್ಯದಲ್ಲಿ ರೇಷನ್ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿಗಳ ಸಮಯ ಬದಲಾವಣೆ!

How To Update-ನವೀಕರಣ ಮಾಡಿಕೊಳ್ಳುವುದು ಹೇಗೆ?

ಫಲಾನುಭವಿಗಳು ತಮ್ಮ ಹತ್ತಿರದ 'ಬೆಂಗಳೂರು ಒನ್' ಅಥವಾ 'ಕರ್ನಾಟಕ ಒನ್' ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ, ತಮ್ಮ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಬಯೋಮೆಟ್ರಿಕ್ ನೀಡುವ ಮೂಲಕ ಸುಲಭವಾಗಿ ಖಾತೆಯನ್ನು ಮರು-ನೋಂದಣಿ ಮಾಡಿಕೊಳ್ಳಬಹುದು.

Gruhalakshmi Ineligible Beneficiaries-ಅನರ್ಹರ ಕಾರ್ಡ್‌ಗಳ ರದ್ದತಿ:

ಈಗಾಗಲೇ ಆದಾಯ ತೆರಿಗೆ ಪಾವತಿಸುತ್ತಿದ್ದರೂ ಯೋಜನೆಯ ಲಾಭ ಪಡೆಯುತ್ತಿದ್ದ ಸುಮಾರು 2 ಲಕ್ಷಕ್ಕೂ ಅಧಿಕ ಬಿಪಿಎಲ್ (BPL) ಕಾರ್ಡ್‌ಗಳನ್ನು ಇಲಾಖೆಯು ಎಪಿಎಲ್ (APL) ಕಾರ್ಡ್‌ಗಳಾಗಿ ವರ್ಗಾಯಿಸಿದ್ದು, ಅವರಿಗೆ ಗೃಹಲಕ್ಷ್ಮಿ ಯೋಜನೆ ರದ್ದಾಗಿದೆ.

ಸಾಲದ ಖಾತೆಗೆ ಹಣ ಕಡಿತ ನಿಯಂತ್ರಣ:

ಕೆಲವು ಮಹಿಳೆಯರ ಖಾತೆಗೆ ಬರುತ್ತಿದ್ದ ಗೃಹಲಕ್ಷ್ಮಿ ಹಣ ಅವರ ಹಳೆಯ ಸಾಲಗಳಿಗೆ ಕಡಿತವಾಗುತ್ತಿತ್ತು. ನವೀಕರಣ ಪ್ರಕ್ರಿಯೆಯಿಂದ ಈ ಗೊಂದಲಗಳಿಗೂ ತೆರೆ ಬೀಳಲಿದ್ದು, ಅರ್ಹರ ಕೈ ಸೇರಲಿದೆ.

ಇದನ್ನೂ ಓದಿ: Guest Teachers Recruitment-ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಪ್ರಕಟ!

ಜೀವಿತ ಪ್ರಮಾಣ ಪತ್ರದ ನಿಯಮ ಕೈಬಿಡಲಾಗಿದೆ:

ಸಾರ್ವಜನಿಕರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ಜೀವಿತ ಪ್ರಮಾಣ ಪತ್ರ ಸಲ್ಲಿಸುವ ಕಠಿಣ ನಿಯಮವನ್ನು ಕೈಬಿಟ್ಟು, ಅದರ ಬದಲಾಗಿ ಸುಲಭವಾದ ಬಯೋಮೆಟ್ರಿಕ್ ವ್ಯವಸ್ಥೆ ತರಲಾಗಿದೆ.

ಸ್ವಯಂಚಾಲಿತ ಖಾತೆ ರದ್ದತಿ:

ಸರ್ಕಾರ ನೀಡುವ ನಿಗದಿತ ಅವಧಿಯೊಳಗೆ ಮರು-ನೋಂದಣಿ ಅಥವಾ ನವೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಫಲಾನುಭವಿಗಳ ಖಾತೆಗಳು ಸ್ವಯಂಚಾಲಿತವಾಗಿ (Automatically) ರದ್ದಾಗುತ್ತವೆ.

ಇದನ್ನೂ ಓದಿ: Lake Soil-ಇನ್ಮುಂದೆ ನಿಮ್ಮ ಊರಿನ ಕೆರೆ ಹೂಳು ತೆಗೆಯಲು ಅನುಮತಿ ಕಡ್ಡಾಯ!

"ಮಹಿಳೆಯರು ಗೃಹಲಕ್ಷ್ಮಿ ಹಣ ನಿಲ್ಲುತ್ತದೆ ಎಂದು ಆತಂಕ ಪಡುವ ಅಗತ್ಯವಿಲ್ಲ; ಸದ್ಯಕ್ಕೆ ಯಾರ ಹೆಸರನ್ನೂ ಡಿಲೀಟ್ ಮಾಡುತ್ತಿಲ್ಲ. ಸರ್ಕಾರ ಜಾರಿಗೆ ತರುತ್ತಿರುವುದು ಕೇವಲ 'ಒನ್ ಟೈಮ್ ಬಯೋಮೆಟ್ರಿಕ್' ನಿಯಮವನ್ನಷ್ಟೇ. ನೀವು ಕೇವಲ ಒಂದು ಬಾರಿ ಬಯೋಮೆಟ್ರಿಕ್ ನೀಡಿದರೆ ಸಾಕು, ನಿಮ್ಮ ಖಾತೆಗೆ ಹಣ ಜಮೆ ಆಗುತ್ತಲೇ ಇರುತ್ತದೆ. ನವೀಕರಣ ಪ್ರಕ್ರಿಯೆಯಿಂದ ದೂರ ಉಳಿಯುವ ಖಾತೆಗಳು ಮಾತ್ರ ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳಲಿವೆ."-ಲಕ್ಷ್ಮಿ ಹೆಬ್ಬಾಳ್ಕರ್, ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: