Free Fast Food Training-ಸ್ವಂತ ಫಾಸ್ಟ್ ಫುಡ್ ಬಿಸಿನೆಸ್ ಮಾಡುವ ಕನಸೇ? ಇಲ್ಲಿದೆ ಉಚಿತ ತರಬೇತಿಯ ಸುವರ್ಣಾವಕಾಶ!

May 29, 2026 | Siddesh
Free Fast Food Training-ಸ್ವಂತ ಫಾಸ್ಟ್ ಫುಡ್ ಬಿಸಿನೆಸ್ ಮಾಡುವ ಕನಸೇ? ಇಲ್ಲಿದೆ ಉಚಿತ ತರಬೇತಿಯ ಸುವರ್ಣಾವಕಾಶ!
Share Now:

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ರಸ್ತೆಯಲ್ಲಿರುವ ಇಂಡಸ್ಟ್ರಿಯಲ್ ಏರಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ "ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ" (RSETI) ವತಿಯಿಂದ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಸ್ವಯಂ ಉದ್ಯೋಗವನ್ನು ಕಂಡುಕೊಳ್ಳಲು ಅತ್ಯುತ್ತಮ ಅವಕಾಶವೊಂದನ್ನು ಕಲ್ಪಿಸಿಕೊಡಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ನಿರಂತರ ಬೇಡಿಕೆಯನ್ನು ಹೊಂದಿರುವ ಆಹಾರ ಉದ್ಯಮ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಇಚ್ಛಿಸುವವರಿಗಾಗಿ ವಿಶೇಷವಾಗಿ "ಫಾಸ್ಟ್ ಫುಡ್ ಸ್ಟಾಲ್ ಉದ್ಯಮಿ ತರಬೇತಿ/Free Fast Food Training Application" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ತರಬೇತಿಯು ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ.

ಆಹಾರ ಉದ್ಯಮದಲ್ಲಿ ಯಶಸ್ವಿಯಾಗಲು ಕೇವಲ ರುಚಿಕರ ಅಡುಗೆ(Fast Food Training) ಮಾಡುವುದು ಮಾತ್ರವಲ್ಲದೆ, ವ್ಯವಹಾರವನ್ನು ನಿರ್ವಹಿಸುವ ಕೌಶಲ್ಯವೂ ಅತಿ ಮುಖ್ಯವಾಗಿರುತ್ತದೆ. ಇದನ್ನು ಮನಗಂಡು ಆರ್‌ಸೆಟಿ ಸಂಸ್ಥೆಯು ಅಭ್ಯರ್ಥಿಗಳಿಗೆ 12 ದಿನಗಳ ಕಾಲ ತರಬೇತಿ ಶಿಬಿರವನ್ನು ಆಯೋಜಿಸಿದೆ. ಈ ಅವಧಿಯಲ್ಲಿ ಜನಪ್ರಿಯ ಆಹಾರ ಪದಾರ್ಥಗಳಾದ ಪಾನಿಪುರಿ, ಮಸಾಲಾಪುರಿ, ಗೋಬಿ ಮಂಚೂರಿ, ಸಮೋಸಾ, ಕಚೋರಿ, ನೂಡಲ್ಸ್, ಕೇಕ್, ಪಫ್ಸ್ ಹಾಗೂ ವಿವಿಧ ಸಿಹಿ ತಿಂಡಿಗಳ ತಯಾರಿಕೆಯ ತಾಂತ್ರಿಕ ಕೌಶಲ್ಯಗಳನ್ನು ಪರಿಣಿತರಿಂದ ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಇದರೊಂದಿಗೆ ಗ್ರಾಹಕರ ನಿರ್ವಹಣೆ ಹಾಗೂ ಉದ್ಯಮದ ಸೂಕ್ಷ್ಮತೆಗಳ ಬಗ್ಗೆಯೂ ಅರಿವು ಮೂಡಿಸಲಾಗುತ್ತದೆ.

ಇದನ್ನೂ ಓದಿ: Gruhalakshmi Biometric-ಗೃಹಲಕ್ಷ್ಮಿಯರೇ ಗಮನಿಸಿ: ಇನ್ನು ಮುಂದೆ ಬಯೋಮೆಟ್ರಿಕ್ ಕಡ್ಡಾಯ, ನವೀಕರಿಸದಿದ್ದರೆ ಹಣ ಕಟ್!

ಈ ಮಹತ್ವದ ತರಬೇತಿ ಕಾರ್ಯಕ್ರಮವು ಮುಂಬರುವ ಜೂನ್ 08, 20226 ರಿಂದ ಪ್ರಾರಂಭವಾಗಿ ಜೂನ್ 19, 2026 ರವರೆಗೆ ನಡೆಯಲಿದೆ. ತರಬೇತಿಯ(Food Business Training) ಅವಧಿಯಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಆರ್ಥಿಕ ಹೊರೆಯಾಗದಂತೆ ಉಚಿತ ಊಟ ಮತ್ತು ವಸತಿ ಸೌಕರ್ಯವನ್ನು ಸಂಸ್ಥೆಯ ವತಿಯಿಂದಲೇ ಒದಗಿಸಲಾಗುತ್ತಿರುವುದು ವಿಶೇಷವಾಗಿದೆ. ಈ ತರಬೇತಿಯ ಸದುಪಯೋಗವನ್ನು ಪಡೆದುಕೊಂಡು ಗ್ರಾಮೀಣ ಭಾಗದ ನಿರುದ್ಯೋಗಿ ಯುವಜನತೆ ಸ್ವಾವಲಂಬಿ ಉದ್ಯಮಿಗಳಾಗಿ ಹೊರಹೊಮ್ಮಲು ಇಲಾಖೆಯು ಪ್ರಕಟಣೆಯ ಮೂಲಕ ಕರೆ ನೀಡಿದೆ.

Free Training Details-ತರಬೇತಿಯ ಕುರಿತು ಪ್ರಮುಖ ವಿವರ ಹೀಗಿವೆ:

ಉಚಿತ ಊಟ ಮತ್ತು ವಸತಿ ಸೌಲಭ್ಯ:

ಆಯ್ಕೆಯಾದ ಎಲ್ಲಾ ತರಬೇತಿ ಅಭ್ಯರ್ಥಿಗಳಿಗೆ 12 ದಿನಗಳ ಕಾಲ ಸಂಸ್ಥೆಯ ಆವರಣದಲ್ಲಿಯೇ ಉಚಿತವಾಗಿ ಗುಣಮಟ್ಟದ ಊಟ ಹಾಗೂ ವಸತಿಯ ವ್ಯವಸ್ಥೆಯನ್ನು ಮಾಡಲಾಗುತ್ತದೆ.

ವಯೋಮಿತಿ ಮತ್ತು ಅರ್ಹತೆ:

ಈ ಉದ್ಯಮಶೀಲತಾ ತರಬೇತಿಯಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಕನಿಷ್ಠ 18 ವರ್ಷದಿಂದ ಗರಿಷ್ಠ ೫೦ ವರ್ಷದ ವಯೋಮಾನದೊಳಗಿರಬೇಕು.

ಇದನ್ನೂ ಓದಿ: Free Photography Training-ಕೆನರಾ ಬ್ಯಾಂಕ್ ಆರ್‌ಸೆಟಿ ಸಂಸ್ಥೆಯಿಂದ ಉಚಿತ ಫೋಟೋಗ್ರಫಿ ತರಬೇತಿ! ಜೂನ್ 3 ರೊಳಗೆ ಅರ್ಜಿ ಸಲ್ಲಿಸಿ!

ಬಿ.ಪಿ.ಎಲ್ (BPL) ಅಭ್ಯರ್ಥಿಗಳಿಗೆ ಆದ್ಯತೆ:

ಗ್ರಾಮೀಣ ಭಾಗದ ಬಡತನ ರೇಖೆಗಿಂತ ಕೆಳಗಿರುವ (BPL) ಕುಟುಂಬದ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆಯನ್ನು ನೀಡಲಾಗುವುದು.

Documents-ಅಗತ್ಯ ದಾಖಲಾತಿಗಳ ಸಲ್ಲಿಕೆ:

ತರಬೇತಿಗೆ ಬರುವಾಗ ಅಭ್ಯರ್ಥಿಗಳು ಕಡ್ಡಾಯವಾಗಿ ನಾಲ್ಕು ಪಾಸ್‌ಪೋರ್ಟ್ ಸೈಜ್ ಫೋಟೋಗಳು, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್‌ಗಳ ಮೂಲ ಪ್ರತಿ ಹಾಗೂ ಧೃಢೀಕೃತ ನಕಲು ಪ್ರತಿಯನ್ನು ತರಬೇಕಿರುತ್ತದೆ.

ಇದನ್ನೂ ಓದಿ: Guest Teachers Recruitment-ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 51 ಸಾವಿರ ಅತಿಥಿ ಶಿಕ್ಷಕರ ನೇಮಕಾತಿಗೆ ಆದೇಶ ಪ್ರಕಟ!

Registration Link-ಅರ್ಜಿ ಸಲ್ಲಿಸಿ ನೋಂದಣಿ ಮಾಡುವುದು ಹೇಗೆ?

ಆಸಕ್ತರು ಪೋಸ್ಟರ್‌ನಲ್ಲಿ ನೀಡಿರುವ ಅಧಿಕೃತ ಕ್ಯೂಆರ್ (QR) ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಅತ್ಯಂತ ಸುಲಭವಾಗಿ ತಮ್ಮ ಮೊಬೈಲ್‌ನಿಂದಲೇ ಪ್ರವೇಶಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅಥವಾ ಈ ಕೆಳಗಿನ ವಿಧಾನವನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Step-1: ಮೊದಲಿಗೆ ಈ Register Now ಲಿಂಕ್ ಮೇಲೆ ಕ್ಲಿಕ್ ಮಾಡಿ ಅಧಿಕೃತ ಗೂಗಲ್ ಪಾರ್ಮ್ ಭೇಟಿ ಮಾಡಿ.

Step-2: ಬಳಿಕ ಇಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ ಕೊನೆಯಲ್ಲಿ "Submit" ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.

ಇದನ್ನೂ ಓದಿ: Lake Soil-ಇನ್ಮುಂದೆ ನಿಮ್ಮ ಊರಿನ ಕೆರೆ ಹೂಳು ತೆಗೆಯಲು ಅನುಮತಿ ಕಡ್ಡಾಯ!

Contact Number-ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ತರಬೇತಿಯ ಕುರಿತು ಹೆಚ್ಚಿನ ಮಾಹಿತಿ ಅಥವಾ ಮಾರ್ಗದರ್ಶನಕ್ಕಾಗಿ ಆಸಕ್ತರು ಸಂಸ್ಥೆಯ ಅಧಿಕೃತ ದೂರವಾಣಿ ಸಂಖ್ಯೆಗಳಾದ 9449860007, 9538281989, 9916783825, 8880444612 ಅಥವಾ 9620962004 ಅನ್ನು ನೇರವಾಗಿ ಸಂಪರ್ಕಿಸಬಹುದಾಗಿದೆ.

"ಗ್ರಾಮೀಣ ಭಾಗದ ಯುವಜನತೆಯಲ್ಲಿ ಅಡಗಿರುವ ಉದ್ಯಮಶೀಲತೆಯ ಕೌಶಲ್ಯಗಳನ್ನು ಹೊರತಂದು, ಅವರಿಗೆ ಸ್ವಯಂ ಉದ್ಯೋಗದ ದಾರಿ ತೋರಿಸುವುದೇ ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಇಂದಿನ ಆಧುನಿಕ ಯುಗದಲ್ಲಿ ಫಾಸ್ಟ್ ಫುಡ್ ವ್ಯವಹಾರವು ಅತ್ಯಂತ ಲಾಭದಾಯಕ ಹಾಗೂ ಸದಾ ಬೇಡಿಕೆಯಲ್ಲಿರುವ ಉದ್ಯಮವಾಗಿದೆ. ಆಸಕ್ತ ಮತ್ತು ಅರ್ಹ ಯುವಜನರು ಯಾವುದೇ ಶುಲ್ಕವಿಲ್ಲದ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಂಡು, ಸೂಕ್ತ ದಾಖಲೆಗಳೊಂದಿಗೆ ನಿಗದಿತ ಸಮಯದೊಳಗೆ ಅರ್ಜಿ ಸಲ್ಲಿಸಿ ತಮ್ಮ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬೇಕಾಗಿ ವಿನಂತಿ." ನಿರ್ದೇಶಕರು,ಕೆನರಾ ಬ್ಯಾಂಕ್ ಆರ್‌ಸೆಟಿ ಕೇಂದ್ರ,ಕುಮಟಾ

WhatsApp Group Join Now
Telegram Group Join Now
Siddesh

Siddesh is the founder of KrushikaMitra.com, a trusted Kannada platform dedicated to agriculture, government schemes, student scholarships, and rural development. With a passion for empowering farmers and rural communities, he has published over 2000+ informative articles since 2019, helping thousands of readers stay updated and informed.

Visit Website
Share Now: